Asianet Suvarna News Asianet Suvarna News

ಕೆಂಪು ಕೋಟೆಯಲ್ಲಿ ಮೋದಿ ಧ್ವಜಾರೋಹಣಕ್ಕೆ DRDO ಆ್ಯಂಟಿ ಡ್ರೋನ್ ಬಳಸಿದ ಭದ್ರತಾ ಪಡೆ!

74ನೇ ಸ್ವಾತಂತ್ರ್ಯ ದಿನಾಚರಣೆಗೆ ಹೆಚ್ಚಿನವರು ಸೇರುವಂತಿಲ್ಲ. ಕಾರಣ ಕೊರೋನಾ ವೈರಸ್. ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಇದರ ನಡುವೆ ಕೆಂಪು ಕೋಟೆಯಲ್ಲಿನ ಪ್ರಧಾನಿ ಮೋದಿ ಧ್ವಜಾರೋಹಣಕ್ಕೆ ಭದ್ರತೆ ಒದಗಿಸುವುದು ಹೆಚ್ಚಿನ ಸವಾಲು ಒಡ್ಡಿತ್ತು. ಇದಕ್ಕಾಗಿ  DRDO ಆ್ಯಂಟಿ ಡ್ರೋನ್ ಸಿಸ್ಟಮ್ ಮೂಲಕ ಕೆಂಪು ಕೋಟೆ ಸುತ್ತ ಮುತ್ತ ಹದ್ದಿನ ಕಣ್ಗಾವಲು ಇಡಲಾಗಿತ್ತು.

DRDO anti drne system used for PM Modi 74th Independence day red fort security
Author
Bengaluru, First Published Aug 15, 2020, 2:32 PM IST

ನವದೆಹಲಿ(ಆ.15): ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪು ಕೋಟೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿದ್ದಾರೆ. ಕೊರೋನಾ ವೈರಸ್, ಕಟ್ಟು ನಿಟ್ಟಿನ ಮಾರ್ಗಸೂಚಿಗಳಿಂದ ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿತ್ತು. ಆದರೆ ಭದ್ರತೆ ವಿಚಾರದಲ್ಲಿ ಕೊಂಚವೂ ರಾಜಿಯಾಗಿಲ್ಲ. ಇಷ್ಟೇ ಅಲ್ಲ ವಿನೂತನ ಡಿಫೆನ್ಸ್ ರಿಸರ್ಚ್ ಹಾಗೂ ಡೆವಲಪ್‌ಮೆಂಟ್ ಆರ್ಗನೈಸೇಶನ್( DRDO ) ನಿರ್ಮಿಸಿದ ವಿಶೇಷ ಆ್ಯಂಟಿ ಡ್ರೋನ್ ಸಿಸ್ಟಮ್ ಕೂಡ ಬಳಸಲಾಗಿತ್ತು.

"

74ನೇ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ವೈಭವ!

DRDO ನಿರ್ಮಿಸಿದ ಆ್ಯಂಟಿ ಡ್ರೋನ್ ಸಿಸ್ಟಮ್‌ನ್ನು ಕೆಂಪು ಕೋಟೆ ಸನಿಹದಲ್ಲಿ ನಿಯೋಜಿಸಲಾಗಿತ್ತು. ಕೆಂಪು ಕೋಟೆ ಸುತ್ತ ಮತ್ತು ಹದ್ದಿನ ಕಣ್ಣಿಡಲು ಈ ತಂತ್ರಜ್ಞಾನ ಬಳಸಿಕೊಳ್ಳಲಾಯಿತು. ಆ್ಯಂಟಿ ಡ್ರೋನ್ ಸಿಸ್ಟಮ್, 3 ಕಿಲೋಮೀಟರ್ ಸುತ್ತಲಿನ ಮೈಕ್ರೋ ಡ್ರೋನ್‌ ಪತ್ತೆ ಹಚ್ಚಿ ಜ್ಯಾಮ್ ಮಾಡಲಿದೆ. ಇಷ್ಟೇ ಅಲ್ಲ 2.5 ಕಿಲೋಮೀಟರ್ ದೂರದಲ್ಲಿರುವ ಡ್ರೋನ್‌ನ್ನು ಲೇಸರ್ ಮೂಲಕ ನಿಷ್ಕ್ರೀಯಗೊಳಿಸುವ ಸಾಮರ್ಥ್ಯ ಹೊಂದಿದೆ.

ಸ್ವಾತಂತ್ರ್ಯ ದಿನದಿಂದು ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿಗಳಿವರು..!

ಪ್ರಧಾನಿ ಮೋದಿ ಧ್ವಜಾರೋಹಣ, ಗೌರವ ವಂದನೆ ಹಾಗೂ ಭಾಷಣ ಸೇರಿದಂತೆ ಸಂಪೂರ್ಣ ಕಾರ್ಯಕ್ರಮಕ್ಕೆ ಗರಿಷ್ಠ ಭದ್ರತೆ ಒಗಿಸಲಾಗಿತ್ತು. ಇದರ ಜೊತೆಗೆ ಕೊರೋನಾ ವೈರಸ್ ಕುರಿತು ಎಚ್ಚರ ವಹಿಸಲಾಗಿತ್ತು. ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್(NSG), ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್(SPG) ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್, ಹಾಗೂ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.

ಕೆಂಪು ಕೋಟೆ ಹಾಗೂ ಸುತ್ತ ಮುತ್ತ 300 ಕ್ಯಾಮರ ಅಳವಡಿಸಲಾಗಿತ್ತು. ಒಟ್ಟು 4,000 ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. 

Follow Us:
Download App:
  • android
  • ios