ಯುವಕನ ಹೊಟ್ಟೆಯಿಂದ ಹಾವಿನ ರೀತಿಯ ಅಪಾಯಕಾರಿ ಹುಳು ತೆಗೆದ ವೈದ್ಯರು !
ಯುವಕ ಸೋನೋಗ್ರಾಫಿಗೆ ಒಳಗಾದ ವೈದ್ಯರು ಒಂದು ಕ್ಷಣ ಶಾಕ್ ಆಗಿದ್ದರು. ಸೋನೋಗ್ರಾಫಿಯಲ್ಲಿ ಯುವಕನ ಸಣ್ಣ ಕರುಳಿನಲ್ಲಿ ಹಾವಿನ ರೀತಿಯ ದಪ್ಪವಾದ ಹುಳು ಕಾಣಿಸಿಕೊಂಡಿತ್ತು
ಜೈಪುರ: ರಾಜಸ್ಥಾನದ ಕುಚ್ಮಾನ ನಗರದ ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಹೊಟ್ಟೆಯಿಂದ 30 ಸೆಂಟಿಮೀಟರ್ ಉದ್ದದ ಅಪಾಯಕಾರಿ ಹುಳು ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಯುವಕ ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 30 ವರ್ಷದ ಯುವಕ ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದನು. ಈ ಸಮಸ್ಯೆ ನಿವಾರಣೆಗಾಗಿ ಹಲವು ಔಷಧಿಯನ್ನು ಸಹ ಯುವಕ ನಿರಂತರವಾಗಿ ತೆಗೆದುಕೊಂಡರೂ ಗುಣಮುಖನಾಗಿರಲಿಲ್ಲ. ಔಷಧಿ ಸೇವಿಸಿದಾಗ ಸ್ವಲ್ಪ ಸಮಯ ಹೊಟ್ಟೆ ನೋವು ಶಮನವಾಗುತ್ತಿತ್ತು. ನಂತರ ಮತ್ತೆ ಆ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಸ್ಥಳೀಯ ವೈದ್ಯರು ಸೋನೋಗ್ರಾಫಿ (Ultrasonography -ವೈದ್ಯಕೀಯ ಶ್ರವಣಾತೀತ ಧ್ವನಿಚಿತ್ರಣ) ಮಾಡಿಸುವಂತೆ ಸಲಹೆ ನೀಡಿದ್ದರು.
ಸೋನೋಗ್ರಾಫಿ ಮಾಡಿದ ವೈದ್ಯರು ಶಾಕ್
ಯುವಕ ಸೋನೋಗ್ರಾಫಿಗೆ ಒಳಗಾದ ವೈದ್ಯರು ಒಂದು ಕ್ಷಣ ಶಾಕ್ ಆಗಿದ್ದರು. ಸೋನೋಗ್ರಾಫಿಯಲ್ಲಿ ಯುವಕನ ಸಣ್ಣ ಕರುಳಿನಲ್ಲಿ ಹಾವಿನ ರೀತಿಯ ದಪ್ಪವಾದ ಹುಳು ಕಾಣಿಸಿಕೊಂಡಿತ್ತು. ಮರುದಿನವೇ ವೈದ್ಯರು ಅಲ್ಬೆಂಡ್‌ಜೋಲ್ ನೀಡಿ 30 ಸೆಂಟಿ ಮೀಟರ್ ಉದ್ದದ ಹುಳು ಹೊರ ತೆಗೆದಿದ್ದಾರೆ. ಇದು ಮೊದಲ ಪ್ರಕರಣವೇನು ಅಲ್ಲ. ಈ ಹಿಂದೆಯೂ ಇಂತಹ ಪ್ರಕರಣಗಳು ದಾಖಲಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಕೆಲ ಮಕ್ಕಳು ಬಾಲ್ಯದಲ್ಲಿ ಮಣ್ಣು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತವೆ. ಕೆಲ ಮಕ್ಕಳು ಸ್ವಚ್ಛವಾಗಿ ಕೈ ತೊಳೆಯದೇ ಆಹಾರ ಸೇವಿಸಿರುತ್ತವೆ. ಈ ಕಾರಣದಿಂದ ಹೊಟ್ಟೆಯಲ್ಲಿ ಹುಳುಗಳ ರಚನೆಯಾಗಿ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಸಿರು ತರಕಾರಿ ಮತ್ತು ಹಣ್ಣುಗಳನ್ನು ಸ್ವಚ್ಛಗೊಳಿಸದೇ ಸೇವನೆ ಮಾಡೋದರಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳುತ್ತಾರೆ.
Crime News: ಗುದನಾಳಕ್ಕೆ ಏರ್ ಕಂಪ್ರೆಸರ್ ಪೈಪ್ ತುರುಕಿದ ಸಹೋದ್ಯೋಗಿ: ವ್ಯಕ್ತಿ ಸಾವು
ಭಾರತದಲ್ಲಿ ಶೇ.24ರಷ್ಟು ಪ್ರಕರಣಗಳು
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದ ಶೇ.24ರಷ್ಟು ಜನರು ಹೊಟ್ಟೆಯಲ್ಲಿ ಹುಳುವಿನ ರಚನೆಯಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಅದರಲ್ಲಿ ಶೇ.27ರಷ್ಟು ಪ್ರಕರಣಗಳು ಭಾರತದಲ್ಲಿಯೇ ದಾಖಲಾಗುತ್ತವೆ. ಬಹುತೇಕ ಚಿಕ್ಕ ಮಕ್ಕಳಲ್ಲಿಯೇ ಈ ಸಮಸ್ಯೆಗಳು ಕಂಡು ಬರುತ್ತವೆ. ಈ ಸಮಸ್ಯೆಗೆ ನಮ್ಮಲ್ಲಿ ಸರಳವಾದ ಚಿಕಿತ್ಸೆಗಳಿವೆ ಎಂದುರೇಡಿಯೊಲಾಜಿಸ್ಟ್ ಡಾಕ್ಟರ್ ಪ್ರದೀಪ್ ಚೌಧರಿ ಮಾಹಿತಿ ನೀಡುತ್ತಾರೆ.
ಈ ಸಮಸ್ಯೆಗೆ ಪರಿಹಾರ ಏನು?
ಸಾಮಾನ್ಯ ಭಾಷೆಯಲ್ಲಿ ಇದನ್ನು ಕ್ರಿಮಿ ಸಂಕ್ರಮಣ ಎಂದು ಕರೆಯಲಾಗುತ್ತದೆ. ಬಯಲು ಪ್ರದೇಶದಲ್ಲಿ ಶೌಚಕ್ಕೆ ಹೋಗುವುದರಿಂದಲೂ ಈ ಸಮಸ್ಯೆಗೆ ತುತ್ತಾಗಬಹುದು. ಊಟಕ್ಕೆ ಅಥವಾ ಆಹಾರ ಸೇವಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ತರಕಾರಿ, ಹಣ್ಣುಗಳನ್ನು ಶುದ್ಧ ನೀರಿಲ್ಲಿ ತೊಳೆದು ಬಳಕೆ ಮಾಡಬೇಕು. ಸ್ವಚ್ಛತೆಯಿದ್ರೆ ಈ ಸಮಸ್ಯೆಯಿಂದ ಪಾರಾಗಬಹುದು ಎಂದು ವೈದ್ಯ ಪ್ರದೀಪ್ ಚೌಧರಿ ಹೇಳುತ್ತಾರೆ.
ರೈತನ ಗುದನಾಳ ಸೇರಿದ್ದ 16 ಇಂಚು ಉದ್ದದ ಸೋರೆಕಾಯಿ ಹೊರತೆಗೆದ ವೈದ್ಯರು