ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ ಬಂಧನ: ಆರೋಪಿ ಮೇಲೆ ಕಠಿಣ ಕ್ರಮ ಎಂದ ಸಿಎಂ
ಮಧ್ಯ ಪ್ರದೇಶದಲ್ಲಿ ಕುಡಿದ ಮತ್ತಲ್ಲಿ ಬುಡಕಟ್ಟು ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ನಾಯಕನನ್ನು ಬಂಧಿಸಲಾಗಿದೆ.
ಭೋಪಾಲ್ (ಜುಲೈ 5, 2023): ರಸ್ತೆಬದಿ ಕುಳಿತಿದ್ದ ಬುಡಕಟ್ಟು ಯುವಕನೊಬ್ಬನ ಮೇಲೆ ಬಿಜೆಪಿ ನಾಯಕ ಪ್ರವೇಶ್ ಶುಕ್ಲಾ ಮೂತ್ರ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಧ್ಯರಾತ್ರಿ ಬುಡಕಟ್ಟು ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ನಾಯಕನನ್ನು ಬಂಧಿಸಲಾಗಿದೆ. ಈ ಕೃತ್ಯದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಕ್ಯಾಮರಾದಲ್ಲಿ ಸೆರೆಯಾದ ವ್ಯಕ್ತಿ ಪ್ರವೇಶ್ ಶುಕ್ಲಾ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ಒತ್ತಾಯಿಸಿದ್ದಾರೆ.
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಕಳೆದ ವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ಘಟನೆ ನಡೆದ 6 ದಿನಗಳ ನಂತರ ಮಂಗಳವಾರವಷ್ಟೇ ಈ ವಿಡಿಯೋವನ್ನು ಪೊಲೀಸರು ಪಡೆದುಕೊಂಡಿದ್ದರು ಎಂದೂ ತಿಳಿದುಬಂದಿದೆ. ಅಲ್ಲದೆ, ಪ್ರವೇಶ್ ಶುಕ್ಲಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294 (ಅಶ್ಲೀಲ ಕೃತ್ಯಗಳು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಮತ್ತು SC/ST ಕಾಯಿದೆಯ ಅಡಿಯಲ್ಲಿ ಶುಕ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದೂ ತಿಳಿದುಬಂದಿದೆ.
ಇದನ್ನು ಓದಿ: Breaking: ಮಹಾರಾಷ್ಟ್ರದಲ್ಲಿ ಮತ್ತೊಂದು ಭೀಕರ ಅಪಘಾತ: ಯಮ ಸ್ವರೂಪಿ ಟ್ರಕ್‌ಗೆ 15 ಮಂದಿ ಬಲಿ, 20ಕ್ಕೂ ಹೆಚ್ಚು ಜನರಿಗೆ ಗಾಯ
ಈ ಮಧ್ಯೆ, ಈ ವೈರಲ್ ವಿಡಿಯೋಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರವೇಶ್ ಶುಕ್ಲಾ ವಿರುದ್ಧ ಆರೋಪ ಹೊರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿಯೂ ಹೇಳಿದ್ದರು. ಅಲ್ಲದೆ, ಆರೋಪಿಗೆ "ಕಠಿಣವಾದ ಶಿಕ್ಷೆ" ಯನ್ನು ಸರ್ಕಾರ ಖಚಿತಪಡಿಸುತ್ತದೆ. "ನಾವು ಅವನನ್ನು (ಅಪರಾಧಿ) ಯಾವುದೇ ಕಾರಣಕ್ಕೂ ಸುಮ್ಮನೇ ಬಿಡುವುದಿಲ್ಲ’’ ಎಂದೂ ಶಿವರಾಜ್ ಸಿಂಗ್ ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಇನ್ನು, ಆರೋಪಿ ಬಿಜೆಪಿಗೆ ಸೇರಿದವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ಸಿಂಗ್ ಚೌಹಾಣ್, ಅಪರಾಧಿಗಳಿಗೆ ಜಾತಿ, ಧರ್ಮ ಮತ್ತು ಪಕ್ಷವಿಲ್ಲ. ಒಬ್ಬ ಅಪರಾಧಿ ಕೇವಲ ಅಪರಾಧಿ. ಅವನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, "ಅವರು ಯಾವುದೇ ಪಕ್ಷವಾಗಿದ್ದರೂ, ಯಾರೇ ತಪ್ಪು ಮಾಡಿದರೂ ಶಿಕ್ಷೆಗೆ ಗುರಿಯಾಗುತ್ತಾರೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕ ಬೀಚ್‌ನಲ್ಲಿ ಮಗನನ್ನು ರಕ್ಷಿಸುವಾಗ ಮುಳುಗಿ ಸತ್ತ ಟೆಕ್ಕಿ; ಮಗ ಅಪಾಯದಿಂದ ಪಾರು
ಘಟನೆಯ ವಿವರ..
ರಸ್ತೆ ಬದಿ ಕುಳಿತಿದ್ದ ಬುಡಕಟ್ಟು ಯುವಕನೊಬ್ಬನ ಮೇಲೆ ಬಿಜೆಪಿ ನಾಯಕ ಪ್ರವೇಶ್ ಶುಕ್ಲಾ ಮೂತ್ರ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಕೈಯಲ್ಲಿ ಸಿಗರೆಟ್ ಹಿಡಿದು ವ್ಯಕ್ತಿಯ ಮೇಲೆ ಶುಕ್ಲಾ ಮೂತ್ರ ವಿಸರ್ಜನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇದರ ಬೆನ್ನಲ್ಲೇ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದಾರೆ. ಪ್ರವೇಶ್ ಶುಕ್ಲಾ ಸಿಧಿ ಜಿಲ್ಲೆಯ ಬಿಜೆಪಿ ನಾಯಕನಾಗಿದ್ದು, ಈತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದ ಕೇರಳ ಮೂಲದ ವ್ಯಕ್ತಿ: 40 ವರ್ಷ ಶಿಕ್ಷೆ ವಿಧಿಸಿದ ಬ್ರಿಟನ್ ಕೋರ್ಟ್
ಈ ಘಟನೆ ಮೂರು ತಿಂಗಳ ಹಿಂದೆ ನಡೆದಿದ್ದು ಎನ್ನಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಅದು ಬೆಳಕಿಗೆ ಬಂದಿದ್ದು, ಮಂಗಳವಾರ ಪ್ರವೇಶ್ ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಪತ್ನಿ ಶವ 3 ದಿನ ಫ್ರೀಜರ್‌ನಲ್ಲಿಟ್ಟ ಪಾಪಿ ಪತಿ: ಗಂಡನಿಂದ್ಲೇ ಕೊಲೆ ಎಂದು ಮಹಿಳೆ ಕುಟುಂಬಸ್ಥರ ಆರೋಪ