ಮಣಿಪುರದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷದ ಕುರಿತು ಪ್ರತಿಕ್ರಿಯಿಸಿರುವ ಕೇರಳ ಕ್ಯಾಥೋಲಿಕ್‌ ಬಿಷಪ್‌ ಕೌನ್ಸಿಲ್‌ ಅಧ್ಯಕ್ಷ ಕಾರ್ಡಿನಲ್‌ ಮಾರ್‌ ಕ್ಲೀಮಿಸ್‌ ‘ನಾವು ಭಾರತದಿಂದ ಕ್ರಿಶ್ಚಿಯಾನಿಟಿ ನಾಶಪಡಿಸಬಹುದು ಎಂದು ಯಾರೂ ಕೂಡಾ ಯೋಚಿಸಲು ಹೋಗಬಾರದು’ ಎಂದು ಎಚ್ಚರಿಸಿದ್ದಾರೆ.

ಕೊಚ್ಚಿ: ಮಣಿಪುರದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷದ ಕುರಿತು ಪ್ರತಿಕ್ರಿಯಿಸಿರುವ ಕೇರಳ ಕ್ಯಾಥೋಲಿಕ್‌ ಬಿಷಪ್‌ ಕೌನ್ಸಿಲ್‌ ಅಧ್ಯಕ್ಷ ಕಾರ್ಡಿನಲ್‌ ಮಾರ್‌ ಕ್ಲೀಮಿಸ್‌ ‘ನಾವು ಭಾರತದಿಂದ ಕ್ರಿಶ್ಚಿಯಾನಿಟಿ ನಾಶಪಡಿಸಬಹುದು ಎಂದು ಯಾರೂ ಕೂಡಾ ಯೋಚಿಸಲು ಹೋಗಬಾರದು’ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಕೇಂದ್ರದ ಮಧ್ಯಸ್ಥಿಕೆಗೆ ಹಾಗೂ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು ಎಂದು ಕ್ಲೀಮಿಸ್‌ ಒತ್ತಾಯಿಸಿದ್ದಾರೆ. ಮೈತೇಯಿ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವ ನಿರ್ಧಾರದ ವಿರುದ್ಧ ಮಣಿಪುರದಲ್ಲಿ ಕುಕಿ ಸಮುದಾಯ ಹಿಂಸಾಚಾರಕ್ಕೆ ಮುಂದಾದ ಬೆನ್ನಲ್ಲೇ 2 ತಿಂಗಳಿನಿಂದ ನಡೆದ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

SAFF Cup Final: ಪದಕ ಸ್ವೀಕರಿಸುವಾಗ ಮಣಿಪುರ ಫ್ಲಾಗ್‌ನೊಂದಿಗೆ ಬಂದ ಫುಟ್ಬಾಲಿಗ ಜೇಕ್ಸನ್‌ ಸಿಂಗ್‌..!

ಮಣಿಪುರ ಹಿಂಸಾಚಾರ: ಮ್ಯಾನ್ಮಾರ್‌ ಜತೆ ಗಡಿ ಶಾಂತಿ, ಭದ್ರತೆ ವಿಚಾರವಾಗಿ ಮಾತುಕತೆ ನಡೆಸಿದ ಕೇಂದ್ರ ಸರ್ಕಾರ