ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಡಿಐಜಿ ಸವಿತಾ ಸೋಹನೆ, ‘ತೇಜಸ್ವಿ ಮಕ್ಕಳನ್ನು ಪಡೆಯುವುದು ಹೇಗೆ’ ಎಂಬ ಬಗ್ಗೆ ಉಪನ್ಯಾಸ ನೀಡಿ, ‘ಹುಣ್ಣಿಮೆ ದಿನ ಗರ್ಭ ಧರಿಸಬಾರದು’ ಎಂದು ಹೇಳಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಹದೋಲ್‌ (ಮ.ಪ್ರ.): ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಪೊಲೀಸ್ ಉಪ ಮಹಾನಿರೀಕ್ಷಕಿಯೊಬ್ಬರು (ಡಿಐಜಿ) ವಿದ್ಯಾರ್ಥಿಗಳನ್ನುದ್ದೇಶಿಸಿ, ‘ತೇಜಸ್ವಿ ಮಕ್ಕಳನ್ನು ಪಡೆಯುವುದು ಹೇಗೆ?’ ಎಂಬ ಬಗ್ಗೆ ನೀಡಿದ ಉಪನ್ಯಾಸದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಅದರಲ್ಲಿ ಅವರು, ‘ಹುಣ್ಣಿಮೆ ದಿನ ಗರ್ಭ ಧರಿಸಬಾರದು’ ಎಂದು ಯುವತಿಯರಿಗೆ ಕರೆ ನೀಡಿದ್ದಾರೆ.

ಇಲ್ಲಿನ ಡಿಐಜಿ ಸವಿತಾ ಸೋಹನೆ, ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ‘ಮೈ ಹೂ ಅಭಿಮನ್ಯ’ ಕಾರ್ಯಕ್ರಮದ ಭಾಗವಾಗಿ ಖಾಸಗಿ ಶಾಲೆಯೊಂದರ 10ರಿಂದ 12ನೇ ತರಗತಿಯ ಮಕ್ಕಳಿಗೆ ಈ ಕುರಿತು ಅ.4ರಂದು ಉಪನ್ಯಾಸ ನೀಡಿದ್ದರು.‘ಹೊಸ ಪೀಳಿಗೆಯನ್ನು ಭೂಮಿಗೆ ತರಲಿರುವ ನೀವು, ಅದಕ್ಕಾಗಿ ಯೋಜನೆ ರೂಪಿಸಬೇಕು. ಹುಣ್ಣೆಮೆಯಂದು ಗರ್ಭ ಧರಿಸಬಾರದು. ತೇಜಸ್ವಿ ಸಂತಾನಕ್ಕಾಗಿ ಸೂರ್ಯದೇವನಿಗೆ ನಮಿಸಿ ಜಲ ಅರ್ಪಿಸಿ ನಮಸ್ಕರಿಸಬೇಕು’ ಎಂದು ಅವರು ಹೇಳಿದ್ದಾರೆ. ವಿಪರ್ಯಾಸವೆಂದರೆ, ಇಂತಹ ಸಲಹೆಗಳನ್ನಿತ್ತ ಸವಿತಾ ಅವಿವಾಹಿತೆ.

ಇದನ್ನೂ ಓದಿ: ಪಾಪಿಷ್ಟರು ಮಾತ್ರ ಕುಂಭಮೇಳಕ್ಕೆ ಹೋಗ್ತಾರೆ.. ಭೀಮ್‌ ಆರ್ಮಿ ಚಂದ್ರಶೇಖರ ಆಜಾದ್ ವಿವಾದಾತ್ಮಕ ಹೇಳಿಕೆ!

ಈ ವೈರಲ್‌ ವಿಡಿಯೋ ಬಗ್ಗೆ ಸವಿತಾರ ಅಭಿಪ್ರಾಯ ಕೇಳಿದಾಗ, ‘ನಾನು ಹಿಂದೂ ಆಧ್ಯಾತ್ಮಿಕ ಗುರುಗಳ ಉಪದೇಶ ಕೇಳುತ್ತೇನೆ ಹಾಗೂ ಅದರ ಆಧಾರದಲ್ಲಿ ಉಪನ್ಯಾಸ ನೀಡುತ್ತೇನೆ. ಪೊಲೀಸ್‌ ಸೇವೆಗೆ ಸೇರುವ ಮೊದಲು ನಾನು ಶಿಕ್ಷಕಿಯಾಗಿದ್ದೆ. ಈಗಲೂ ಪ್ರತಿ ತಿಂಗಳು ಶಾಲೆಗಳಲ್ಲಿ ಉಪನ್ಯಾಸ ನೀಡುತ್ತೇನೆ.’ ಎಂದರು.

Scroll to load tweet…