ಮಣಿಪುರ ಕಿಚ್ಚಿಗೆ ನಮ್ಮನ್ನು ವೇದಿಕೆ ಮಾಡ್ಕೋಬೇಡಿ: ಮೈತೇಯಿ, ಕುಕಿ ಸಮುದಾಯಗಳಿಗೆ ಸುಪ್ರೀಂ ಎಚ್ಚರಿಕೆ

 2 ತಿಂಗಳಿಂದ ಜನಾಂಗೀಯ ಸಂಘರ್ಷದಲ್ಲಿ ತೊಡಗಿರುವ ಮೈತೇಯಿ ಹಾಗೂ ಕುಕಿ ಸಮುದಾಯಗಳಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಮಣಿಪುರದಲ್ಲಿ ಮತ್ತಷ್ಟು ಕಿಚ್ಚು ಹಚ್ಚಲು ಸುಪ್ರೀಂ ಕೋರ್ಟನ್ನು ವೇದಿಕೆ ಆಗಿ ಬಳಸಿಕೊಳ್ಳಬೇಡಿ ಎಂದು ಸರ್ವೋಚ್ಚ ನ್ಯಾಯಾಲಯವು ಈ ಎರಡು ಸಮುದಾಯಗಳಿಗೆ ಎಚ್ಚರಿಸಿದೆ.

Dont make us a platform for Manipur violence Supreme court warning to Maithei Kuki communities of manipur akb

ನವದೆಹಲಿ:  2 ತಿಂಗಳಿಂದ ಜನಾಂಗೀಯ ಸಂಘರ್ಷದಲ್ಲಿ ತೊಡಗಿರುವ ಮೈತೇಯಿ ಹಾಗೂ ಕುಕಿ ಸಮುದಾಯಗಳಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಮಣಿಪುರದಲ್ಲಿ ಮತ್ತಷ್ಟು ಕಿಚ್ಚು ಹಚ್ಚಲು ಸುಪ್ರೀಂ ಕೋರ್ಟನ್ನು ವೇದಿಕೆ ಆಗಿ ಬಳಸಿಕೊಳ್ಳಬೇಡಿ ಎಂದು ಸರ್ವೋಚ್ಚ ನ್ಯಾಯಾಲಯವು ಈ ಎರಡು ಸಮುದಾಯಗಳಿಗೆ ಎಚ್ಚರಿಸಿದ್ದು,  ಪರಿಸ್ಥಿತಿ ಸುಧಾರಿಸಲು ತಾನು ಕೆಲವು ಸಲಹೆಗಳನ್ನು ನೀಡಲು ಸಿದ್ಧ ಎಂದಿದೆ. ಮಣಿಪುರದ ಪ್ರಸಕ್ತ ಸ್ಥಿತಿ ಬಗ್ಗೆ ಸೋಮವಾರ ರಾಜ್ಯ ಸರ್ಕಾರ ಪರಿಷ್ಕೃತ ವರದಿ ನೀಡಿತು.

 ಈ ವೇಳೆ ಕುಕಿ ಸಮುದಾಯದ ವಕೀಲ ಕಾಲಿನ್‌ ಗೋನ್ಸಾಲ್ವಿಸ್‌ (Colin Gonsalves) ವಾದ ಮಂಡಿಸಿ, ಮಣಿಪುರದಲ್ಲಿ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಹಿಂಸೆ ನಡೆದಿದೆ  ಎಂದು ಆರೋಪಿಸಿದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ನ್ಯಾ. ಡಿ.ವೈ. ಚಂದ್ರಚೂಡ ಹಾಗೂ ನ್ಯಾ. ಪಿ.ಎಸ್‌. ನರಸಿಂಹ ಅವರ ಪೀಠ, ‘ನಾವು ಸ್ಥಿತಿ ಸುಧಾರಣೆಗೆ ಸಲಹೆ ನೀಡಬಹುದು. ಆದರೆ ಕಾನೂನು-ಸುವ್ಯವಸ್ಥೆ, ಭದ್ರತಾ ಆಡಳಿತ ನಡೆಸುವ ಅಧಿಕಾರ ನಮಗಿಲ್ಲ. ಹೀಗಾಗಿ ಈ ವೇದಿಕೆಯನ್ನು ಕಿಚ್ಚು ಹಚ್ಚುವ ವೇದಿಕೆಯಾಗಿ ಬಳಸಿಕೊಳ್ಳಬೇಡಿ’ ಎಂದು ವಕೀಲರಿಗೆ ತಾಕೀತು ಮಾಡಿತು. ‘ಇನ್ನು ಮಂಗಳವಾರ (ಇಂದು) ಸ್ಥಿತಿ ಸುಧಾರಿಸಲು ಉಪಯುಕ್ತವಾದ ಕೆಲವು ಸಲಹೆಗಳನ್ನು ನಮಗೆ ಸಲ್ಲಿಸಿ. ಆಗ ನಾವು ಅವನ್ನು ಪರಿಶೀಲಿಸಿ ಕೆಲವು ನಿರ್ದೇಶನಗಳನ್ನು ನಿಮಗೆ ನೀಡುತ್ತೇವೆ’ ಎಂದು ಮಣಿಪುರ ಹಾಗೂ ಕೇಂದ್ರ ಸರ್ಕಾರಗಳಿಗೆ ಪೀಠ ಸೂಚಿಸಿತು.

ಭಾರತದಿಂದ ಕ್ರಿಶ್ಚಿಯಾನಿಟಿ ನಾಶಪಡಿಸಬಹುದು ಎಂದು ಯಾರೂ ಯೋಚಿಸಬಾರದು: ಕೇರಳ ಬಿಷಪ್

142 ಸಾವು- ಮಣಿಪುರ ವರದಿ:

ಈ ನಡುವೆ ಮಣಿಪುರದ ಪರಿಷ್ಕೃತ ವಸ್ತುಸ್ಥಿತಿ ವರದಿ ಸಲ್ಲಿಸಿದ ರಾಜ್ಯ ಸರ್ಕಾರ, 142 ಜನರು ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ. 5,995 ಎಫ್‌ಐಆರ್‌ ದಾಖಲಾಗಿದ್ದು, 6745 ಜನರನ್ನು ಬಂಧಿಸಲಾಗಿದೆ. 6 ಕೇಸುಗಳ ತನಿಖೆಯನ್ನು ಸಿಬಿಐ (CBI) ನಡೆಸುತ್ತಿದೆ ಎಂದು ಹೇಳಿತು.

ಒಬ್ಬ ನಾಗರಿಕ ಸಾವು

ಮಣಿಪುರದಲ್ಲಿ ಸೋಮವಾರವೂ ಹಿಂಸೆ ಮುಂದುವರಿದಿದ್ದು, ಇಂಫಾಲ್‌ ಪಶ್ಚಿಮ ಹಾಗೂ ಕಾಂಗ್‌ಪೋಕ್ಪಿ ಜಿಲ್ಲೆಗಳ 2 ಗ್ರಾಮಗಳಲ್ಲಿ ಸಂಘರ್ಷ ನಡೆದಿದೆ. ಆಗ ಒಬ್ಬ ನಾಗರಿಕ ಸಾವನ್ನಪ್ಪಿದ್ದು, ಇಬ್ಬರುಗೆ ಗಾಯಗಳಾಗಿವೆ. ಘಟನೆಯಿಂದ ಇಂಫಾಲ್‌ನಲ್ಲಿ (Imphal) ಉದ್ವಿಗ್ನ ಸ್ಥಿತಿ ನೆಲೆಸಿದ್ದು, ಅಂಗಡಿ-ಮುಂಗಟ್ಟು ಮುಚ್ಚಲಾಗಿದೆ.

ಮಣಿಪುರ ಹಿಂಸಾಚಾರ: ಮ್ಯಾನ್ಮಾರ್‌ ಜತೆ ಗಡಿ ಶಾಂತಿ, ಭದ್ರತೆ ವಿಚಾರವಾಗಿ ಮಾತುಕತೆ ನಡೆಸಿದ ಕೇಂದ್ರ ಸರ್ಕಾರ

Latest Videos
Follow Us:
Download App:
  • android
  • ios