ಭಾರತದ ಸೈನಿಕರ ಮೇಲೆ ಚೀನಾ ದಾಳಿ ಮಾಡಿದ ಬಂತರ ಕಾಂಗ್ರೆಸ್ ಮಖಂಡ, ಸಂಸದ ರಾಹುಲ್ ಗಾಂಧಿ ಕೆಂದ್ರ ಸರ್ಕಾರವನ್ನು ಟೀಕಿಸಿ ಸರಣಿ ಟ್ವೀಟ್‌ಗಳನ್ನು ಮಾಡುತ್ತಲೇ ಇದ್ದಾರೆ.

ಈ ನಡುವೆಯೇ ಯೋಧರೊಬ್ಬರ ತಂದೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೂನ್ 15ರಂದು ಭಾರತೀಯ ಯೋಧರ ಮೇಲೆ ಚೀನಾ ನಡೆಸಿದ ದಾಳಿಯಲ್ಲಿ ಗಾಯಗೊಂಡ ಸುರೇಂದ್ರ ಸಿಂಗ್ ಎಂಬರ ತಂದೆಯ ಮಾತುಗಳು ಎಲ್ಲೆಡೆ ಸದ್ದು ಮಾಡುತ್ತಿದೆ.

ಚೀನಾ ದಾಳಿ ಪ್ಲಾನ್ ಮಾಡ್ತಿತ್ತು, ಸರ್ಕಾರ ಮಲಗಿತ್ತು: 50ನೇ ಬರ್ತ್‌ಡೇ ದಿನ ರಾಹುಲ್ ವಾಗ್ದಾಳಿ

ಭಾರತದ ಸೇನೆ ಬಹಳ ಬಲಿಷ್ಠ ಸೇನೆ. ಅದು ಚೀನಾವನ್ನು ಸದೆ ಬಡಿಯಬಲ್ಲದು. ರಾಹುಲ್ ಗಾಂಧಿ ದಯವಿಟ್ಟು ಇದರಲ್ಲಿ ರಾಜಕೀಯ ತರಬೇಡಿ ಎಂದು ಹೇಳಿದ್ದಾರೆ. ಇದೇ ವ್ಯಕ್ತಿ ತನ್ನ ಮಗನ ಕುರಿತು ಮಾತನಾಡುವ ವಿಡಿಯೋವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ ಬೆನ್ನಲ್ಲೇ ಇಂತಹದೊಂದು ವಿಡಿಯೋ ವೈರಲ್ ಆಗಿದೆ.

'ನಿರಾಯುಧರಾಗಿ ಸೈನಿಕರನ್ನು ಕಳಿಸಿದ್ದು ಯಾಕೆ, ಇದಕ್ಕೆಲ್ಲ ಯಾರು ಹೊಣೆ'

ವಿಡಿಯೋವನ್ನು ಗೃಹ ಸಚಿವ ಅಮಿತ್ ಶಾ ಅವರೂ ಟ್ವೀಟ್ ಮಾಡಿದ್ದಾರೆ. ಧೀರ ಯೋಧನ ತಂದೆ ರಾಹುಲ್‌ ಗಾಂಧಿಗೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ . ಎಲ್ಲರೂ ಒಟ್ಟಾಗಿ ನಿಂತಿರುವ ಸಂದರ್ಭದಲ್ಲಿ ಸಣ್ಣತನ ರಾಜಕೀಯ ಬಿಟ್ಟು ರಾಷ್ಟ್ರದ ಏಕತೆಯ ಜೊತೆ ನಿಲ್ಲಬೇಕಿದೆ ಎಂದು ಅವರು ಬರೆದಿದ್ದಾರೆ.