ನವದೆಹಲಿ[ನ.26]: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ದೇಹದಿಂದ 7.4 ಕೆ.ಜಿ. ತೂಕದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ದೆಹಲಿ ವೈದ್ಯರು ಯಶಸ್ವಿಯಾಗಿದ್ದಾರೆ. ವಿಶ್ವದಲ್ಲೇ ಅತಿದೊಡ್ಡ ಮೂತ್ರಪಿಂಡ ಎನಿಸಿಕೊಂಡಿದ್ದು, ಗಿನ್ನೆಸ್‌ ಬುಕ್‌ ಆಫ್‌ ರೆಕಾರ್ಡ್‌ಗೂ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಎರಡು ತಲೆ, ಮೂರು ಕೈ ಇರುವ ಮಗು ಜನನ: ಶಸ್ತ್ರಕ್ರಿಯೆಗೆ ವೈದ್ಯರ ಮಂಥನ!

ಹೊಟ್ಟೆನೋವು ಹಾಗೂ ಜ್ವರದ ಕಾರಣದಿಂದ ವ್ಯಕ್ತಿಯೊಬ್ಬ ದೆಹಲಿಯ ಗಂಗಾರಾಮ್‌ ಆಸ್ಪತ್ರೆಗೆ ದಾಖಲಾಗಿದ್ದ. ತಪಾಸಣೆಯ ವೇಳೆ ಮೂತ್ರಕೋಶದ ಒಳಗೆ ಆಂತರಿಕ ರಕ್ತಸ್ರಾವ ಹಾಗೂ ಎಡ ಕಿಡ್ನಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕಿಡ್ನಿ ಊದಿಕೊಂಡು ರೋಗಿಯ ಹೊಟ್ಟೆಭಾಗವವನ್ನು ಸಂಪೂರ್ಣ ಆವರಿಸಿಕೊಂಡಿತ್ತು. ಹೀಗಾಗಿ ಕಿಡ್ನಿಯನ್ನು ಶಸ್ತ್ರಕಿತ್ಸೆಯ ಮೂಲಕ ಕತ್ತರಿಸುವ ನಿರ್ಧಾರಕ್ಕೆ ಬರಲಾಯಿತು. ಶಸ್ತ್ರ ಚಿಕತ್ಸೆಯ ಬಳಿಕ ರೋಗಿ ಚೇತರಿಸಿಕೊಂಡಿದ್ದು ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗಂಡ್ಮಗು ಆಸೆ: 11 ಹೆಣ್ಮಕ್ಳಾದ್ಮೇಲೆ ಹೊರ ಬಂದಲ್ಯೋ ಕೂಸೇ!

ಸಾಮಾನ್ಯವಾಗಿ ಮಾನವನ ಮೂತ್ರಪಿಂಡ 120ರಿಂದ 150 ಗ್ರಾಮ್‌ ಇರುತ್ತದೆ. ಆದರೆ, ಇದೀಗ ಹೊರತೆಗೆಯಲಾದ ಕಿಡ್ನಿ 2 ನವಜಾತ ಮಗುವಿನಷ್ಟುತೂಕ ಹೊಂದಿದೆ. ಹಿಂದೆ 2017ರಲ್ಲಿ 4.25 ಕೆ.ಜಿ. ತೂಕದ ಕಿಡ್ನಿಯನ್ನು ಹೊರತೆಗೆದಿದ್ದು ಇದುವರೆಗಿನ ಅತಿದೊಡ್ಡದು ಎಂದು ಗಿನ್ನೆಸ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಾಗಿದೆ.