Asianet Suvarna News Asianet Suvarna News

ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲೀಗ ಡಬಲ್‌ ಮ್ಯುಟೆಂಟ್‌ ವೈರಸ್‌ ಹಾವಳಿ!

ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲೀಗ ಡಬಲ್‌ ಮ್ಯುಟೆಂಟ್‌ ವೈರಸ್‌ ಹಾವಳಿ| ಎನ್‌440ಕೆ ಸ್ಥಾನ ಆಕ್ರಮಿಸಿಕೊಳ್ಳುತ್ತಿರುವ ಡಬಲ್‌ ಮ್ಯುಟೆಂಟ್‌, ಬ್ರಿಟನ್‌ ವೈರಸ್‌| ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳದಲ್ಲೀಗ ಇದೇ ವೈರಸ್‌ ಹಾವಳಿ ತೀವ್ರ| ಸೆಂಟರ್‌ ಫಾರ್‌ ಸೆಲ್ಯುಲರ್‌ ಆ್ಯಂಡ್‌ ಮಾಲಿಕ್ಯುಲರ್‌ ಬಯೋಲಜಿ ತಜ್ಞರ ಎಚ್ಚರಿಕೆ

Double mutant Covid strain now highly prevalent in south India pod
Author
Bangalore, First Published May 5, 2021, 8:37 AM IST

ಹೈದ್ರಾಬಾದ್‌(ಮೇ.05): ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇದೀಗ ಡಬಲ್‌ ಮ್ಯುಟೆಂಟ್‌ ಮತ್ತು ಬ್ರಿಟನ್‌ ರೂಪಾಂತರಿ ಕೊರೋನಾ ತಳಿಯ ಹಾವಳಿ ಹೆಚ್ಚಾಗಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.

ಹೈದ್ರಾಬಾದ್‌ನಲ್ಲಿರುವ ಸೆಂಟರ್‌ ಫಾರ್‌ ಸೆಲ್ಯುಲರ್‌ ಆ್ಯಂಡ್‌ ಮಾಲಿಕ್ಯುಲರ್‌ ಬಯೋಲಜಿ (ಸಿಸಿಎಂಬಿ) ವಿಜ್ಞಾನಿಗಳ ಪ್ರಕಾರ, ಈ ವರ್ಷಾರಂಭದಲ್ಲಿ ದಕ್ಷಿಣ ರಾಜ್ಯಗಳಲ್ಲಿ ಇತರೆ ಮಾದರಿ ವೈರಸ್‌ಗೆ ಹೋಲಿಸಿದರೆ ಎನ್‌440ಕೆ ವೈರಸ್‌ ತಳಿ ಹೆಚ್ಚಾಗಿ ಹಬ್ಬುತ್ತಿರುವುದು ಕಂಡುಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎನ್‌440ಕೆ ವೈರಸ್‌ನ ಜಾಗವನ್ನು ಬಿ.1.617 ಮಾದರಿಯ ರೂಪಾಂತರಿ ತಳಿ ಮತ್ತು ಬ್ರಿಟನ್‌ ರೂಪಾಂತರಿ ತಳಿ ಹೆಚ್ಚಾಗಿ ಆಕ್ರಮಿಸಿಕೊಂಡಿದೆ.

"

ಮೊದಲ ಅಲೆ ಮತ್ತು ಮೊದಲ ಅಲೆಯ ನಂತರದಲ್ಲಿ ಎನ್‌440ಕೆ ಹೆಚ್ಚಿನ ಪ್ರಭಾವ ಹೊಂದಿತ್ತು. ಆದರೆ 2ನೇ ಅಲೆಯಲ್ಲಿ ಬಿ.1.617 ಮಾದರಿಯ ರೂಪಾಂತರಿ ವೈರಸ್‌ ಹೆಚ್ಚು ಪ್ರಭಾವಶಾಲಿಯಾಗಿ ಕಂಡುಬಂದಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios