ಸಹೋದ್ಯೋಗಿ ಜೊತೆಗೆ ಅಕ್ರಮ ಸಂಬಂಧ: ಡಿಎಸ್ಪಿಗೆ ಕಾನ್‌ಸ್ಟೇಬಲ್ ಆಗಿ ಹಿಂಬಡ್ತಿ!
ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಡೆಪ್ಯುಟಿ ಸೂಪರಿಂಟೆಂಡೆಂಟ್ ಒಬ್ಬರನ್ನು ಉತ್ತರಪ್ರದೇಶ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಿ ಆದೇಶ ಹೊರಡಿಸಿದೆ.
ಲಖನೌ (ಜೂ.24): ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಡೆಪ್ಯುಟಿ ಸೂಪರಿಂಟೆಂಡೆಂಟ್ ಒಬ್ಬರನ್ನು ಉತ್ತರಪ್ರದೇಶ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಿ ಆದೇಶ ಹೊರಡಿಸಿದೆ. ಕೌಟುಂಬಿಕ ಕಾರಣಕ್ಕೆ 2021ರ ಜು.6ರಂದು ಪೊಲೀಸ್ ವರಿಷ್ಠಾಧಿಕಾರಿಗಳಿಂದ ರಜೆ ಪಡೆದಿದ್ದ ಡಿಎಸ್ಪಿ ಕ್ರಿಪಾ ಶಂಕರ್ ಕನೌಜಿಯಾ ಮಹಿಳಾ ಪೇದೆ ಜೊತೆ ಹೋಟೆಲ್‌ಗೆ ತೆರಳಿದ್ದರು. ಈ ನಡುವೆ ಪತಿಯನ್ನು ಸಂಪರ್ಕಿಸಲಾಗದೇ ಅವರ ಪತ್ನಿ ನೀಡಿದ ದೂರಿನ ಅನ್ವಯ ಹುಡುಕಾಟ ನಡೆಸಿದಾಗ ಕ್ರಿಪಾ ಶಂಕರ್ ಹೋಟೆಲ್‌ನಲ್ಲಿ ಪೇದೆ ಜೊತೆ ಸಿಕ್ಕಿಬಿದ್ದಿದ್ದರು. ಆ ಪ್ರಕರಣದಲ್ಲಿ ಅವರು ದೋಷಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಇದೀಗ ಅವರಿಗೆ ಹಿಂಬಡ್ತಿ ನೀಡಲಾಗಿದೆ.
ಡಿಎಸ್ಪಿ ಕೃಪಾ ಶಂಕರ್ ಕನೌಜಿಯ ಅವರು ಮೂರು ವರ್ಷಗಳ ಹಿಂದೆ ಮಹಿಳಾ ಪೇದೆಯೊಂದಿಗೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದರು. ಕನೌಜಿಯಾ ಅವರನ್ನು ಈಗ ಪ್ರಾಂತೀಯ ಪಿಎಸಿ (ಪಿಎಸಿ) ಗೋರಖ್‌ಪುರ ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ ಆಗಿ ನಿಯೋಜಿಸಲಾಗಿದೆ. ಜುಲೈ 6, 2021 ರಂದು, ಕನೌಜಿಯಾದ ಉನ್ನಾವೋದಲ್ಲಿನ ಅಂದಿನ ಸರ್ಕಲ್ ಆಫೀಸರ್ (CO) ಅವರು ಕೌಟುಂಬಿಕ ಕಾರಣಗಳಿಗಾಗಿ ಆಗಿನ ಉನ್ನಾವೋ ಪೊಲೀಸ್ ಸೂಪರಿಂಟೆಂಡೆಂಟ್ (SP) ಯಿಂದ ರಜೆಯನ್ನು ಕೋರಿದರು. ಆದರೆ ಅಂದು ಮನೆಗೆ ಹೋಗುವ ಬದಲು ಕಾನ್ಪುರ ಬಳಿಯ ಹೋಟೆಲ್‌ಗೆ ಮಹಿಳಾ ಕಾನ್‌ಸ್ಟೆಬಲ್‌ನೊಂದಿಗೆ ಹೋಗಿದ್ದರು. ಅದಕ್ಕೂ ಮುನ್ನ ತನ್ನ ಖಾಸಗಿ ಮತ್ತು ಅಧಿಕೃತ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಇತ್ತ ಅವರ ಪತ್ನಿ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಕನೆಕ್ಟ್ ಆಗಿರಲಿಲ್ಲ. ಸ್ವಿಚ್ ಆಫ್ ಬರುತ್ತಿತ್ತು. ಇದರಿಂದಾಗ ಸಹಾಯಕ್ಕಾಗಿ ಪತ್ನಿ ಉನ್ನಾವೊ ಎಸ್‌ಪಿಗೆ ಕೇಳಿಕೊಂಡಿದ್ದರು. ಅದರಂತೆ ಪೊಲೀಸ್ ಟೀಂ ಮೊಬೈಲ್ ಲೋಕೇಶನ್ ಕಾನ್ಪುರದ ಹೋಟೆಲ್‌ನಲ್ಲಿ ಸಿಒ ಅವರ ಮೊಬೈಲ್ ನೆಟ್‌ವರ್ಕ್ ಕೊನೆಯದಾಗಿ ಸಕ್ರಿಯವಾಗಿರುವುದನ್ನು ಕಂಡುಹಿಡಿದಿದ್ದರು. ಪೊಲೀಸ್ ತಂಡ ಹೋಟೆಲ್‌ಗೆ ಬಂದು ನೋಡಿದಾಗ ಶಾಕ್ ಆಗಿದ್ದರು. ಸಹೋದ್ಯೋಗಿಯೊಂದಿಗೆ ಇಬ್ಬರು ಸಿಕ್ಕಿಬಿದ್ದಿದ್ದರು.