ಮುಂಬೈ(ಅ. 13) ಇದೊಂದು ತರಹದ ವಿಚಿತ್ರ ರಾಜಕಾರಣದ ನಡೆ. ಶಾಸಕಾಂಗದ ಆಯಕಟ್ಟಿನ ಸ್ಥಾನದಲ್ಲಿರುವವರ ನಡುವೆ ಪತ್ರ ಸಮರ ನಡೆದು ಹೋಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ- ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡುವೆ ಪತ್ರ ಸಮರ ನಡೆದಿದ್ದು ಈಗ ದೊಡ್ಡ ಸುದ್ದಿ.

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಬರೆದ ಪತ್ರಕ್ಕೆ ಠಾಕ್ರೆ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ  ಧಾರ್ಮಿಕ ಪ್ರಾರ್ಥನಾ ಕೇಂದ್ರಗಳನ್ನು ತೆರೆಯಬೇಕು ಎಂದು ರಾಜ್ಯಪಾಲರು ಪತ್ರ ಬರೆದಿದ್ದರು.

ಮಹಾ ಸರ್ಕಾರವನ್ನೇ ನಡುಗಿಸಿದ್ದ ಕಂಗನಾ

ನೀವು ಶ್ರೀರಾಮನ ಭಕ್ತರು, ಹಿಂದುತ್ವ ಆರಾಧಕರು, ಈ ಬಗ್ಗೆ ಹಲವು ಕಡೆ ಹೇಳಿಕೊಂಡಿದ್ದೀರಿ. ವಿಠ್ಠಲ ರುಕ್ಮಿಣಿ ದೇವಾಲಯಕ್ಕೂ ಭೇಟಿ ನೀಡಿ ಬಂದಿರುವಿರಿ ಎಂದು ರಾಜ್ಯಪಾಲರು ಪತ್ರದಲ್ಲಿ ಉಲ್ಲೇಖ ಮಾಡಿದ್ದರು. ಇಷ್ಟಾದರೂ ರಾಜ್ಯುದಲ್ಲಿನ ಧಾರ್ಮಿಕ ಕೇಂದ್ರ ತೆರೆಯಲು ಯಾಕೆ ಅನುಮತಿ ನೀಡುತ್ತಿಲ್ಲ ಎಂಬುದು ಅಚ್ಚರಿ ತಂದಿದೆ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಠಾಕ್ರೆ,  ಹಿಂದುತ್ವದ ಬಗ್ಗೆ ನನಗೆ ನಿಮ್ಮಿಂದ ಪ್ರಮಾಣ ಪತ್ರ ಬೇಕಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಕೋಶ್ಯಾರಿ ಅವರಿಗೆ ಹಿಂದುತ್ವವೆಂದರೆ ಕೇವಲ ಧಾರ್ಮಿಕ ಪ್ರಾರ್ಥನಾ ಕೇಂದ್ರಗಳನ್ನು ತೆರೆಯುವುದು ಹಾಗೂ ತೆರೆಯದೇ ಇದ್ದರೆ ಸೆಕ್ಯುಲರ್ ಎಂದೆನಿಸುತ್ತಿದೆಯೇ?  ಕೊರೋನಾ ಪರಿಸ್ಥಿತಿ ನಿಮಗೆ ಗೊತ್ತಿಲ್ಲವೆ ಎಂದು ಪ್ರಶ್ನೆ ಮಾಡಿದ್ದರು. ಒಟ್ಟಿನಲ್ಲಿ ಮಹಾರಾಷ್ಟ್ರ ರಾಜಕಾರಣದಲ್ಲಿ  ಈ ಬೆಳವಣಿಗೆ ಹೊಸ ಚರ್ಚೆ ಹುಟ್ಟುಹಾಕಿರುವುದೆಂತೂ ಸತ್ಯ.