ನಿರ್ಮಾಣ ಹಂತದಲ್ಲಿರುವ ಆಯೋಧ್ಯೆ ರಾಮ ಮಂದಿರದಲ್ಲಿ ದಿಪೋತ್ಸವ ಸಂಭ್ರಮ!

ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಆಯೋಧ್ಯೆಯಲ್ಲಿ ಲಕ್ಷ ಲಕ್ಷ ದೀಪಬೆಳಗಿಸಿ ದೀಪೋತ್ಸವ ಆಚರಿಸಲಾಗಿದೆ. ಮತ್ತೊಂದು ವಿಶೇಷ ಅಂದರೆ ನಿರ್ಮಾಣ ಹಂತದಲ್ಲಿರುವ ಶ್ರೀ ರಾಮ ಮಂದಿರದಲ್ಲೂ ದಿಪೋತ್ಸವ ಸಂಭ್ರಮ ಹರಡಿದೆ. 

Diwali Festival 2023 Under Construction Shri Ram mandir celebrate depostav ckm

ಆಯೋಧ್ಯೆ(ನ.11) ಶ್ರೀ ರಾಮ ಮಂದಿರ ಉದ್ಘಾಟನೆಗೆ ತಯಾರಿಗಳು ಆರಂಭಗೊಂಡಿದೆ. ಜನವರಿ 22 ರಂದು ಭವ್ಯ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿದೆ.  ಸದ್ಯ ಅಂತಿಮ ಹಂತದ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ. ಇದರ ನಡುವೆ ದೀಪಾವಳಿ ಹಬ್ಬಕ್ಕೆ ಶ್ರೀ ರಾಮನ ನಗರಿ ಸಿಂಗಾರಗೊಂಡಿದೆ. ಇಂದು ಆಯೋಧ್ಯೆಯ ಸರಯು ನದಿ ತಟದಲ್ಲಿ 24 ಲಕ್ಷ ದೀಪ ಬೆಳಗಿಸಿ ದೀಪೋತ್ಸವ ಆಚರಿಸಲಾಗಿದೆ. ಇದೇ ವೇಳೆ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದಲ್ಲೂ ದೀಪೋತ್ಸವ ಆಚರಣೆ ನಡೆದಿದೆ. ಸಂಪೂರ್ಣ ಮಂದಿರವನ್ನು ಹೂವು ಹಾಗೂ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಜನರು ರಾಮ ಮಂದಿರದೊಳಗೆ ತೆರಳಿ ಭಕ್ತಿಯಿಂದ ನಮಿಸಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿದೆ.

ರಾಮ ಮಂದಿರ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಭವ್ಯ ಮಂದಿರ ಉದ್ಘಾಟನೆ ಮಾಡಲಿದ್ದಾರೆ. ಸದ್ಯ ಮಂದಿರದ ಕಾಮಗಾರಿಗಳು ಭರದಿಂದ ಸಾಗಿದೆ. ಆದರೆ ಆಯೋಧ್ಯೆಯಲ್ಲಿ ಹಬ್ಬದ ವಾತಾವರಣ ಡಬಲ್ ಆಗಿದೆ. ಒಂದೆಡೆ ದೀಪಾವಳಿ ಹಬ್ಬ, ಮತ್ತೊಂದೆಡೆ ಇನ್ನೆರಡು ತಿಂಗಳಲ್ಲಿ ರಾಮ ಮಂದಿರ ಉದ್ಘಾಟನೆ. ಇಂದು ನಡೆದ ದೀಪೋತ್ಸವ ಆಚರಣೆಯಲ್ಲಿ ರಾಮ ಮಂದಿರವನ್ನು ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು.

ಆಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ, 24 ಲಕ್ಷ ದೀಪದ ಮೂಲಕ ಗಿನ್ನಿಸ್ ದಾಖಲೆ!

ಇಂದು ಸರಯು ನದಿ ತಟದಲ್ಲಿ 24 ಲಕ್ಷ ದೀಪ ಬೆಳಗುವ ಆರತಿ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ ನೀಡಿದ್ದರು. ಆಯೋಧ್ಯೆಗೆ ಆಗಮಿಸಿದ ಯೋಗಿ ಆದಿತ್ಯನಾಥ್, ಬರೋಬ್ಬರಿ 24 ಲಕ್ಷ ದೀಪ ಬೆಳಗುವ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಮೂಲಕ ಏಕಕಾಲಕ್ಕೆ ಗರಿಷ್ಠ ದೀಪ ಬೆಳಗಿ ಗಿನ್ನಿಸ್ ದಾಖಲೆಯನ್ನು ಬರೆದಿದ್ದಾರೆ.

 

 

ಶ್ರೀ ರಾಮ 14 ವರ್ಷ ವನವಾಸ ಮುಗಿಸಿ ಆಯೋಧ್ಯೆಗೆ ಆಗಮಿಸಿದ ಈ ದಿನವನ್ನು ದೀಪಬೆಳಗಿ ಆಚರಣೆ ಮಾಡಲಾಗುತ್ತದೆ. ಅಂದು ಆಯೋಧ್ಯೆಗೆ ಮರಳಿದ ಶ್ರೀರಾಮನಿಗೆ ದೀಪ ಬೆಳಗಿ,ಹೂವಿನ ಅಲಂಕರಾ ಮಾಡಿ ಸ್ವಾಗತ ನೀಡಲಾಗಿತ್ತು. ಇದೀಗ ಅದೇ ರೀತಿಯಲ್ಲಿ ಆಯೋಧ್ಯೆ ಸಿಂಗಾರಗೊಂಡಿದೆ.  ಇನ್ನು ಎರಡು ತಿಂಗಳಲ್ಲಿ ರಾಮ ಲಲ್ಲಾ ಭವ್ಯ ರಾಮ ಮಂದಿರದಲ್ಲಿ ವಿರಾಜಮಾನರಾಗುತ್ತಾನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

 

 

ಆಯೋಧ್ಯೆ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಗಳು ಆಗಾಗಲೇ ಆರಂಭಗೊಂಡಿದೆ. ಇತ್ತೀಚೆಗೆ ಅಕ್ಷತೆ ಪೂಜೆ ನೆರವೇರಿತ್ತು.ಜನವರಿ 18 ರಿಂದಲೇ ಹಲವು ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದೆ.

Latest Videos
Follow Us:
Download App:
  • android
  • ios