ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ಗಾಯಗೊಂಡಿದ್ದ ಯುವಕನನ್ನು ಕೊಲೆ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೂತ್ರದ ಬ್ಯಾಗ್ ಹಿಡಿದು ಆತ ಆಸ್ಪತ್ರೆಯಿಂದ ಹೊರಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಕೆಲವು ಆಸ್ಪತ್ರೆಗಳು ದುಬಾರಿ ಬಿಲ್‌ಗಾಗಿ ಮೃತರಾದವರನ್ನು ದಿನಗಟ್ಟಲೇ ಐಸಿಯುನಲ್ಲಿಯೇ ಇರಿಸುತ್ತಾರೆ ಎಂಬ ಆರೋಪಗಳು ಈ ಹಿಂದೆಯೂ ಅನೇಕ ಬಾರಿ ಕೇಳಿ ಬಂದಿದೆ. ಆದರೆ ಇಲ್ಲೊಂದು ಕಡೆ ಗಲಾಟೆಯೊಂದರಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯನ್ನು ಬಂಧಿಸಿಟ್ಟು ಕೊಲೆಗೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ತನಗೆ ಹಾಕಿದ್ದ ಮೂತ್ರದ ಬ್ಯಾಗ್ ಹಿಡಿದುಕೊಂಡು ಯುವಕನೋರ್ವ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದು, ಈ ವೀಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ರತ್ಲಮ್‌ನ ಜಿಡಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆ ವಿರುದ್ಧ ತೀವ್ರ ಆಕ್ರೋಶ ಕೇಳಿ ಬಂದಿದೆ.
ವೈರಲ್ ವೀಡಿಯೋದಲ್ಲಿರೋದೇನು?
ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಯುವಕನೋರ್ವ ಮೂಗಿಗೆ ಉಸಿರಾಟಕ್ಕೆಂದು ಹಾಕಿದ್ದ ಪೈಪ್ ( nasal tube)ಹಾಗೂ ತನಗೆ ಅಳವಡಿಸಿದ ಮೂತ್ರದ ಚೀಲದೊಂದಿಗೆ ಕಾಣಿಸಿಕೊಂಡಿದ್ದಾನೆ. ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದಾಗಿ ಹೇಳಿದ್ದು, ಆಸ್ಪತ್ರೆಯ ಅಧಿಕಾರಿಗಳು ತನನ್ನು ಆಸ್ಪತ್ರೆಯೊಳಗೆ ಬಂಧಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾನೆ. ಈತನನ್ನು ಬಂಟಿ ನಿನಾಮ್ ಎಂದು ಗುರುತಿಸಲಾಗಿದ್ದು, ಗುಂಪು ಘರ್ಷಣೆಯೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಈತನನ್ನು ಆತನ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು.
ಈ ವೇಳೆ ಆಸ್ಪತ್ರೆ ಸಿಬ್ಬಂದಿ ನಿನಾಮ್‌ನ ಪತ್ನಿ ಲಕ್ಷ್ಮಿ ಬಳಿ ನಿನಾಮ್ ಸ್ಥಿತಿ ತುಂಬಾ ಗಂಭೀರವಾಗಿದೆ, ಆತ ಕೋಮಾದಲ್ಲಿದ್ದಾನೆ ಎಂದು ಹೇಳಿದ್ದಲ್ಲದೇ, ಮುಂಗಡವಾಗಿ ಸ್ವಲ್ಪ ಹಣ ಪಾವತಿ ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ಆಕೆ ಒಂದು ಲಕ್ಷ ರೂಪಾಯಿಯನ್ನು ಸಿದ್ಧಪಡಿಸಿಕೊಂಡು ಆಸ್ಪತ್ರೆಗೆ ಮರಳಿದ್ದಾರೆ. ಈ ವೇಳೆ ಆಕೆಗೆ ಆಸ್ಪತ್ರೆಯಲ್ಲಿ ವೈದ್ಯರು ತನ್ನ ಪತಿಯನ್ನು ಬೆಡ್ ಮೇಲಿಂದ ಏಳದಂತೆ ತಡೆಯುತ್ತಿರುವುದು ಕಂಡು ಬಂದಿದೆ.
ಕೈಗಳನ್ನು ಕಟ್ಟಿ ಕತ್ತು ಹಿಸುಕಿದ ಆರೋಪ
ನಾನು ಆಸ್ಪತ್ರೆಗೆ ಮರಳಿ ಬರುತ್ತಿದ್ದಾಗ, ವೈದ್ಯರು ನನ್ನ ಗಂಡನ ಕತ್ತನ್ನು ಹಿಸುಕುತ್ತಿರುವುದು ಕಂಡು ಬಂತು, ಇದೇ ವೇಳೆ ಆತನ ಕೈಗಳನ್ನು ಕಟ್ಟಲಾಗಿತ್ತು. ಮೊದಲಿಗೆ ನಾನು ವೈದ್ಯರು ಆತ ಪ್ರಜ್ಞಾಶೂನ್ಯನಾಗಿರುವುದರಿಂದ ಆತನ ಮುಖಕ್ಕೆ ನೀರು ಎರಚುತ್ತಿದ್ದಾರೆ ಎಂದು ಭಾವಿಸಿದೆ. ಆದರೆ ಅಷ್ಟರಲ್ಲಿ ನನ್ನ ಪತಿ ನನ್ನ ಜೊತೆ ಮಾತನಾಡಿದ್ದು, ನನಗೆ ತುಂಬಾ ಹಿಂದೆಯೇ ಪ್ರಜ್ಞೆ ಬಂದಿದೆ. ಹಾಗೂ ನಿನ್ನನ್ನು ನೋಡಬೇಕೆಂದು ಕೇಳಿದಾಗ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದರು, ಅವರು ನನಗೆ ತಪ್ಪು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪತಿ ತನಗೆ ಹೇಳಿದ್ದಾಗಿ ನಿನಾಮ್‌ನ ಪತ್ನಿ ಲಕ್ಷ್ಮಿ ಆರೋಪಿಸಿದ್ದಾರೆ. ಗುಂಪು ಘರ್ಷಣೆಯೊಂದರಲ್ಲಿ ಗಂಭೀರ ಗಾಯಗೊಂಡಿದ್ದ ನಿನಾಮ್‌ನನ್ನು ಹೆಚ್ಚಿನ ಚಿಕಿತ್ಸೆಗೆ ಇಂದೋರ್‌ಗೆ ಕಳುಹಿಸುವಂತೆ ಸೂಚಿಸಿದ್ದರು ಕುಟುಂಬದವರು ರತ್ಲಮ್‌ನ ಜಿಡಿ ಆಸ್ಪತ್ರೆಗೆ ಆತನನ್ನು ದಾಖಲಿಸಿದ್ದರು.
ಧ್ವನಿಯಲ್ಲಿ ಹಠಾತ್ ವಿಚಿತ್ರ ಬದಲಾವಣೆ: ಆಸ್ಪತ್ರೆಗೆ ಹೋದ ವ್ಯಕ್ತಿಗೆ ಶಾಕ್
ಮನೆಯವರ ಕೇಳಿದ್ರೆ ಎರಡು ಆಯ್ಕೆ ನೀಡಿದ ಆಸ್ಪತ್ರೆ ಸಿಬ್ಬಂದಿ
ಆದರೆ ಜಿಡಿ ಆಸ್ಪತ್ರೆಯಲ್ಲಿ ರತ್ಲಮ್‌ಗೆ ಭಯಾನಕ ಅನುಭವವಾಗಿದೆ. 'ನನಗೆ ಪ್ರಜ್ಞೆ ಬಂದ ತಕ್ಷಣ, ನನ್ನ ಕುಟುಂಬವನ್ನು ನೋಡಲು ಕೇಳಿದೆ. ನಾನು ಎರಡು ಬಾರಿ ನನ್ನ ವಿನಂತಿ ಮಾಡಿದರೂ, ಮತ್ತು ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ಒಬ್ಬರಾದ ಮಹಿಳೆ ನನಗೆ ಎರಡು ಆಯ್ಕೆಗಳನ್ನು ನೀಡಿದರು. ಒಂದು ಅವರು ನನ್ನ ಮುಂದೆ ವೈದ್ಯರನ್ನು ಕರೆಯುವುದು 2. ನನ್ನ ಕುಟುಂಬವನ್ನು ಸಂಪರ್ಕಿಸಲು ನನಗೆ ಅವಕಾಶ ನೀಡುವುದು. ನಾನು ನನ್ನ ಕುಟುಂಬವನ್ನು ಕರೆಯುವ ಅವಕಾಶವನ್ನು ಆಯ್ಕೆ ಮಾಡಿಕೊಂಡೆ, ಆದರೆ ಆಕೆ ನನ್ನ ಕುಟುಂಬವನ್ನು ಕರೆಯುವ ಬದಲಾಗಿ ವೈದ್ಯರನ್ನು ಕರೆಸಿದ್ದಾಳೆ. ಒಬ್ಬ ವೈದ್ಯರು ಬಂದು ನನ್ನನ್ನು ಸ್ಥಳದಲ್ಲಿಯೇ ಇರಲು ಕಟ್ಟುನಿಟ್ಟಾಗಿ ಆದೇಶಿಸಿದರು. ನನ್ನ ಕೈಗಳು ಮತ್ತು ಕಾಲುಗಳನ್ನು ಕಟ್ಟಲಾಗಿತ್ತು. ಮತ್ತು ಅವರು ನನ್ನ ವಿರುದ್ಧ ಬಲಪ್ರಯೋಗ ಮಾಡಿದರು ಎಂದು ಅವರು ಆರೋಪಿಸಿದ್ದಾರೆ
ಆರೋಪ ನಿರಾಕರಿಸಿದ ಆಸ್ಪತ್ರೆ
ಆದರೆ ಆಸ್ಪತ್ರೆ ಆಡಳಿತ ಮಂಡಳಿ ಈ ಆರೋಪಗಳನ್ನು ನಿರಾಕರಿಸಿದೆ, ನಿನಾಮ ಅವರನ್ನು ಐಸಿಯುಗೆ ದಾಖಲಿಸಲಾಗಿದ್ದು, ಕೇವಲ ಎರಡು ಗಂಟೆಗಳ ನಂತರ ಅವರು ಗದ್ದಲ ಆರಂಭಿಸಿದ್ದಾರೆ. ಔಷಧಿ ಮತ್ತು ಇತರ ಶುಲ್ಕಗಳು ಸೇರಿದಂತೆ ಅವರ ಒಟ್ಟು ಬಿಲ್ 8,000 ರೂ.ಗಳಾಗಿದ್ದು, ನಿನಾಮ ಅವರ ಈ ಹೇಳಿಕೆಗಳು ಆಧಾರರಹಿತ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಘಟನೆಯ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದರು. ಸಮಿತಿಯು ಆಸ್ಪತ್ರೆಗೆ ಭೇಟಿ ನೀಡಿದ್ದರೂ, ಅಧಿಕಾರಿಗಳು ತಮ್ಮ ಹೇಳಿಕೆಗಳನ್ನು ದಾಖಲಿಸುವ ಮೊದಲು ನಿನಾಮ ಅವರ ಕುಟುಂಬದವರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ಗೆ ಕರೆದೊಯ್ದ ಕಾರಣ ತನಿಖೆ ಅಪೂರ್ಣವಾಗಿಯೇ ಉಳಿದಿದೆ.
Haveri: 'ಡಾಬಾ ಬಂತು ಊಟ ಮಾಡ್ತೀಯಾ' ಅಂತಾ ಪತ್ನಿ ಕಣ್ಣೀರಿಟ್ಟಾಗ ಎದ್ದುಕೂತ ಮೃತವ್ಯಕ್ತಿ!
