ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಒಳಗೆ ಮದ್ಯ ಕುಡಿಯೋದು, ಸಿಗರೇಟ್‌ ಸೇದೋದು ಅಲ್ಲಿನ ವಿದ್ಯಾರ್ಥಿಗಳ ಹಕ್ಕು. ಇದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದು ಪಶ್ಚಿಮ ಬಂಗಾಳದ ಜಾಧವ್‌ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಹೇಳಿರುವ ವಿಡಿಯೋ ವೈರಲ್‌ ಆಗಿದೆ.

ನವದೆಹಲಿ (ಆ.20): ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವಿಡಿಯೋವೊಂದು ಜನರ ಅಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ಪಶ್ಚಿಮ ಬಂಗಾಳದ ಜಾಧವ್‌ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯದ್ದಾಗಿದೆ. ಇದರಲ್ಲಿ ಆಕೆ, ವಿಶ್ವವಿದ್ಯಾಲಯವು ನಮಗೆ ಎರಡನೇ ಮನೆ ಇದ್ದಂತೆ. ಹಾಗಾಗಿ ಇಲ್ಲಿನ ಕ್ಯಾಂಪಸ್‌ನ ಒಳಗೆ ನಾವು ಮದ್ಯಪಾನ ಮಾಡುವುದು, ಸಿಗರೇಟ್‌ ಸೇದೋದು ನಮ್ಮ ಹಕ್ಕು. ಅದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಆಕೆಯ ಮಾತುಗಳು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಿಮಗೆ ಈ ಹಕ್ಕನ್ನು ಯಾರು ನೀಡಿದ್ದಾರೆ ಎಂದು ಪ್ರಶ್ನೆ ಮಾಡಿದಾಗ, ನನಗೆ ಈ ಹಕ್ಕನ್ನು ಯಾರೂ ನೀಡಬೇಕಾಗಿಲ್ಲ. ಯಾಕೆಂದರೆ, ಈ ಹಕ್ಕು ನನಗೆ ಈಗಾಗಲೇ ಇದೆ' ಎಂದು ಆಕೆ ಹೇಳಿದ್ದಾಳೆ. ಕಾಲೇಜು ಕ್ಯಾಂಪಸ್‌ನಲ್ಲಿ ಮೊದಲ ವರ್ಷದ ಪದವಿ ವಿದ್ಯಾರ್ಥಿಗೆ ಸಲಿಂಗಿ ಎಂದು ಹೀಯಾಳಿಸಿ ಆ ಹುಡುಗ ಸಾವು ಕಂಡ ಕೆಲವೇ ದಿನಗಳಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

ಈ ಘಟನೆಯ ಬಳಿಕ ಜಾಧವ್‌ಪುರ ವಿಶ್ವವಿದ್ಯಾಲಯ ವಿವಿ ಕ್ಯಾಂಪಸ್‌ನಲ್ಲಿ ಆಲ್ಕೋಹಾಲ್‌ಅನ್ನು ನಿಷೇಧ ಮಾಡಿದೆ. ಅದರೊಂದಿಗೆ ಐಡಿ ಕಾರ್ಡ್‌ ಇಲ್ಲದ ವಿದ್ಯಾರ್ಥಿಗಳಿಗೆ ವಿವಿಗೆ ಪ್ರವೇಶವಿಲ್ಲ ಎಂದು ನಿಯಮ ಜಾರಿ ಮಾಡಿದೆ. ಜಾಧವ್‌ಪುರ ವಿವಿ ವಿದ್ಯಾರ್ಥಿನಿಯ ವಿಡಿಯೋ ಎಕ್ಸ್‌ ಹಾಗೂ ರೆಡಿಟ್‌ ಎರಡರಲ್ಲೂ ವೈರಲ್‌ ಆಗಿದೆ. 'ಇಷ್ಟೆಲ್ಲಾ ಹೇಳಿದ್ದರೂ ಆಕೆ ಇನ್ನೂ ಯಾಕೆ ವಿವಿಯಲ್ಲಿ ಓದುತ್ತಿದ್ದಾಳೆ' ಎಂದು ಹೆಚ್ಚಿನವರು ಪ್ರಶ್ನೆ ಮಾಡಿದ್ದಾರೆ. 

Chandrayaan-3 Landing: ಚಂದ್ರನ ಮೇಲೆ ಭಾರತದ ಸಾಫ್ಟ್‌ ಲ್ಯಾಂಡಿಗ್‌, ನೀವು ಎಲ್ಲೆಲ್ಲಾ ವೀಕ್ಷಿಸಬಹುದು?

"ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನದ ಮದ್ಯಪಾನವು ಕಾನೂನುಬದ್ಧವಾಗಿಲ್ಲ ಮತ್ತು ಕ್ಯಾಂಪಸ್ ಸಾರ್ವಜನಿಕ ಸ್ಥಳವಾಗಿದೆ, ಇದು ನಿಮ್ಮ ಎರಡನೇ ಮನೆ ಎಂದು ನೀವು ಭಾವಿಸಬಹುದು ಆದರೆ ಇದು ನಿಮ್ಮ ಸ್ವಂತ ಮನೆಯಲ್ಲ" ಎಂದು ರೆಡ್ಡಿಟ್‌ನಲ್ಲಿ ವ್ಯಕ್ತಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ, "ನೀವು ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದೀರಿ ಮತ್ತು ಕ್ಯಾಂಪಸ್ ಅನ್ನು ಸಾರ್ವಜನಿಕ ಸ್ಥಳವೆಂದು ಪರಿಗಣಿಸಲಾಗುತ್ತದೆ ಮತ್ತು ಸಾರ್ವಜನಿಕ ಸ್ಥಳವು ಧೂಮಪಾನವನ್ನು ನಿಷೇಧಿಸುತ್ತದೆ ಮತ್ತು ಸಾಮಾನ್ಯ ಜ್ಞಾನ ಏನೆಂದರೆ ಕುಡಿಯುವುದು ಸಾಮಾನ್ಯವಲ್ಲ ಎಂದು ಅವರಿಗೆ ತಿಳಿದಿಲ್ಲ." ಎಂದು ಟೀಕಿಸಿದ್ದಾರೆ.

ಬಾಹ್ಯಾಕಾಶ ಯುದ್ಧಭೂಮಿಯಲ್ಲ..ರಷ್ಯಾದ ಲೂನಾ ಸೋಲು ಸಂಭ್ರಮ ಪಡುವ ವಿಚಾರವಲ್ಲ!

Scroll to load tweet…