ಪ್ರೀತಿಸಿ ಮದುವೆಯಾದ 35ರ ದಲಿತ ಶಾಸಕ, 19ರ ಬ್ರಾಹ್ಮಣ ಯುವತಿ

First Published 6, Oct 2020, 8:18 PM

ಚೆನ್ನೈ (ಅ. 6)  ಕಲ್ಲಕುರಿಚಿ ಎಐಎಡಿಎಂಕೆಯ 35 ವರ್ಷದ ದಲಿತ ಶಾಸಕ ಹಾಗೂ 19 ವರ್ಷದ ಬ್ರಾಹ್ಮಣ ಯುವತಿ ಕಲ್ಯಾಣ ತಮಿಳುನಾಡಿನಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಅಂತರ್ಜಾತಿ ವಿವಾಹದ ನಂತರ ನನ್ನ ಪುತ್ರಿ ಸೌಂದರ್ಯಳನ್ನು ಶಾಸಕ ಪ್ರಭು ಕಡೆಯವರು ಅಪಹರಿಸಿದ್ದಾರೆ ಎಂದು ವಧುವಿನ ತಂದೆ ಎಸ್ ಸ್ವಾಮಿನಾಥನ್(48) ಆರೋಪಿಸಿದ್ದಾರೆ.

ಯುವತಿ ತಂದೆ  ದೇವಾಲಯದ ಅರ್ಚಕ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನ ಮಾಡಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದೀಗ ನವ ದಂಪತಿ ವಿಡಿಯೋ ಸಂದೇಶ ನೀಡಿದ್ದು, ನಾವು ಪರಸ್ಪರ ಪ್ರೇಮಿಸಿದ್ದೆವು. ಇದು ಮೋಸದಿಂದ ಆಗಿರುವ ಮದುವೆ ಏನಲ್ಲ ಎಂದಿದ್ದಾರೆ.

ವಧು ಸೌಂದರ್ಯ (19) ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕಲ್ಲಕುರಿಚಿ ಕ್ಷೇತ್ರವನ್ನು ಪ್ರತಿನಿಧಿಸುವ ತಿಯಾಗದುರಗಂ ನಿವಾಸಿ ಪ್ರಭು ಅವರು ಬಿ ಟೆಕ್ ಪದವೀಧರರಾಗಿದ್ದಾರೆ. ಅಕ್ಟೋಬರ್ 5ರಂದು ಸೋಮವಾರ ಬೆಳಗ್ಗೆ ಪ್ರಭು ಅವರ ಮನೆಯಲ್ಲಿ ಇಬ್ಬರು ಮದುವೆಯಾಗಿದ್ದಾರೆ.

ತಿರುಚಂಗೋಡಿನ ಆರ್ಟ್ಸ್ ಕಾಲೇಜಿನಲ್ಲಿ 2ನೇ ಪಿಯುಸಿ ಓದುತ್ತಿರುವ ನನ್ನ ಮಗಳು ಸೌಂದರ್ಯಳನ್ನು ಮರಳು ಮಾಡಿ, ಪ್ರೇಮಿಸುವ ನಾಟಕವಾಡಿ ಶಾಸಕ ಪ್ರಭು ನನ್ನ ಮಗಳನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ಅಕ್ಟೋಬರ್ 01 ರಂದು  ತಂದೆ ಸ್ವಾಮಿನಾಥನ್ ಆರೋಪಿಸಿದ್ದರು. ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ಪೊಲೀಸರ ಮುಂದೆ ಎಲ್ಲವನ್ನು ಹೇಳಲು ಸಾಧ್ಯವಿಲ್ಲ. ನನಗೆ  ಜೀಓವ ಬೆದರಿಕೆ ಇದೆ ಎಂದು ಹೇಳಿದ್ದರು.  ವಧು ಬಾಲಕಿಯಾಗಿದ್ದಾಗಲಿಂದಲೇ ಇಬ್ಬರ ನಡುವೆ ಪ್ರೀತಿ ಇತ್ತು ಎಂಬ ವಿಚಾರವೂ ಬಹಿರಂಗವಾಗಿದೆ.

ಪ್ರಭು ಮತ್ತು  ವಧುವಿನ ಕುಟುಂಬಕ್ಕೆ ಮೊದಲಿನಿಂದಲೂ ಪರಿಚಯ ಇತ್ತು. ಮನೆಯವರ ಸಲುಗೆಯನ್ನು ಶಾಸಕ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ಸ್ವಾಮಿ ಅವರ ಆರೋಪ. ನನ್ನ ಮಗಳು ಮದುವೆಗೆ ಸಿದ್ಧವಾಗಿಲ್ಲ. ಇಬ್ಬರ ನಡುವೆ ಹದಿನೇಳು ವರ್ಷದ ಅಂತರವಿದೆ ಎಂದು ಸ್ವಾಮಿ ಹೇಳಿದ್ದಾರೆ. ಇಬ್ಬರು ವಯಸ್ಕರಿದ್ದೇವೆ. ಪ್ರೇಮಿಸಿ ಮದುವೆಯಾಗಿದ್ದೇವೆ ಎಂದು ದಂಪತಿ ವಿಡಿಯೋ ಬಿಡುಗಡೆ ಮಾಡಿದೆ.

loader