ಡಿಜಿಟಲ್‌ ಮಾಧ್ಯಮಗಳೀಗೂ ಕಾಯ್ದೆ ಅಂಕುಶ ಹಾಕಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಆನ್‌ಲೈನ್‌ ಸುದ್ದಿ ಮಾಧ್ಯಮಗಳ ನೋಂದಣಿ ಕಡ್ಡಾಯ ಎಂದು  90 ದಿನಗಳ ಗಡುವು ನೀಡಿದೆ.

ನವದೆಹಲಿ (ಜು.16): ಇಷ್ಟುದಿನ ಸರ್ಕಾರದ ಯಾವುದೇ ನಿಯಮಗಳಿಗೆ ಒಳಪಡದೆ ಸ್ವತಂತ್ರವಾಗಿದ್ದ ಡಿಜಿಟಲ್‌ ಮೀಡಿಯಾಗಳನ್ನು ಇದೇ ಮೊದಲ ಬಾರಿ ಕಾಯ್ದೆಯ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಪತ್ರಿಕೆ ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯ್ದೆಗೆ ತಿದ್ದುಪಡಿ ತರಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿರ್ಧರಿಸಿದ್ದು, ಈ ತಿದ್ದುಪಡಿಯ ನಂತರ ದೇಶದಲ್ಲಿರುವ ಎಲ್ಲಾ ಡಿಜಿಟಲ್‌ ಮಾಧ್ಯಮಗಳು 90 ದಿನದೊಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಲಿದೆ.

ಅಲ್ಲದೆ, ನಿಯಮಗಳನ್ನು ಉಲ್ಲಂಘಿಸುವ ಡಿಜಿಟಲ್‌ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವ, ದಂಡ ವಿಧಿಸುವ ಹಾಗೂ ನೋಂದಣಿ ರದ್ದುಪಡಿಸುವ ಅಧಿಕಾರ ಸರ್ಕಾರಕ್ಕೆ ಪ್ರಾಪ್ತವಾಗಲಿದೆ. ಯಾವುದೇ ರೀತಿಯ ಎಲೆಕ್ಟ್ರಾನಿಕ್‌ ಉಪಕರಣಗಳ ಮೂಲಕ ಸುದ್ದಿಗಳನ್ನು ಪ್ರಸಾರ ಮಾಡುವ ಎಲ್ಲಾ ಮಾಧ್ಯಮಗಳು ಕಾಯ್ದೆಯ ವ್ಯಾಪ್ತಿಗೆ ಬರಲಿವೆ.

ಮಸೂದೆ ಇನ್ನೂ ಆರಂಭಿಕ ಹಂತದಲ್ಲಿದೆ. ಅದಕ್ಕೆ ಪ್ರಧಾನಿ ಸಚಿವಾಲಯ ಹಾಗೂ ಇನ್ನಿತರ ಇಲಾಖೆಗಳ ಒಪ್ಪಿಗೆ ದೊರೆತು, ಸಂಸತ್ತಿನಲ್ಲಿ ಅಂಗೀಕಾರವಾದ ನಂತರ ಡಿಜಿಟಲ್‌ ಮಾಧ್ಯಮಗಳು ಪ್ರೆಸ್‌ ರಿಜಿಸ್ಟ್ರಾರ್‌ ಜನರಲ್‌ ಬಳಿ 90 ದಿನದೊಳಗೆ ನೋಂದಣಿ ಮಾಡಿಕೊಳ್ಳಬೇಕು. ನಿಯಮ ಉಲ್ಲಂಘಿಸುವ ಡಿಜಿಟಲ್‌ ಮೀಡಿಯಾಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವೂ ಪ್ರೆಸ್‌ ರಿಜಿಸ್ಟ್ರಾರ್‌ಗೆ ಇರಲಿದೆ. ಡಿಜಿಟಲ್‌ ಮಾಧ್ಯಮಗಳು ಮೇಲ್ಮನವಿ ಸಲ್ಲಿಸಲು ಭಾರತೀಯ ಪತ್ರಿಕಾ ಮಂಡಳಿಯ ಚೇರ್ಮನ್‌ ನೇತೃತ್ವದಲ್ಲಿ ಮೇಲ್ಮನವಿ ಮಂಡಳಿ ರಚಿಸಲಾಗುತ್ತದೆ.

ಈ ಮಸೂದೆಯನ್ನು ಪ್ರಧಾನಿ ಕಾರ್ಯಾಲಯ ಮತ್ತು ಇತರ ಮಧ್ಯಸ್ಥಗಾರರು ಇನ್ನೂ ಅನುಮೋದಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮಸೂದೆ ತಿದ್ದುಪಡಿಗಳು ಡಿಜಿಟಲ್ ಸುದ್ದಿ ಮಾಧ್ಯಮವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಯಂತ್ರಣಕ್ಕೆ ತರುತ್ತವೆ. ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸುವ ಹಿಂದಿನ ಪ್ರಯತ್ನವು 2019 ರಲ್ಲಿ ಭಾರಿ ವಿವಾದವನ್ನು ಹುಟ್ಟುಹಾಕಿತ್ತು.

ಕೇಂದ್ರವು ಕರಡು ಮಸೂದೆಯನ್ನು ಹೊರತಂದಿದೆ, ಅದು ಡಿಜಿಟಲ್ ಮಾಧ್ಯಮದಲ್ಲಿನ ಸುದ್ದಿಗಳನ್ನು ಡಿಜಿಟೈಸ್ ಮಾಡಿದ ಸುದ್ದಿ ಎಂದು ವ್ಯಾಖ್ಯಾನಿಸುತ್ತದೆ, ಅದು ಇಂಟರ್ನೆಟ್, ಕಂಪ್ಯೂಟರ್ ಅಥವಾ ಮೊಬೈಲ್ ನೆಟ್‌ವರ್ಕ್‌ಗಳ ಮೂಲಕ ರವಾನಿಸಬಹುದು ಮತ್ತು ಪಠ್ಯ, ವಿಡಿಯೋ, ಆಡಿಯೋ ಮತ್ತು ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಡಿಜಿಟಲ್ ಸುದ್ದಿ ಮಾಧ್ಯಮವನ್ನು ನಿಯಂತ್ರಿಸುವ ಪ್ರಯತ್ನವಾಗಿ ವಿಮರ್ಶಕರು ಇದನ್ನು ಗಮನಿಸಿದ್ದಾರೆ.