ಬ್ರಿಟನ್ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಸೋಲು ಅನುಭವಿಸಿದ ಬೆನ್ನಲೇ ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಅವರಿಗೆ ಪತ್ರ ಬರೆದಿರುವ ಭಾರತದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸೋಲು ಗೆಲುವು ಜೀವನದ ಭಾಗಗಳು, ಸೋಲಿಗೆ ಧೃತಿಗೆಡಬೇಡಿ ಎಂದು ಧೈರ್ಯ ಹೇಳಿದ್ದಾರೆ ಎಂದು ವರದಿ ಆಗಿದೆ.

ನವದೆಹಲಿ: ಬ್ರಿಟನ್ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಸೋಲು ಅನುಭವಿಸಿದ ಬೆನ್ನಲೇ ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಅವರಿಗೆ ಪತ್ರ ಬರೆದಿರುವ ಭಾರತದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸೋಲು ಗೆಲುವು ಜೀವನದ ಭಾಗಗಳು, ಸೋಲಿಗೆ ಧೃತಿಗೆಡಬೇಡಿ ಎಂದು ಧೈರ್ಯ ಹೇಳಿದ್ದಾರೆ ಎಂದು ವರದಿ ಆಗಿದೆ. ಇದೇ ವೇಳೆ ನೂತನ ಪ್ರಧಾನಿ ಕೀರ್ ಸ್ಟಾರ್ಮರ್‌ಗೆ ರಾಹುಲ್ ಅಭಿನಂದನೆ ಸಲ್ಲಿಸಿದ್ದಾರೆ.

ಬೇಬಿ ಆಫ್‌ ದ ಹೌಸ್‌: 22 ವರ್ಷದ ಯುವಕ ಬ್ರಿಟನ್‌ ಸಂಸತ್ತಿಗೆ ಆಯ್ಕೆ

ಲಂಡನ್‌: ಕೇವಲ 22 ವರ್ಷ ವಯಸ್ಸಿನ ಲೇಬರ್ ಪಕ್ಷದ ಅಭ್ಯರ್ಥಿ ಸ್ಯಾಮ್ ಕಾರ್ಲಿಂಗ್ ಅವರು ನಾರ್ತ್ ವೆಸ್ಟ್ ಕೇಂಬ್ರಿಡ್ಜ್‌ಶೈರ್‌ನ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬ್ರಿಟನ್‌ ಸಂಸತ್ತಿನ ಅತಿ ಕಿರಿಯ ಎನ್ನಿಸಿಕೊಂಡಿದ್ದಾರೆ. ಅವರು ಅನುಭವಿ ಕನ್ಸರ್ವೇಟಿವ್ ಸಂಸದ ಶೈಲೇಶ್ ವರ ಅವರನ್ನು39 ಮತಗಳ ಅಂತರದಿಂದ ಸೋಲಿಸಿದ್ದಾರೆ.
ತನ್ನ ಚಿಕ್ಕ ವಯಸ್ಸಿನ ಹೊರತಾಗಿಯೂ, ಕೇಂಬ್ರಿಡ್ಜ್ ವಿವಿ ವಿಜ್ಞಾನ ಪದವೀಧರ ವಿದ್ಯಾರ್ಥಿಯಾದ ಕಾರ್ಲಿಂಗ್‌ ಅವರನ್ನು 'ಬೇಬಿ ಆಫ್‌ ದ ಹೌಸ್‌' ಎಂದು ಬಣ್ಣಿಸಲಾಗಿದೆ.

ಭಾರತ ಬ್ರಿಟನ್ ನಡುವಣ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಉಭಯ ನಾಯಕರ ಸಮ್ಮತಿ

ನವದೆಹಲಿ: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಲೇಬರ್‌ ಪಕ್ಷದ ನಾಯಕ ಕೀರ್‌ ಸ್ಟಾರ್ಮರ್‌ಗೆ ದೂರವಾಣಿ ಕರೆ ಮಾಡಿ ಭಾರತದ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಇದೇ ವೇಳೆ ಬಹಳ ಸಮಯದಿಂದ ಬಾಕಿ ಉಳಿದಿರುವ ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತ ಮಾತುಕತೆ ಮುಂದುವರಿಸಿ ತಾರ್ಕಿಕ ಅಂತ್ಯಕ್ಕೆ ಒಯ್ಯಲು ಉಭಯ ನಾಯಕರು ಸಮ್ಮತಿಸಿದ್ದಾರೆ.

ಮಾತುಕತೆ ವೇಳೆ ಇಬ್ಬರೂ ನಾಯಕರು ಉಭಯ ದೇಶಗಳ ನಡುವಿನ ಸುದೀರ್ಘ ಸಂಬಂಧವನ್ನು ಮೆಲುಕು ಹಾಕುವ ಜೊತೆಗೆ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯನ್ನು ಇನ್ನುಷ್ಟು ಆಳಕ್ಕೆ ಕೊಂಡೊಯ್ಯುವ ಮತ್ತು ಇನ್ನಷ್ಟು ಮುಂದುವರೆಸುವ ಆಶಯ ವ್ಯಕ್ತಪಡಿಸಿದರು. ಇದೇ ವೇಳೆ ಬ್ರಿಟನ್‌ನ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಯಲ್ಲಿ ಭಾರತೀಯ ಸಮುದಾಯದ ಪಾತ್ರದ ಬಗ್ಗೆ ಸ್ಟಾರ್ಮರ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೊಂದೆಡೆ ಆದಷ್ಟು ಶೀಘ್ರವೇ ಭಾರತಕ್ಕೆ ಭೇಟಿ ನೀಡುವಂತೆ ಬ್ರಿಟನ್‌ ಪ್ರಧಾನಿಗೆ ಮೋದಿ ಆಹ್ವಾನ ನೀಡಿದರು.

ಗುರುವಾರ ನಡೆದ ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಹಿಂದಿನ ಪ್ರಧಾನಿ ರಿಷಿ ಸುನಕ್‌ ಅವರ ಟೋರಿ ಪಕ್ಷ ಹೀನಾಯ ಸೋಲು ಕಂಡಿತ್ತು ಹಾಗೂ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ ಜಯಭೇರಿ ಬಾರಿಸಿತ್ತು.

ಇಲ್ಲಿದೆ ರಾಹುಲ್ ಗಾಂಧಿ ಬರೆದ ಪತ್ರ

Scroll to load tweet…