ಹೈದರಾಬಾದ್(ಸೆ. 04) 'ಸಿಂಗಂ' ನಂತಹ ಸಿನಿಮಾಗಳನ್ನು ನೋಡಿ ನಾವು ಎಲ್ಲರಿಗಿಂತ  ಒಂದು ಕೈ ಜಾಸ್ತಿ ಎಂಬ  ಮನೋಭಾವ ಬೆಳೆಸಿಕೊಳ್ಳಬೇಡಿ ಎಂದು ಯುವ ಐಪಿಎಸ್ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಹೈದರಾಬಾದ್‍ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಐಪಿಎಸ್ ಪ್ರೊಬೆಷನರ್ ಗಳ ‘ದೀಕ್ಷಾಂತ್ ಪೆರೇಡ್’ ಸಂದರ್ಭದಲ್ಲಿ ಮೋದಿ ಯುವ ಐಪಿಎಸ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಂವಾದ ನಡೆಸಿದರು.

ಚೌಕಿದಾರನ ಖಾತೆಗೆ ಕನ್ನ!

ಶೋ ಅಪ್ ತೋರಿಸಲು ಹೋಗಿ ಮುಖ್ಯವಾದ ಕೆಲಸವನ್ನೇ ಮರೆಯುವ ಹಲವು ಉದಾಹರಣೆಗಳಿವೆ. ಹೊಸದಾಗಿ ಕೆಲಸಕ್ಕೆ ಸೇರಿದ ಅಧಿಕಾರಿಗಳು ಎಲ್ಲರೂ ತಮಗೆ ಭಯ ಪಡೆಬೇಕು ಎಂದುಕೊಳ್ಳುತ್ತಾರೆ. ಗ್ಯಾಂಗ್‍ಸ್ಟರ್, ಕಾನೂನು ಬಾಹಿರ ಕೃತ್ಯ ನಡೆಸುವವರು ತಮ್ಮನ್ನು ನೋಡಿ ಭಯ ಪಡೆಬೇಕು ಎಂದು ಭಾವಿಸುತ್ತಾರೆ. ಇದರಿಂದ ಬಹುಮುಖ್ಯ ಕೆಲಸವನ್ನೇ ಮರೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡಿ, ಆಗ ನಿಮ್ಮನ್ನು ಎಲ್ಲರೂ ಸ್ಮರಿಸುತ್ತಾರೆ.  ಜನರ ಮನಸ್ಸನ್ನು ಗೆದ್ದರೆ ಎಲ್ಲವೂ ತನ್ನಿಂದ ತಾನೇ ಒಲಿದು ಬರುತ್ತದೆ ಎಂದು ತಿಳಿಸಿದರು.

ಕಾಶ್ಮೀರದ ಹೊಸ ಅಧಿಕಾರಿಗಳನ್ನು 'ವೆರಿ ಸ್ವೀಟ್ ಪೀಪಲ್' ಎಂದ ಮೋದಿ ಅಪರಾಧ ತನಿಖೆಯಲ್ಲಿ ಇಂದಿನ ದಿನಕ್ಕೆ ತಂತ್ರಜ್ಞಾನ ಎಂಬುದು ಮಹತ್ತರ ಕೊಡುಗೆಯಾಗಿ ನಿಂತಿದೆ. ಸಿಸಿಟಿವಿ ದೃಶ್ಯ, ಮೊಬೈಲ್ ಟ್ರ್ಯಾಕಿಂಗ್  ನಿಮಗೆ ಸಹಾಯ ಮಾಡುತ್ತದೆ. ಇದೆ ತಂತ್ರಜ್ಞಾನ ಅನೇಕ ಪೊಲೀಸ್ ಅಧಿಕಾರಿಗಳ ಅಮಾನತಿಗೂ ಕಾರಣವಾಗಿದೆ ಎಂಬುದು ನೆನಪಿನಲ್ಲಿ ಇರಲಿ ಎಂದು ತಿಳಿಸಿದರು.

ಸಾಮಾಜಿಕ ತಾಣ, ತಂತ್ರಜ್ಞಾನ ಮತ್ತು ನಿಮ್ಮ ಶಿಸ್ತು ಪರಿಶ್ರಮ ಬಳಸಿಕೊಂಡು ಅತ್ಯುತ್ತಮ ಪೊಲೀಸ್ ವ್ಯವಸ್ಥೆ ನಿರ್ಮಾಣ ಮಾಡಿ. ದೇಶದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿ ಎಂದು ಮನವಿ ಮಾಡಿಕೊಂಡರು.