ಸತತ ಕೋವಿಡ್‌ ಚಿಕಿತ್ಸೆ ನೀಡಿ 98 ದಿನ ಬಳಿಕ ಮನೆಗೆ ಮರಳಿದ ವೈದ್ಯ!|  ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ನಿಯೋಜಿಸಲಾಗಿದ್ದ ವೈದ್ಯ

ಪಣಜಿ(ಜು.05): ಮನೆಗೇ ತೆರಳದೆ ಸತತ 98 ದಿನಗಳ ಕಾಲ ಕೊರೋನಾ ಸೋಂಕಿತರ ಸೇವೆ ಮಾಡಿ ವೈದ್ಯರೊಬ್ಬರು ಮನೆಗೆ ಮರಳಿರುವ ಅಚ್ಚರಿಯ ಘಟನೆ ಗೋವಾದಲ್ಲಿ ನಡೆದಿದೆ.

ಡಾ.ಎಡ್ವಿನ್‌ ಗೋಮ್ಸ್‌ ಅವರನ್ನು ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ನಿಯೋಜಿಸಲಾಗಿತ್ತು. ರಾಜ್ಯದಲ್ಲಿ ಕೊರೋನಾ ಆರಂಭವಾದಾಗಿನಿಂದ ರಜೆಯನ್ನೂ ಪಡೆಯದೆ, ಮನೆಗೂ ತೆರಳದೆ ಸತತ 98 ದಿನಗಳ ಕಾಲ ಕೊರೋನಾ ರೋಗಿಗಳ ಸೇವೆ ಸಲ್ಲಿಸಿ, ಎಡ್ವಿನ್‌ ಶುಕ್ರವಾರ ಮನೆಗೆ ಮರಳಿದ್ದಾರೆ.

ಮಾಸ್ಕ್‌ ಧರಿಸದೆ ಓಡಾಡಿದರೆ ಸೀದಾ ಜೈಲು; ಸಿಎಂ ಆದೇಶ

ಎಡ್ವಿನ್‌ ಈವರೆಗೆ 333 ಕೊರೋನಾ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಿದ್ದು, ಅವರಲ್ಲಿ 153 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಎಡ್ವಿನ್‌ ಅವರ ಈ ಕಾರ‍್ಯಕ್ಕೆ ಹೂಮಳೆ ಸುರಿಸಿ ನೆರೆಹೊರೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.