ದೇಶೀಯವಾಗಿ ನಿರ್ಮಿತ ‘ತಪಸ್‌ 201 ಡ್ರೋನ್‌’ ಹೊಸದೊಂದು ಮೈಲುಗಲ್ಲು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಸಂಚಾರದ ವೇಳೆ ಡ್ರೋನ್‌ನ ನಿಯಂತ್ರಣವನ್ನು ಭೂಕೇಂದ್ರದಿಂದ ದೂರದ ಐಎನ್‌ಎಸ್‌ ಸುಭದ್ರ ನೌಕೆಗೆ ಯಶಸ್ವಿಯಾಗಿ ವರ್ಗಾಯಿಸುವ ಪ್ರಕ್ರಿಯೆಯನ್ನು ಕಾರವಾರ ನೌಕಾ ನೆಲೆಯ ಬಳಿ ಯಶಸ್ವಿಯಾಗಿ ನಡೆಸಲಾಗಿದೆ.

ಬೆಂಗಳೂರು: ದೇಶೀಯವಾಗಿ ನಿರ್ಮಿತ ‘ತಪಸ್‌ 201 ಡ್ರೋನ್‌’ ಹೊಸದೊಂದು ಮೈಲುಗಲ್ಲು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಸಂಚಾರದ ವೇಳೆ ಡ್ರೋನ್‌ನ ನಿಯಂತ್ರಣವನ್ನು ಭೂಕೇಂದ್ರದಿಂದ ದೂರದ ಐಎನ್‌ಎಸ್‌ ಸುಭದ್ರ ನೌಕೆಗೆ ಯಶಸ್ವಿಯಾಗಿ ವರ್ಗಾಯಿಸುವ ಪ್ರಕ್ರಿಯೆಯನ್ನು ಕಾರವಾರ ನೌಕಾ ನೆಲೆಯ ಬಳಿ ಯಶಸ್ವಿಯಾಗಿ ನಡೆಸಲಾಗಿದೆ.

ಜೂ.16ರಂದು ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆಯಲ್ಲಿನ (Challalere) ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ನಿಂದ ಬೆಳಗ್ಗೆ 7.35ಕ್ಕೆ ಹಾರಾಟ ಆರಂಭಿಸಿದ್ದ ತಪಸ್‌ ಡ್ರೋನ್‌, 20 ಸಾವಿ​ರ ಅಡಿ ಎತ್ತರದಲ್ಲಿ 3 ಗಂಟೆ 3 ನಿಮಿಷ ಹಾರಾಟ ನಡೆಸಿದೆ. ಮೊದಲಿಗೆ ಈ ಡ್ರೋನ್‌ ನಿಯಂತ್ರಣವನ್ನು ಭೂ ಕೇಂದ್ರದ ಮೂಲಕ ನಿರ್ವಹಿಸಿ ಬಳಿಕ ಕಾರವಾರ ನೌಕಾನೆಲೆಯಿಂದ 148 ಕಿ.ಮೀ ದೂರದಲ್ಲಿ ಇದ್ದ ಐಎಸ್‌ಎಸ್‌ ಸುಭದ್ರ ಯುದ್ಧನೌಕೆಗೆ (WarShips) ವರ್ಗಾಯಿಸಲಾಗಿತ್ತು. ಈ ವೇಳೆ ನೌಕೆಯು ಸುಮಾರು 40 ನಿಮಿಷಗಳ ಕಾಲ ಡ್ರೋನ್‌ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. ಈ ಯಶಸ್ವಿ ಪ್ರಯೋಗದ ಬಳಿಕ ಡ್ರೋನ್‌ ಮರಳಿ ಚಳ್ಳಕೆರೆ ಕೇಂದ್ರಕ್ಕೆ ಬಂದಿಳಿಯಿತು. ಭಾರತೀಯ ನೌಕಾಪಡೆಯ (Indian Navy) ಸಹಯೋಗದಲ್ಲಿ ಈ ಯಶಸ್ವಿ ಪ್ರಯೋಗ ನಡೆಸಲಾಯಿತು ಎಂದು ಡಿಆರ್‌ಡಿಒ ಮಾಹಿತಿ ನೀಡಿದೆ.

Bengaluru- ಸಂಚಾರ ದಟ್ಟಣೆ ತಗ್ಗಿಸಲು ಡ್ರೋನ್‌ ಮೊರೆಹೋದ ಪೊಲೀಸರು

ತಪಸ್‌ 201 ಡ್ರೋನ್‌, ಸಮುದ್ರಮಟ್ಟದಿಂದ 30 ಸಾವಿ​ರ ಅಡಿ ಎತ್ತರದಲ್ಲಿ ನಿರಂತರವಾಗಿ 24 ಗಂಟೆ ಹಾರಾಡುವ ಸಾಮರ್ಥ್ಯ ಹೊಂದಿದೆ. ಗೂಢಚರ, ಕಣ್ಗಾವಲು, ದಾಳಿ ಮೊದಲಾದ ಕೆಲಸಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಡ್ರೋನ್‌ ಅಭಿವೃದ್ಧಿ ಪಡಿಸಲಾಗಿದೆ. ಇದು 350 ಕೆಜಿ ತೂಕದ ವಸ್ತುಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಎದುರಾಳಿಗೆ ನಡುಕ ತಂದ ನಿರ್ಧಾರ, ಭಾರತಕ್ಕೆ ಬರಲಿದೆ ವಿಶ್ವದ ಅತ್ಯಂತ ಘಾತಕ ಡ್ರೋನ್‌?