Crime News: ಗುದನಾಳಕ್ಕೆ ಏರ್ ಕಂಪ್ರೆಸರ್ ಪೈಪ್ ತುರುಕಿದ ಸಹೋದ್ಯೋಗಿ: ವ್ಯಕ್ತಿ ಸಾವು

Crime News: ಸಹೋದ್ಯೊಗಿ ಮಾಡಿದ ಪ್ರ್ಯಾಂಕ್‌ನಿಂದಾಗಿ  (ತಮಾಷೆ) ಕಾರ್ಮಿನೊಬ್ಬ ಜೀವ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ

man dies after colleague pumps air into rectum Kanpur Uttar Pradesh mnj

ಉತ್ತರ ಪ್ರದೇಶ (ನ. 14): ಸಹೋದ್ಯೊಗಿ ಮಾಡಿದ ಪ್ರ್ಯಾಂಕ್‌ನಿಂದಾಗಿ  (ತಮಾಷೆ) ಕಾರ್ಮಿನೊಬ್ಬ ಜೀವ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರದ ರಾನಿಯಾ ಪ್ರದೇಶದಲ್ಲಿ ನಡೆದಿದೆ. ತಮಾಷೆಗಾಗಿ 47 ವರ್ಷದ ಸಹೋದ್ಯೊಗಿಯೊಬ್ಬ ಕಾರ್ಮಿಕನ ಗುದನಾಳಕ್ಕೆ ಏರ್ ಕಂಪ್ರೆಸರ್ ಪೈಪನ್ನು ತುರುಕಿದ್ದು ಆಂತರಿಕ ಗಾಯಗಳಿಂದ ಆತ ಸಾವನಪ್ಪಿದ್ದಾನೆ. ಕಾನ್ಪುರದ ದಯಾಶಂಕರ್ ದುಬೆ ಮೃತ ವ್ಯಕ್ತಿ. ಸಹೋದ್ಯೋಗಿ ಗುದನಾಳಕ್ಕೆ ಧೂಳನ್ನು ಸ್ವಚ್ಛಗೊಳಿಸಲು ಬಳಸುವ ಏರ್ ಕಂಪ್ರೆಸರ್ ಪೈಪನ್ನು ತುರುಕಿದ ನಂತರ ದುಬೆ ಪ್ರಜ್ಞಾಹೀನರಾಗಿದ್ದಾರೆ. ಬಳಿಕ ದುಬೆ  ಸ್ಥಿತಿ ಹದಗೆಟ್ಟಾಗ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ವರದಿಗಳು ತಿಳಿಸಿವೆ. ಜುಲೈ ತಿಂಗಳಲ್ಲಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು.  

ಗುದನಾಳದೊಳಗೆ ಗಾಳಿಯ ಹಠಾತ್ ಸ್ಫೋಟದಿಂದಾಗಿ ಉಂಟಾದ ಆಂತರಿಕ ಗಾಯಗಳಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ದುಬೆ ಅವರ ದೇಹಕ್ಕೆ ಪೈಪ್ ತುರುಕಿದ್ದ ವ್ಯಕ್ತಿಯ ವಿರುದ್ಧ ರಾನಿಯಾ ಪೊಲೀಸರಿಗೆ ಅವರ ಕುಟುಂಬ ಕೊಲೆ ದೂರು ನೀಡಿದೆ. ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮರಣೋತ್ತರ ಪರೀಕ್ಷಯು ದುಬೆ ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ. ನಾವು ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ. ಆರೋಪ ಸಾಬೀತಾದರೆ, ಐಪಿಸಿ 304 ರ ಅನ್ವಯ ಪ್ರಕರಣ ದಾಖಲಿಸುತ್ತೇವೆ ಎಂದು  ಪೊಲೀಸರು ತಿಳಿಸಿದ್ದಾರೆ. ದಯಾಶಂಕರ್ ದುಬೆ ಕುಟುಂಬದ ಏಕೈಕ ಆದಾಯದ ಮೂಲವಾಗಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಗುಜರಾತಲ್ಲಿ ಇದೇ ರೀತಿ ಘಟನೆ: ಇನ್ನು 16 ವರ್ಷದ ಯುವಕನ ಗುದನಾಳಕ್ಕೆ ಆತನ ಸ್ನೇಹಿತ ಏರ್ ಕಂಪ್ರೆಸರ್ ಪೈಪ್ ತುರುಕಿ ಯುವಕ ಸಾವನ್ನಪ್ಪಿದ್ದ ಘಟನೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಕಳೆದ ಜುಲೈನಲ್ಲಿ ನಡೆದಿತ್ತು.  ಮೋಜಿಗಾಗಿ ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿದ್ದ.  ಮೃತ ಯುವಕ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯವನಾಗಿದ್ದು ಕಂಪನಿಯೊಂದರಲ್ಲಿ ಮರಗೆಲಸ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿ ಕುಲದೀಪ್ ವಿಜಯಭಾಯ್ ವಿರುದ್ಧ ಐಪಿಸಿಯ ಸೆಕ್ಷನ್ 304  ಅನ್ವಯ ಪ್ರಕರಣ ದಾಖಲಿಸಲಾಗಿತ್ತು. 

ಗುಜರಾತ್‌ ಘಟನೆ: ತಮಾಷೆಗಾಗಿ ಗುದನಾಳಕ್ಕೆ ಏರ್ ಕಂಪ್ರೆಸರ್ ಪೈಪ್ ತುರುಕಿದ ಸ್ನೇಹಿತ: ಯುವಕ ಸಾವು

Latest Videos
Follow Us:
Download App:
  • android
  • ios