ಸಮುದ್ರದ ದೈತ್ಯ ಅಲೆಗಳು ಕಲ್ಲುಗಳಿಗೆ ಅಪ್ಪಳಿಸುವ ಸಮಯದಲ್ಲಿ ಫೋಟೋ ತೆಗೆದುಕೊಳ್ಳಲು ನಿಂತಿದ್ದ ದಂಪತಿಗಳು ನೀರುಪಾಲಾಗಿದ್ದು, ಪತ್ನಿ ಸಾವು ಕಂಡ ಘಟನೆ ನಡೆದಿದೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ.
ಮುಂಬೈ (ಜು.16): ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಸಮುದ್ರದಲ್ಲಿ ಬಂಡೆಯ ಮೇಲೆ ಕುಳಿತಿದ್ದ ದಂಪತಿಗಳು ಅಲೆಗಳ ಹೊಡೆತಕ್ಕೆ ನೀರುಪಾಲಾಗಿರುವ ದಾರುಣ ಘಟನೆ ನಡೆದಿದೆ. ಅಪಘಾತದಲ್ಲಿ ಪತ್ನಿ ಸಾವು ಕಂಡಿದ್ದಾಳೆ. 35 ವರ್ಷದ ಮುಖೇಶ್‌ನನ್ನು ನೀರುಪಾಲಾಗುವ ಸಾಧ್ಯತೆಯಿಂದ ರಕ್ಷಣೆ ಮಾಡಲಾಗಿದ್ದರೂ, ಆತನ ಪತ್ನಿ 32 ವರ್ಷದ ಜ್ಯೋತಿ ಸಮುದ್ರ ಪಾಲಾಗಿದ್ದಾಳೆ. ಕಳೆದ ಭಾನುವಾರ ದಂಪತಿ ತಮ್ಮ ಮಕ್ಕಳು ಮತ್ತು ಕುಟುಂಬ ಸದಸ್ಯರೊಂದಿಗೆ ವಿಹಾರಕ್ಕೆಂದು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮಹಿಳೆ ನೀರಿನಲ್ಲಿ ತೇಲಿಕೊಂಡು ಹೋಗುವಾಗ ಮಕ್ಕಳು ‘ಮಮ್ಮಿ-ಮಮ್ಮಿ’ ಎಂದು ಕೂಗುತ್ತಲೇ ಇದ್ದರು. ಈ ಸಂಪೂರ್ಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಇದೇ ವೇಳೆ ಇಂದು ಮುಂಬೈನ ಮಾರ್ವ್ ಬೀಚ್ ನಲ್ಲಿ ಸ್ನಾನಕ್ಕೆ ತೆರಳಿದ್ದ ಐವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಎಲ್ಲಾ ಹುಡುಗರು 12 ರಿಂದ 16 ವರ್ಷ ವಯಸ್ಸಿನವರಾಗಿದ್ದರು. ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ.
ಚೌಪಾಟಿಯಲ್ಲಿ ಜುಹು ಬೀಚ್‌ಗೆ ಭಾನುವಾರ ಇಡೀ ಕುಟುಂಬ ಪ್ರವಾಸಕ್ಕೆ ತೆರಳಿತ್ತು. ಆದರೆ, ಭಾರೀ ಮಳೆಯಿಂದ ಸಮುದ್ರದಲ್ಲಿ ದೈತ್ಯಕಾರದ ಅಲೆಗಳು ಏಳುತ್ತಿದ್ದ ಕಾರಣಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಈ ವೇಳೆ ಅಲ್ಲಿಂದ ವಾಪಾಸ್ ಬಂದಿದ್ದ ಕುಟುಂಬ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ಗೆ ಆಗಮಿಸಿತ್ತು. ಬಾಂದ್ರಾ ಕೋಟೆಯ ಬಳಿ ಬಂದಿದ್ದ ಇಡೀ ಕುಟುಂಬ, ಸಮುದ್ರದ ಸನಿಹವಿದ್ದ ಬಂಡೆಗಳ ಮೇಲೆ ಕುಳಿತು ಫೋಟೋ ತೆಗೆದುಕೊಳ್ಳಲು ಆರಂಭಿಸಿದ್ದರು.
ಸಮುದ್ರದಲ್ಲಿ ಮುಖೇಶ್ ಹಾಗೂ ಜ್ಯೋತಿ ಸ್ವಲ್ಪ ದೂರ ಹೋಗಿ ಒಟ್ಟಿಗೆ ಕುಳಿತುಕೊಂಡು ಸಮುದ್ರದ ಅಲೆಯನ್ನು ಸಂಭ್ರಮಿಸಿದ್ದರು. ಬಂಡೆಯ ಮೇಲೆ ಕುಳಿತುಕೊಂಡು ಅಲೆಯ ಹೊಡೆತವನ್ನು ಇವರು ಆನಂದಿಸುತ್ತಿದ್ದರೆ. ಸ್ವಲ್ಪ ದೂರದಲ್ಲಿದ್ದ ಇವರ ಮಕ್ಕಳು ಫೋಟೋ ಹಾಗೂ ವಿಡಿಯೋ ಮಾಡುವುದರಲ್ಲಿ ನಿರತರಾಗಿದ್ದರು. ವಿಡಿಯೋ ಫೋಟೋ ಕ್ಲಿಕ್ ಮಾಡುತ್ತಿದ್ದ ಕುಟುಂಬದವರೂ ಕೂಡ ದೊಡ್ಡ ಅಲೆಗಳು ಬರುತ್ತಿವೆ, ತೀರಕ್ಕೆ ಬನ್ನಿ ಎಂದು ಹೇಳುತ್ತಿದ್ದರೂ ದಂಪತಿಗಳು ಮಾತ್ರ ಕಲ್ಲಿನ ಮೇಲೆ ಕುಳಿತಿದ್ದರು. ಈ ಹಂತದಲ್ಲಿಯೇ ಬಂದ ದೈತ್ಯ ಅಲೆಯ ಹೊಡೆತಕ್ಕೆ ಇಬ್ಬರೂ ನೀರಿಗೆ ಬಿದ್ದಿದ್ದಾರೆ.
ಆಸ್ಟ್ರೇಲಿಯಾದ ರಾತ್ರಿ ಆಕಾಶದಲ್ಲಿ ಕಂಡ ಚಂದ್ರಯಾನ-3, ಫೋಟೋ ವೈರಲ್!
ನೀರುಪಾಲಾಗಿ ಹೋಗುವ ಹಂತದಲ್ಲಿದ್ದ ವೇಳೆ ಮುಖೇಶ್ ಪತ್ನಿ ಜ್ಯೋತಿಯ ಸೀರೆಯನ್ನು ಹಿಡಿದು ಆಕೆಯನ್ನು ಎಳೆಯಲು ಪ್ರಯತ್ನ ಪಟ್ಟಿದ್ದಾರೆ. ಆದರೆ, ಅಲೆಯ ರಭಸ ಎಷ್ಟೆತ್ತೆಂದರೆ, ಕ್ಷಣಾರ್ಧದಲ್ಲಿ ಜ್ಯೋತಿ ಸಮುದ್ರ ಪಾಲಾಗಿದ್ದರು. ಈ ಹಂತದಲ್ಲಿ ಅಲ್ಲಿಯೇ ಇದ್ದ ಇತರ ವ್ಯಕ್ತಿಗಳು ಮುಖೇಶ್‌ನ ಕಾಲುಗಳನ್ನು ಹಿಡಿದು ಆತನನ್ನು ನೀರಿನಿಂದ ಮೇಲೆತ್ತಲು ಯಶಸ್ವಿಯಾಗಿದ್ದಾರೆ.
ಹರ್ಯಾಣಿ ಸಾಂಗ್‌ಗೆ ಡಾನ್ಸ್ ಮಾಡಿದ ಸೋನಿಯಾ ಗಾಂಧಿ, ವಿಡಿಯೋ ವೈರಲ್!
ಅಲ್ಲಿದ್ದ ಇತರರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಕೋಸ್ಟ್ ಗಾರ್ಡ್ ಸೋಮವಾರ ಜ್ಯೋತಿ ಅವರ ಶವವನ್ನು ಪತ್ತೆ ಮಾಡಿದೆ.
