ದೇವಸ್ಥಾನದ ಆವರಣದಿಂದ 2 ರೂಪಾಯಿ ಸಿಕ್ಕಿತ್ತು. ಇದು ಯಾರ ಹಣ ಅನ್ನೋದು ಗೊತ್ತಾಗಿಲ್ಲ. ಹೀಗಾಗಿ ತಾನೆ ಇಟ್ಟುಕೊಂಡ ಭಕ್ತ, ಇದೀಗ 55 ವರ್ಷಗಳ ಬಳಿಕ 10,000 ರೂಪಾಯಿ ಹಣ ಹುಂಡಿಗೆ ಹಾಕಿ 5 ದಶಕಗಳ ಹಿಂದಿನ ಘಟನೆ ಹಾಗೂ ಇದೀಗ ಹುಂಡಿಗೆ ಹಾಕಿದ ಹಣದದ ಕಾರಣ ಬಹಿರಂಗಪಡಿಸಿದ್ದಾನೆ.

ಈರೋಡ್ (ಜು.07) ದೇವಸ್ಥಾನಕ್ಕೆ ತೆರಳಿದ ಭಕ್ತನಿಗೆ 2 ರೂಪಾಯಿ ಹಣ ಆವರಣದಿಂದ ಸಿಕ್ಕಿದೆ. ದೇವಸ್ಥಾನದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಈ ಹಣ ಯಾರದ್ದೂ ಅನ್ನೋದು ಕೇಳಲು ಸಾಧ್ಯವಾಗಿಲ್ಲ, ಕಳೆದುಕೊಂಡವರಿಗೆ ನೀಡಲು ಸಾಧ್ಯವಾಗಿಲ್ಲ. ಆದರೆ ಈ ಭಕ್ತ 2 ರೂಪಾಯಿ ಹಣವನ್ನು ದೇವಸ್ಥಾನಕ್ಕೆ ನೀಡದೆ, ತನ್ನ ಬಳಿ ಇಟ್ಟುಕೊಂಡಿದ್ದ. ಈ ಘಟನೆ ನಡೆದಿದ್ದು ಬರೋಬ್ಬರಿ 55 ವರ್ಷಗಳ ಹಿಂದೆ. ಆದರೆ ಕಳೆದ 55 ವರ್ಷದಿಂದ ತಾನು ಎರಡು ರೂಪಾಯಿ ಹಣ ತೀವ್ರವಾಗಿ ಕಾಡಿತ್ತು. ಇದೀಗ 55 ವರ್ಷಗಳ ಬಳಿಕ ತಾನು ಇಟ್ಟುಕೊಂಡ 2 ರೂಪಾಯಿಗೆ ಬದಲಿಗೆ 10,000 ರೂಪಾಯಿ ಹುಂಡಿಗೆ ಹಾಕಿದ ಘಟನೆ ಅಮ್ಮಾಪೆಟಾಯಿ ಬಳಿ ಇರುವ ಚೆಲ್ಲಂದಿ ಅಮ್ಮನ್ ದೇವಸ್ಥಾನದಲ್ಲಿ ನಡೆದಿದೆ.

ಕಾರ್ಣಿಕದ ಚೆಲ್ಲಂದಿ ಅಮ್ಮನ್ ದೇವಸ್ಥಾನ

ಚೆಲ್ಲಂದಿ ಅಮ್ಮನ್ ದೇವಸ್ಥಾನ ಅತ್ಯಂತ ಪ್ರಸಿದ್ಧ ದೇವಸ್ಥಾನ. ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ತಮ್ಮ ಹರಕೆ ತೀರಿಸಿಕೊಳ್ಳುತ್ತಾರೆ. ನಂಬಿದ ಭಕ್ತರನ್ನು ಕೈಬಿಡುವುದಿಲ್ಲ ಅನ್ನೋ ನಂಬಿಕೆ ಇದೆ. 55 ವರ್ಷಗಳ ಹಿಂದೆ ಇದೇ ದೇವಸ್ಥಾನಕ್ಕೆ ಬಂದ ಭಕ್ತನಿಗೆ ಈ ದೇವಸ್ಥಾನದ ಆವರಣದಿಂದ 2 ರೂಪಾಯಿ ಸಿಕ್ಕಿದೆ. 55 ವರ್ಷದ ಹಿಂದೆ ಹೆಚ್ಚಿನ ಭಕ್ತರು ಇರಲಿಲ್ಲ. ಇಷ್ಟೇ ಅಲ್ಲ ಅಂದು 2 ರೂಪಾಯಿ ಮೌಲ್ಯ ಹೆಚ್ಚಿತ್ತು.

ದೇವಸ್ಥಾನಕ್ಕೆ ಬಂದ ಯಾರದ್ದೋ ಹಣ ಇದಾಗಿದೆ. ಆದರೆ ದೇವಸ್ಥಾನದಲ್ಲಿ ಯಾರು ಇರಲಿಲ್ಲ. ಯಾರದ್ದು ಅನ್ನೋದು ಗೊತ್ತಾಗಲಿಲ್ಲ. 2 ರೂಪಾಯಿ ಹೆಕ್ಕಿ ತೆಗೆದ ಭಕ್ತ, ಈ ಹಣವನ್ನು ಹುಂಡಿಗೆ ಅಥವಾ ದೇವಸ್ಥಾನಕ್ಕೆ ನೀಡಲಿಲ್ಲ. ಈ ರೀತಿಯ ಆಲೋಚನೆ ಭಕ್ತನಿಗೆ ಬರಲಿಲ್ಲ. ಹೀಗಾಗಿ 2 ರೂಪಾಯಿ ಹಣ ತನ್ನಲ್ಲೇ ಇಟ್ಟುಕೊಂಡ. ಬಳಿಕ ದೇವಸ್ಥಾದಿಂದ ಮರಳಿದ್ದ.

ದೇವಸ್ಥಾನದಿಂದ ಮನೆಗೆ ತೆರಳಿ ತನ್ನ ಕಾರ್ಯಗಳಲ್ಲಿ ತೊಡಗಿದ್ದ. ಈ 2 ರೂಪಾಯಿ ಹಣ ಬಳಿಕ ಖರ್ಚಾಗಿತ್ತು. ಆದರೆ 2 ರೂಪಾಯಿ ಹಣ ವನ್ನು ಮಾಲೀಕನಿಗೆ ನೀಡಲು ಸಾಧ್ಯವಾಗಿಲ್ಲ. ಈ ಹಣ ಯಾರದ್ದೊ ಭಕ್ತರು ದೇವಸ್ಥಾನಕ್ಕೆ ತಂದಿರುವ ಹಣವಾಗಿರಬಹದು. ಅಂದಿನ 2 ರೂಪಾಯಿ ಮೌಲ್ಯಕ್ಕೆ ಇದೀಗ 10,000 ರೂಪಾಯಿ ಹಣ ಹುಂಡಿಗೆ ಹಾಕಿದ್ದೇನೆ ಎಂದು ಪತ್ರ ಸಮೇತ ಹುಂಡಿಗೆ ಹಾಕಿದ್ದ.