ನವದೆಹಲಿ[ಫೆ.26]: ಈಶಾನ್ಯ ದೆಹಲಿಯ ಮೌಜ್ಪುರ್ ಚೌಕ್ ನಲ್ಲಿ CAA ಪರ ರ್ಯಾಲಿಯನ್ನುದ್ದೇಶಿಸಿ ನೀಡಿದ್ದ ಬಿಜೆಪಿ ಮಾಜಿ ಶಾಸಕನ ಹೇಳಿಕೆ ದೆಹಲಿ ಧಂಗೆಗೆ ಮೂಲ ಕಾರಣ ಎಂಬ ಧ್ವನಿ ಎದ್ದಿದೆ. ಹೀಗಿರುವಾಗ ಮಂಗಳವಾರ ತಮ್ಮ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿರುವ ಕಪಿಲ್ ಮಿಶ್ರಾ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ನಿಜ ಹೇಳಿದ ನನ್ನ ವಿರುದ್ಧ ನಡೆಸುತ್ತಿರುವ ಅಭಿಯಾನಕ್ಕೆ ನಾನು ಹೆದರುವುದಿಲ್ಲ. ಕಾನೂನನ್ನು ಸಮರ್ಥಿಸಿಕೊಳ್ಳುತ್ತೇನೆ ಎಂದಿದ್ದಾರೆ.

"

ಆಮ್ ಆದ್ಮಿ ಪಕ್ಷದ ಮಾಜಿ ಶಾಸಕ ಹಾಗೂ ಈ ಬಾರಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಾಡೆಲ್ ಟೌನ್ ನಿಂದ ಸ್ಪರ್ಧಿಸಿ ಸೋಲನುಭವಿಸಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಭಾನುವಾರ ಜಾಫ್ರಾಬಾದ್ ನಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಇದಾದ ಬಳಿಕ ಸಿಎಎ ಪರ ಹಾಗೂ ವಿರೋಧಿ ಬಣಗಳ ನಡುವೆ ಗಲಭೆಗೆ ಕಾರಂವಾಗಿತ್ತು. ಈ ಗಲಭೆಗೆ ಈವರೆಗೂ ಸುಮಾರು 20 ಮಂದಿ ಬಲಿಯಾಗಿದ್ದು, ದೆಹಲಿಯ ನಾಲ್ಕು ಕಡೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಅಲ್ಲದೇ, ಕಂಡಲ್ಲಿ ಗುಂಡು ಹಾರಿಸುವ ಆದೇಶವನ್ನೂ ಜಾರಿಗೊಳಿಸಲಾಗಿದೆ.

ಮಂಗಳವಾರದಂದು ಟ್ವೀಟ್ ಮಾಡಿರುವ ಕಪಿಲ್ ಮಿಶ್ರಾ ತನಗೆ ಬೈಗುಳ ನೀಡಲಾಗುತ್ತಿದೆ, ಜೀವ ಬೆದರಿಕೆ ಹಾಕಲಾಗುತ್ತಿದೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಸಮರ್ಥಿಸಿ ನಾನು ಯಾವ ತಪ್ಪನ್ನೂ ಮಾಡಿಲ್ಲ ಎಂದಿದ್ದಾರೆ. ಈ ಸಂಬಂಧ ಬರೆದುಕೊಂಡಿರುವ ಮಿಶ್ರಾ 'ನನಗೆ ಹಲವಾರು ಮಂದಿ ಸಾಯಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ರಾಜಕಾರಣಿಗಳು, ಪತ್ರಕಾರರು ಸೇರಿದಂತೆ ಹಲವಾರು ಮಂದಿ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ. ನಾನು ಹೆಸರುವುದಿಲ್ಲ, ಯಾಕೆಂದರೆ ನಾನೇನು ತಪ್ಪು ಮಾಡಿಲ್ಲ' ಎಂದಿದ್ದಾರೆ.

ಕಪಿಲ್ ಮಿಶ್ರಾ ಹೇಳಿದ್ದೇನು?

ದೆಹಲಿ ಗಲಭೆಗೂ ಮುನ್ನ ಈಶಾನ್ಯ ದೆಹಲಿಗೆ ಭೇಟಿ ನೀಡಿದ್ದ ಕಪಿಲ್ ಮಿಶ್ರಾ ಪೌರತ್ವ ತಿದ್ದುಪಡಿ ಕಾಯ್ದೆ ವಿರೋದಧಿಸುವವರ ವಿರುದ್ಧ ಭಾಷಣ ಮಾಡಿದ್ದರು. ಇದರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಮಿಶ್ರಾ ಪೊಲೀಸರಿಗೆ ಮೂರು ದಿನದ ಅವಕಾಶ ನೀಡುತ್ತಾ, ಮೂರು ದಿನದೊಳಗೆ ಹಾದಿ ಸುಗಮ ಮಾಡಿ ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದಿದ್ದರು. 

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"