ಬಸ್ ಡ್ರೈವರ್ ಒಬ್ಬರು ಇತ್ತೀಚೆಗೆ ಬ್ಯುಸಿ ರಸ್ತೆ ಮಧ್ಯೆಯೇ ಬಸ್ ಅನ್ನು ನಿಲ್ಲಿಸಿದ್ರು. ಬಳಿಕ ನೋಡಿದಾಗ ಅವರು ರಸ್ತೆಯ ಇನ್ನೊಂದು ಬದಿಯ ಟೀ ಶಾಪ್‌ವೊಂದಕ್ಕೆ ಹೋಗಿ ಒಂದು ಕಪ್ ಟೀ ಹಿಡಿದುಕೊಂಡು ಬಂದಿರುವುದು ತಿಳಿದುಬಂದಿದೆ. ಟೀ ಕುಡಿಯಲು ಟ್ರಾಫಿಕ್ ಜಾಮ್ ಅನ್ನೇ ಮಾಡಿದ್ದಾರೆ.
ಕಾಫಿ (Coffee), ಟೀ (Tea) ಮುಂತಾದ ಪಾನೀಯಗಳ (Beverages) ಅಭ್ಯಾಸ (Hobby) ಒಮ್ಮೆ ಅಂಟಿಕೊಂಡರೆ ಅದನ್ನು ಬಿಡುವುದು ಕಷ್ಟ. ನಾವೆಲ್ಲೇ ಇರಲಿ, ಎಷ್ಟೇ ಬ್ಯುಸಿ ಇರಲಿ, ಕುಡಿಯಲೇ ಬೇಕು ಅನ್ಸುತ್ತೆ. ಇದೇ ರೀತಿ, ಟೀ ಪ್ರಿಯರು (Tea Lovers), ಟೀ ಅನ್ನೋದು ಕೇವಲ ಡ್ರಿಂಕ್ ಅಲ್ಲ, ಅದು ಒಂದು ಎಮೋಷನ್ (Emotion) ಎಂದೂ ಹೇಳ್ತಾರೆ. ದೇಶಾದ್ಯಂತ ಅನೇಕ ಜನತೆ ಇದನ್ನು ಇಷ್ಟ ಪಡ್ತಾರೆ. ಬಿಸಿ ಟೀ ಕುಡಿಯುತ್ತಾ ಗೆಳೆಯರೊಂದಿಗೆ ಅಥವಾ ಕುಟುಂಬದೊಂದಿಗೆ ಹರಟೆ ಹೊಡೆಯವುದು ಹಲವರಿಗೆ ನೆಚ್ಚಿನ ಅಭ್ಯಾಸವೂ ಆಗಿರುತ್ತದೆ. ಅದರೆ, ಟೀ ಕುಡಿಯಲು ರಸ್ತೆಯನ್ನೇ ಬ್ಲಾಕ್ ಮಾಡಿ ಟ್ರಾಫಿಕ್ ಜಾಮ್ (Traffic Jam) ಅವಾಂತರ ಸೃಷ್ಟಿಸಿದರೆ ಹೇಗಿರುತ್ತದೆ..? ಇತ್ತೀಚೆಗೆ ಇಂತದ್ದೊಂದು ಘಟನೆ ನಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ ನೋಡಿ..
ಬಸ್ ಡ್ರೈವರ್ ಒಬ್ಬರು ಇತ್ತೀಚೆಗೆ ಬ್ಯುಸಿ ರಸ್ತೆ ಮಧ್ಯೆಯೇ ಬಸ್ ಅನ್ನು ನಿಲ್ಲಿಸಿದ್ರು. ಬಳಿಕ ನೋಡಿದಾಗ ಅವರು ರಸ್ತೆಯ ಇನ್ನೊಂದು ಬದಿಯ ಟೀ ಶಾಪ್‌ವೊಂದಕ್ಕೆ ಹೋಗಿ ಒಂದು ಕಪ್ ಟೀ ಹಿಡಿದುಕೊಂಡು ಬಂದಿರುವುದು ತಿಳಿದುಬಂದಿದೆ. ಟೀ ಕುಡಿಯಲು ಟ್ರಾಫಿಕ್ ಜಾಮ್ ಅನ್ನೇ ಮಾಡಿದ್ದಾರೆ ನೋಡಿ.. ಇದನ್ನು ಕೆಲವರು ವಿಡಿಯೋವನ್ನೂ ಮಾಡಿದ್ದು, ಈ ವಿಡಿಯೋ (Video) ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ (Twitter) ವೈರಲ್ (Viral) ಆಗಿದೆ.
ಇದನ್ನು ಓದಿ: ಹಿಮಪಾತಕ್ಕೆ ಶೋ ಪೀಸ್‌ನಂತಾದ ಕಾರ್ ವಾಶಿಂಗ್ ಸೆಂಟರ್: ವಿಡಿಯೋ ವೈರಲ್
ರಸ್ತೆಬದಿಯ ಟೀ ಸ್ಟಾಲ್ ಒಂದರಲ್ಲಿ ಜನ ಟೀ ಕುಡೀತಿರೋದನ್ನು ಈ ವಿಡಿಯೋ ಕ್ಲಿಪ್ ತೋರಿಸುತ್ತದೆ. ಅಲ್ಲದೆ, ರಸ್ತೆಯ ಇನ್ನೊಂದು ಬದಿ ಡಿವೈಡರ್ ಸನಿಹದಲ್ಲಿ ಹಾಗೂ ರಸ್ತೆ ಮಧ್ಯದಲ್ಲಿ ಕಿತ್ತಳೆ ಬಣ್ಣದ ಬಸ್‌ವೊಂದು ನಿಂತಿರುವುದು ಕಾಣಿಸುತ್ತದೆ. ಆದರೆ, ಆ ಬಸ್‌ನಲ್ಲಿ ಚಾಲಕರೇ ಇಲ್ಲ ಎಂಬುದನನ್ಉ ನೋಡಬಹುದು. ಬಳಿಕ, ಆ ಬಸ್‌ನಿಂದಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುವುದನ್ನೂ ವಿಡಿಯೋ ತೆಗೆದವರು ತೋರಿಸುತ್ತಾರೆ.
ಬಳಿಕ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬರು ಓಡಿ ಬಂದು ಬಸ್ ಅನ್ನು ಅಂದ್ರೆ ಚಾಲಕರ ಸೀಟನ್ನು ಹತ್ತುತ್ತಾರೆ. ಬಳಿಕ, ಅವರೇ ಬಸ್ ಡ್ರೈವರ್ ಎಂಬುದು ನಮಗೆ ಗೊತ್ತಾಗುತ್ತದೆ. ಅವರೇ ಆ ಬಸ್ ಅನ್ನು ಅಲ್ಲಿ ಪಾರ್ಕ್ ಮಾಡಿ ಜಾಮ್ ಸೃಷ್ಟಿಸಿದ್ದಾರೆ. ಹಾಗೆ, ಅವರ ಕೈಯಲ್ಲಿ ಟೀ ಕಪ್ ಸಹ ಕಂಡುಬಂದಿದೆ. ಇದನ್ನು ನೋಡಿದ ನೆಟ್ಟಿಗರು ಇವ ಎಂಥಾ ಟೀ ಪ್ರಿಯ ಎಂದು ಹೇಳಿದ್ದಾರೆ. ಹಾಗೆ, ಹಲವರು ಆ ಬಸ್ ಡ್ರೈವರ್ ಕಾಲೆಳೆದಿದ್ದರೆ, ಹಲವರು ಟ್ರಾಫಿಕ್ ಜಾಮ್ ಉಂಟು ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕವಿತೆಯ ಮೂಲಕ ಪ್ರಯಾಣಿಕರನ್ನು ಸ್ವಾಗತಿಸಿದ ಸ್ಪೈಸ್‌ಜೆಟ್ ಪೈಲಟ್: ವಿಡಿಯೋ ವೈರಲ್
ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ಹಲವರು ಕಮೆಂಟ್‌ಗಳ ಮೂಲಕ ಬಸ್ ಚಾಲಕನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೈಕಿ ಬಳಕೆದಾರರೊಬ್ಬರು, ಆ ಬಸ್ ಚಾಲಕನ ಲೈಸೆನ್ಸ್ ಅನ್ನು ಕೆಲ ಕಾಲ ರದ್ದು ಮಾಡಿ. ಇಂತಹವರಿಗೆ ಶಿಕ್ಷೆ ಒಡದೆ ಹಾಗೇ ಬಿಟ್ಟರೆ, ಇಂತಹ ಘಟನೆಗಳು ಹೆಚ್ಚಾಗಿ ಮರುಕಳಿಸುತ್ತವೆ. ನಾವು ಇದನ್ನು ಮೀಮ್ಸ್ ಅಥವಾ ಜೋಕ್ ಎಂದು ಪರಿಗಣಿಸಬಹುದು ಅಥವಾ ಇಂತಹ ಘಟನೆಗಳಿಗೆ ಬೆಂಬಲ ನೀಡಬಾರದು ಎಂದೂ ಹೇಳಿದ್ದರು.
ಆದರೆ, ಮತ್ತೊಬ್ಬರು ಬಳಕೆದಾರರು, ಆ ಬಸ್ ಚಾಲಕನ ಪರ ಬೆಂಬಲ ಕೊಟ್ಟಿದ್ದಾರೆ ನೋಡಿ.. ಅವರನ್ನು ಬೈಯ್ಯುವುದು ತಪ್ಪು. ಸುಧಾಮಾ ಟೀ (ಅಂಗಡಿ) ಅಷ್ಟು ಚೆನ್ನಾಗಿರುತ್ತದೆ ಎಂದು ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ನೃತ್ಯ ಮಾಡಿದ ಬಾಲಕಿಯ ತಲೆ ಮೇಲೆ ಸೊಂಡಿಲಿಟ್ಟು ಆಶೀರ್ವದಿಸಿದ ಆನೆ
