ಬಿಹಾರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಅಧೀನ ಪೊಲೀಸ್ ಅಧಿಕಾರಿಗಳನ್ನು ಲಾಕಪ್‌ನಲ್ಲಿ ಇರಿಸಿದ್ದರು ಎಂದು ಹೇಳಲಾಗಿದೆ. ಈ ಸಂಬಂಧದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಲಾಗಿದೆ.
ಪೊಲೀಸರು (Police) ಕಳ್ಳರನ್ನು (Thief) ಲಾಕಪ್‌ನಲ್ಲಿ (Lockup) ಇರಿಸುವುದು ಸಾಮಾನ್ಯ. ಆದರೆ, ಪೊಲೀಸ್ ಅಧಿಕಾರಿಯೇ ಪೊಲೀಸರನ್ನು ಲಾಕಪ್‌ನಲ್ಲಿ ಇರಿಸುತ್ತಾರೆ ಅಂದರೆ ಹೇಗೆ..? ಅಲ್ಲದೆ, ಈ ಘಟನೆಯಲ್ಲಿ ಪೊಲೀಸರು ಕಳ್ಳತನ ಮಾಡಿ ಜೈಲಿಗೆ ಹೋಗಿಲ್ಲ. ಬದಲಾಗಿ, ಅವರ ಕಾರ್ಯವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (Senior Police Officer) ಲಾಕಪ್‌ಗೆ ಹಾಕಿದ್ದಾರಂತೆ. ಹೌದು, ಬಿಹಾರದ (Bihar) ನವಾಡಾ (Nawada) ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಐವರು ಅಧೀನ ಅಧಿಕಾರಿಗಳ ಕಾರ್ಯವೈಖರಿಯಿಂದ ಅತೃಪ್ತರಾಗಿ 2 ಗಂಟೆಗಳ ಕಾಲ ಲಾಕಪ್‌ನಲ್ಲಿ ಇರಿಸಿದ್ದರು ಎಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ (Social Media) ವ್ಯಾಪಕವಾಗಿ ಶೇರ್ (Share) ಮಾಡಿಕೊಳ್ಳುತ್ತಿರುವ ಈ ಘಟನೆಯ ವಿಡಿಯೋದಲ್ಲಿ, ಐವರು ಬಿಹಾರ ಪೊಲೀಸರು ಲಾಕಪ್‌ನಲ್ಲಿ ಪರಸ್ಪರ ಮಾತನಾಡುತ್ತಿರುವುದನ್ನು ಕಾಣಬಹುದು. ಮೂವರು ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳು (Assistant Sub - inspectors) ಮತ್ತು ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳ (Sub - inspectors) ಕಾರ್ಯವೈಖರಿ (Performance) ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ನವಾಡಾ ಎಸ್‌ಪಿ (Superintendent of Police) ಗೌರವ್ ಮಂಗಳಾ ಗುರುವಾರ ರಾತ್ರಿ 2 ಗಂಟೆಗಳ ಕಾಲ ಅವರನ್ನು ಲಾಕಪ್‌ನಲ್ಲಿ ಇರಿಸಿದರು ಎಂದು ಹೇಳಲಾಗಿದೆ.
ಆದರೆ, ಸುದ್ದಿಗಾರರು ಈ ಬಗ್ಗೆ ಸಂಪರ್ಕಿಸಿದಾಗ ಅದು ‘ನಕಲಿ ಸುದ್ದಿ’ (Fake news) ಎಂದು ಅವರು ಹೇಳಿದರು. ಅಲ್ಲದೆ, ಈ ವಿಚಾರದ ಬಗ್ಗೆ ಅವರ ಪ್ರತಿಕ್ರಿಯೆಗಳನ್ನು ಕೇಳಲು ಹಲವು ಬಾರಿ ಪ್ರಯತ್ನಿಸಿದರೂ ಹಿರಿಯ ಅಧಿಕಾರಿಗಳು ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಬಿಹಾರ ಪೊಲೀಸ್ ಅಸೋಸಿಯೇಷನ್ (Bihar Police Association) ಶನಿವಾರ ಮನವಿ ಮಾಡಿದೆ. ಇನ್ನು, ಎಸ್‌ಪಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು, ಆದರೆ ಅವರು ಪದೇ ಪದೇ ಕರೆ ಮಾಡಿದರೂ ಸ್ಪಂದಿಸಲಿಲ್ಲ ಎಂದು ಸಂಘದ ಅಧ್ಯಕ್ಷ (President) ಮೃತ್ಯುಂಜಯ್ ಕುಮಾರ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: Instagram Reels ಮಾಡಲು ಹೋಗಿ ರೈಲು ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕ
"ನಮ್ಮ ನವಾಡಾ ಶಾಖೆಯಲ್ಲಿ ಘಟನೆ ನಡೆದ ಕೂಡಲೇ ನಮಗೆ ಮಾಹಿತಿ ಸಿಕ್ಕಿತು ಮತ್ತು ಪೊಲೀಸ್ ಸಿಬ್ಬಂದಿಯ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿಯೂ (Whats App Groups) ಇದನ್ನು ಚರ್ಚಿಸಲಾಗುತ್ತಿದೆ. ಈ ರೀತಿಯ ಘಟನೆಗಳು ವಸಾಹತುಶಾಹಿ ಅವಧಿಯನ್ನು (Colonial Period) ನೆನಪಿಸುತ್ತದೆ. ಈ ಘಟನೆಯು ಈ ರೀತಿಯ ಮೊದಲನೆಯದು ಮತ್ತು ಕಳಂಕ ತರಬಹುದು. ಬಿಹಾರ ಪೊಲೀಸರ ಚಿತ್ರಣ, ನ್ಯಾಯಾಂಗ ತನಿಖೆ ಮತ್ತು ಸಿಸಿಟಿವಿ ದೃಶ್ಯಗಳ ಸಂಪೂರ್ಣ ತನಿಖೆಗೆ ನಾವು ಒತ್ತಾಯಿಸುತ್ತೇವೆ’’ ಎಂದು ಅವರು ಹೇಳಿದರು.
ಅಲ್ಲದೆ, ಈ ವಿಷಯವನ್ನು ಮುಚ್ಚಿಹಾಕಲು ಎಸ್‌ಪಿ ನೊಂದ ವ್ಯಕ್ತಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪಗಳಿವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಹಾಳುಮಾಡಲು ಪ್ರಯತ್ನಿಸಬಹುದು. ಈ ಹಿನ್ನೆಲೆ ಆದಷ್ಟು ಬೇಗ ತನಿಖೆಯನ್ನು ಪ್ರಾರಂಭಿಸಬೇಕು ಮತ್ತು ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ (Indian Penal Code) ಎಫ್ಐಆರ್ ದಾಖಲಿಸಬೇಕು’’ ಎಂದು ಸಂಘ ಆಗ್ರಹಿಸಿದೆ.
ಇದನ್ನೂ ಓದಿ: Viral Video: ಕೂದಲೆಳೆ ಅಂತರದಲ್ಲಿ ರೈಲು ಅಪಘಾತ ತಪ್ಪಿಸಿಕೊಂಡ ಮಹಿಳೆ: ಸಿಬ್ಬಂದಿಯಿಂದ ಬಚಾವ್
