Kaali Poster Controversy ಬುದ್ಧಿ ಕಲಿಯದ ಲೀನಾ, ಈಗ ಶಿವ ಪಾರ್ವತಿಗೂ ಅವಮಾನ!

ಕಾಳಿ ಮಾತೆಯನ್ನು ಸಿಗರೇಟ್‌ ಸೇದುತ್ತಿರುವ ಹಾಗೆ, ಸಲಿಂಗಿಗಳಿಗೆ ಬೆಂಬಲ ನೀಡುವ ಹಾಗೆ ಸಾಕ್ಷ್ಯಚಿತ್ರದ ಪೋಸ್ಟರ್‌ ಪ್ರಕಟಿಸಿ ಅವಮಾನ ಮಾಡಿದ್ದ ನಿರ್ದೇಶಕಿ ಲೀಕಾ ಮಣಿಮೇಕಲೈ ಮತ್ತೊಂದು ವಿವಾದಿತ ಪೋಸ್ಟರ್‌ಅನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದರಲ್ಲಿ ಶಿವ-ಪಾರ್ವತಿಯ ವೇಷ ಹಾಕಿಕೊಂಡಿರುವ ವ್ಯಕ್ತಿಗಳು ಸಿಗರೇಟ್‌ ಸೇದುತ್ತಿರುವ ಚಿತ್ರವನ್ನು ಪ್ರಕಟಿಸಿದ್ದಾರೆ.
 

Director Leena Manimekalai new tweet after Kaali poster controversy shows Shiva Parvati smoking cigarette san

ನವದೆಹಲಿ (ಜುಲೈ 7): ಕಾಳಿ (Kaali) ಚಿತ್ರದ ಪೋಸ್ಟರ್‌ನಲ್ಲಿ "ಕಾಳಿ ಮಾತೆ"ಯನ್ನು ವಿವಾದಿತ ರೀತಿಯಲ್ಲಿ ಚಿತ್ರಿಸಿದ ಬೆನ್ನಲ್ಲಿಯೇ ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai)  ಮತ್ತೊಂದು ವಿವಾದಿತ ಟ್ವೀಟ್‌ ಮಾಡಿದ್ದು, ಅವರ ಈ ಟ್ವೀಟ್‌ ಕೂಡ ಹಿಂದು ಧಾರ್ಮಿಕ ಭಾವನೆಗಳಿಗೆ ತರುವ ಅಂಶಗಳನ್ನು ಹೊಂದಿದೆ. ಪಾರ್ವತಿ ದೇವಿ (Parvati Devi) ಹಾಗೂ ಶಿವನ (Shiva) ಪಾತ್ರ ಮಾಡಿರುವ ವ್ಯಕ್ತಿಗಳು ಸಿಗರೇಟ್‌ ಸೇದುತ್ತಿರುವ (smoking cigarette) ಚಿತ್ರವನ್ನು ಲೀನಾ ಪೋಸ್ಟ್‌ ಮಾಡಿದ್ದಾರೆ.

ಫೋಟೋವನ್ನು ಟ್ವೀಟ್ ಮಾಡಿದ ಲೀನಾ ಮಣಿಮೇಕಲೈ, 'ಸಮ್‌ವೇರ್‌ ಎಲ್ಸ್‌' ಎಂದು ಬರೆದಿದ್ದಾರೆ. ಈ ಕುರಿತು ನೆಟಿಜನ್ಸ್‌ಗಳು ಆಕ್ರೋಶ ಹೊರಹಾಕಿದ್ದಾರೆ. ಈಕೆ ಕೇವಲ ದ್ವೇಷವನ್ನು ಹರಡುತ್ತಿದ್ದಾಳೆ ಎಂದು ಟೀಕಿಸಿದ್ದಾರೆ. ಧರ್ಮವನ್ನು ಅವಮಾನಿಸುವ ಇಂಥ ಕೆಲಸಗಳನ್ನು ನಿಲ್ಲಿಸಬೇಕು ಎಂದು ಬರೆದಿದ್ದಾರೆ.

ಲೀನಾ ಮಣಿಮೇಕಲೈ ಟ್ವೀಟ್ ಮಾಡಿರುವ ಈ ಫೋಟೋ ಕುರಿತಾಗಿ ರಾಜಕಾರಣಿಗಳು ಟೀಕೆ ಮಾಡಿದ್ದಾರೆ. ಈ ಕುರಿತು ಬಿಜೆಪಿ ಮುಖಂಡ ಶಹಜಾದ್ ಪೂನವಾಲ (shehzad poonawalla) ಆಕ್ರೋಶದಿಂದ ಟ್ವೀಟ್‌ ಮಾಡಿದ್ದು, ಇದು ಸೃಜನಶೀಲ ಅಭಿವ್ಯಕ್ತಿಯ ವಿಷಯವಲ್ಲ, ಇದು ಉದ್ದೇಶಪೂರ್ವಕ ಪ್ರಚೋದನೆಯ ವಿಷಯವಾಗಿದೆ ಎಂದು ಅವರು ಬರೆದಿದ್ದಾರೆ.

Director Leena Manimekalai new tweet after Kaali poster controversy shows Shiva Parvati smoking cigarette san

ಹಿಂದೂಗಳ ನಿಂದನೆ ಎಂದರೆ ಅದು ಜಾತ್ಯಾತೀತತೆ, ಹಿಂದೂ ನಂಬಿಕೆಯ ಅವಮಾನ ಎಂದರೆ ಉದಾರವಾದವಾಗಿದೆ ಎಂದು ಅವರು ಬರೆದಿದ್ದಾರೆ. ದೇಶದಲ್ಲಿರುವ ಎಡಪಕ್ಷಗಳು, ಕಾಂಗ್ರೆಸ್‌ ಹಾಗೂ ಟಿಎಂಪಿ ಬೆಂಬಲ ನೀಡುತ್ತಿರುವ ಕಾರಣ ಆಕೆಗೆ ಪ್ರೋತ್ಸಾಹ ಸಿಕ್ಕಿದಂತಾಗಿದೆ ಎಂದು ಶೆಹಜಾದ್‌ ಪೊನವಾಲಾ ಬರೆದಿದ್ದಾರೆ. ಕಾಳಿ ಮಾತೆಯ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ಟಿಎಂಪಿ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ವಿರುದ್ಧವೂ ಈವರೆಗೂ ಕ್ರಮ ಕೈಗೊಳ್ಳಲಾಗಿಲ್ಲ.

ವಿವಾದ ಎಬ್ಬಿಸಿದ್ದ ಕಾಳಿ ಚಿತ್ರದ ಪೋಸ್ಟರ್‌: ಇದಕ್ಕೂ ಮುನ್ನ ಲೀನಾ ಮಣಿಮೇಕಲೈ ನಿರ್ದೇಶನದ ಸಾಕ್ಷ್ಯಚಿತ್ರ ಕಾಳಿ ಚಿತ್ರದ ಪೋಸ್ಟರ್ ವಿವಾದ ಎಬ್ಬಿಸಿತ್ತು. ಆ ಪೋಸ್ಟರ್ ನಲ್ಲಿ ಕಾಳಿ ಮಾತೆಯನ್ನು ಸಿಗರೇಟ್ ಸೇದುತ್ತಿರುವಂತೆ ತೋರಿಸಲಾಗಿತ್ತು. ವಿವಾದದ ನಂತರ, ಸ್ವತಃ ಟ್ವಿಟರ್, ಲೀನಾ ಮಣಿಮೇಕಲೈ ಅವರ ಪೋಸ್ಟ್ ಅನ್ನು ತೆಗೆದುಹಾಕಿತ್ತು. ಅದಲ್ಲದೆ, ಸಲಿಂಗಿಗಳ ಧ್ವಜವನ್ನು ಕಾಳಿ ಮಾತೆಯ ಕೈಯಲ್ಲಿರುವಂತೆ ಚಿತ್ರಿಸುವತೆಯೂ ಪೋಸ್ಟರ್‌ ರಚಿಸಲಾಗಿತ್ತು. ಈ ಕುರಿತಾಗಿ ಸ್ವತಃ ಕೇಂದ್ರ ಸರ್ಕಾರವೇ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು.

ಕಾಳಿಮಾತೆ ಬಾಯಲ್ಲಿ ಸಿಗರೇಟ್‌ ಇಟ್ಟು ವಿಕೃತಿ ಮೆರೆದ ನಿರ್ಮಾಪಕಿ ಲೀನಾ

ಕಾಳಿ ಚಿತ್ರದ ಪೋಸ್ಟರ್ ವಿವಾದದ ನಡುವೆಯೇ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಈ ಚಿತ್ರದ ಪೋಸ್ಟರ್‌ಗಾಗಿ ದೆಹಲಿ, ಯುಪಿ ಮತ್ತು ಮುಂಬೈನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತಮಿಳುನಾಡಿನಲ್ಲಿ ಕೆಲ ಹಿಂದುಪರ ಸಂಘಟನೆಗಳು ಲೀನಾ ಮಣಿಮೇಕಲೈಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದ ಪ್ರಕರಣಗಳು ನಡೆದಿವೆ. ಬೆದರಿಕೆ ಹಾಕಿರುವ ಈ ವ್ಯಕ್ತಿಗಳು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಪೋಸ್ಟರ್‌ ವಿವಾದದ ಮಧ್ಯೆ ಸಂಕಷ್ಟಕ್ಕೆ ಸಿಲುಕಿದ 'ಕಾಳಿ' ಸಿನಿಮಾ, ದೆಹಲಿ ಪೊಲೀಸರಿಂದ FIR!

ಯಾರೀಕೆ ಲೀನಾ ಮಣಿಮೇಕಲೈ: ಲೀನಾ ಮಣಿಮೇಕಲೈ ಮಧುರೈನ ದಕ್ಷಿಣದಲ್ಲಿರುವ ಹಳ್ಳಿಯಾದ ಮಹಾರಾಜಪುರಂನ ನಿವಾಸಿ. ಅವರ ತಂದೆ ಕಾಲೇಜು ಉಪನ್ಯಾಸಕರಾಗಿದ್ದರು. ಈಕೆ ಕೃಷಿ ಕುಟುಂಬಕ್ಕೆ ಸೇರಿದವರು. ಅವರ ಹಳ್ಳಿಯ ಸಂಪ್ರದಾಯದ ಪ್ರಕಾರ, ಬಾಲಕಿಯರು ವಯಸ್ಕರಾದ ಬೆನಲ್ಲಿಯೇ ಅವರನ್ನು ವಿವಾಹ ಮಾಡಲಾಗುತ್ತಿತ್ತು. ಕುಟುಂಬಸ್ಥರು ತಮ್ಮ ಮದುವೆಗೆ ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿದಾಗಲೇ, ಈಕೆ, ಚೆನ್ನೈಗೆ ಓಡಿ ಹೋಗಿದ್ದರು. ಅಲ್ಲಿಯೇ ಇಂಜಿನಿಯರಿಂಗ್ ಪೂರೈಸಿದ ಅವರು, ಬಳಿಕ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಸಸಾಕಷ್ಟು ಬೇರೆ ಬೇರೆ ವಲಯಗಳಲ್ಲಿ ಕೆಲಸ ಮಾಡಿದ ಬಳಿಕ, ಚಿತ್ರ ನಿರ್ದೇಶನಕ್ಕೆ ಇಳಿದಿದ್ದರು.

Latest Videos
Follow Us:
Download App:
  • android
  • ios