ಪ್ರಚಾರ ಕೆಲಸ ಬದಿಗಿಟ್ಟು ಹೆರಿಗೆ ಮಾಡಿಸಿದ ವೈದ್ಯೆ; ಮೊದಲು ಕರ್ತವ್ಯ ಆಮೇಲೆ ರಾಜಕೀಯ ಎಂದ ಟಿಡಿಪಿ ಅಭ್ಯರ್ಥಿ
ಆಂಧ್ರಪ್ರದೇಶದ ದರ್ಸಿ ವಿಧಾನಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ನಿಂತಿರುವ ವೈದ್ಯೆ ಗೊಟ್ಟಿಪತಿ ಲಕ್ಷ್ಮಿ ಪ್ರಚಾರ ಕೆಲಸ ಬದಿಗಿಟ್ಟು, ಬದಲಿಗೆ ಮಗುವಿನ ಹೆರಿಗೆ ಮಾಡಿಸಿ ಸುದ್ದಿಯಾಗಿದ್ದಾರೆ.
ಈ ವೈದ್ಯೆ ಈ ಬಾರಿ ಟಿಡಿಪಿ ಅಭ್ಯರ್ಥಿಯಾಗಿ ಆಂಧ್ರಪ್ರದೇಶದ ದರ್ಸಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದಾರೆ. ಆದರೆ, ಶುಕ್ರವಾರ ಚುನಾವಣಾ ಪ್ರಚಾರ ಬದಿಗಿಟ್ಟು ವೈದ್ಯಕೀಯ ತುರ್ತುಕರೆಗೆ ಓಗೊಟ್ಟು, ತಾಯಿ ಮಗುವಿನ ಪ್ರಾಣ ಉಳಿಸಿ ಸುದ್ದಿಯಾಗಿದ್ದಾರೆ.
ತೆಲುಗು ದೇಶಂ ಪಕ್ಷದ (ಟಿಡಿಪಿ) ಅಭ್ಯರ್ಥಿಯಾಗಿರುವ ವೈದ್ಯೆ ಗೊಟ್ಟಿಪತಿ ಲಕ್ಷ್ಮಿ ತಾಯಿ ಮತ್ತು ಮಗುವನ್ನು ಉಳಿಸಲು ತನ್ನ ಚುನಾವಣಾ ಪ್ರಚಾರವನ್ನು ಮುಂದೂಡಿದ್ದಾರೆ.
ಅವರು ಗುರುವಾರ ಪ್ರಚಾರಕ್ಕಾಗಿ ಹೊರಡಲಿದ್ದರು. ಗರ್ಭಪಾತಕ್ಕೆ ಕಾರಣವಾಗಬಹುದಾಗಿದ್ದ ಆಮ್ನಿಯೋಟಿಕ್ ದ್ರವವನ್ನು ಕಳೆದುಕೊಂಡು ಗುಂಟೂರಿನ ಆಸ್ಪತ್ರೆಗೆ ದಾಖಲಾದ ಮಹಿಳೆಯ ಬಗ್ಗೆ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಹೋಗಿ ಸಿ ಸೆಕ್ಷನ್ ಮೂಲಕ ಮಗುವನ್ನು ಹೊರ ತೆಗೆದಿದ್ದಾರೆ. ತಾಯಿ ಮಗು ಇಬ್ಬರೂ ಕ್ಷೇಮವಾಗಿದ್ದಾರೆ.
ಇಸ್ಲಾಂ ದೇಶದಲ್ಲಿದ್ದಿ ಎಂದು ಯೂಟ್ಯೂಬರ್ ತಲೆಗೆ ಬಟ್ಟೆ ಹಾಕಿದ ಪಾಕ್ ಯುವಕ; ಆಕೆಯ ಪ್ರತಿಕ್ರಿಯೆಗೆ ಶಹಬ್ಬಾಸ್ ಎಂದ ನೆಟಿಜನ್ಸ್ ..
ಏತನ್ಮಧ್ಯೆ, ಲಕ್ಷ್ಮಿ ತನ್ನ ರೋಗಿಯೊಂದಿಗೆ ಇರುವ ವೀಡಿಯೊವನ್ನು ಟಿಡಿಪಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ದರ್ಸಿ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿರುವ ತೆಲುಗುದೇಶಂ ಅಭ್ಯರ್ಥಿ ಡಾ.ಗೊಟ್ಟಿಪತಿ ಲಕ್ಷ್ಮಿಯ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಡಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿ 'ಒಳ್ಳೆಯ ಕೆಲಸ!' ಎಂದಿದ್ದಾರೆ.
ಲಕ್ಷ್ಮಿ ಅವರು ಟಿಡಿಪಿಯ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ ಮತ್ತು 'ಈ ಜಗತ್ತಿನಲ್ಲಿ ಯಾವುದೂ ನನಗೆ ಈ ಭೂಮಿಗೆ ಜೀವವನ್ನು ಸ್ವಾಗತಿಸುವುದಕ್ಕಿಂತ ಹೆಚ್ಚಿನ ಸಂತೋಷವನ್ನು ತರುವುದಿಲ್ಲ. ಶಿಶುಗಳು ಮತ್ತು ನಗು ನನ್ನನ್ನು ಮುಂದುವರಿಸಲು ಪ್ರೇರೇಪಿಸುತ್ತದೆ. ಒಳ್ಳೆಯ ದಿನವಾಗಿತ್ತು. ಟಿಡಿಪಿ ಗೆದ್ದ ನಂತರ ನಾನು ಇಲ್ಲಿ ಆಸ್ಪತ್ರೆಯನ್ನು ನಿರ್ಮಿಸುತ್ತೇನೆ' ಎಂದಿದ್ದಾರೆ.
ಇದು ಆ್ಯಂಟಿಲಿಯಾವಲ್ಲ, ಮುಖೇಶ್ ಅಂಬಾನಿಯ ಈ ಬಂಗಲೆಯಲ್ಲಿ ಇವೆ 49 ಬೆಡ್‌ರೂಮ್ಸ್, ಆಸ್ಪತ್ರೆ...
ಗೊಟ್ಟಿಪಾಟಿ ಲಕ್ಷ್ಮಿ ಈ ವರ್ಷ ಚುನಾವಣೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರು ಟಿಡಿಪಿಯಿಂದ ಕಣಕ್ಕಿಳಿದಿರುವ ದರ್ಸಿ ವಿಧಾನಸಭಾ ಕ್ಷೇತ್ರಕ್ಕೆ ಮೇ 13 ರಂದು ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ 2024 ಏಳು ಹಂತಗಳಲ್ಲಿ ನಡೆಯುತ್ತಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.