ನವದೆಹಲಿ(ಆ.01): ಜೀವ ಕಾಪಾಡುವಂತಹ ವೃತ್ತಿಯಲ್ಲಿದ್ದುಕೊಂಡು ಜನರನ್ನು ಕರುಣೆ ಇಲ್ಲದೆ ಸಾಯಿಸಿದ ರಾಕ್ಷಸ ದೇವೇಂದ್ರ ಶರ್ಮಾ ಕುರಿತು ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ. ಸೀರಿಯಲ್ ಕಿಲ್ಲರ್ ಡಾಕ್ಟರ್ ದೇವೇಂದ್ರ ಶರ್ಮಾ ವಿಚಾರಣೆ ವೇಳೆ ಮೊದಲ ಐವತ್ತು ಕೊಲೆಗಳ ಬಳಿಕ ಎಷ್ಟು ಹತ್ಯೆ ಮಾಡಿದ್ದೇನೆಂಬುವುದನ್ನು ಲೆಕ್ಕವಿಡುವುದನ್ನೇ ಮರೆತಿದ್ದೆ ಎಂದಿದ್ದರು. ಆದರೀಗ ತಾನು ಸರಿ ಸುಮಾರು ನೂರು ಮಂದಿಯನ್ನು ಸಾಯಿಸಿರುವುದಾಗಿ ಒಪಪ್ಇಕೊಂಡಿದ್ದು, ಇವರಲ್ಲಿ ಅಧಿಕ ಮಂದಿಯನ್ನು ಉತ್ತರ ಪ್ರದೇಶದನಾಲೆಯೊಂದರಲ್ಲಿ ಇರುವ ಮೊಸಳೆಗಳಿಗೆ ತಿನ್ನಿಸಿರುವಿದಾಗಿ ಹೇಳಿಕೊಂಡಿದ್ದಾರೆ.

ಕೋವಿಡ್‌ ನೆಗೆಟಿವ್‌ ಬಂದ್ರೂ ಚಿಕಿತ್ಸೆ ನೀಡಲು ಹಿಂದೇಟು: ಶವ ಸಮೇತ ಡಿಸಿ ಕಚೇರಿಗೆ ಬಂದ ಬಂಧುಗಳು

ದೇವೇಂದ್ರ ಶರ್ಮಾ ಹೆಸರಿನ ಈ ಡಾಕ್ಟರ್ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಅರೆಸ್ಟ್ ಆಗಿದ್ದರು. ಕಿಡ್ನಿ ಕೇಸ್ ಸಂಬಂಧ ಕಳೆದ 16 ವರ್ಷಗಳಿಂದ ಜೈಲಿನಲ್ಲಿದ್ದ ಈ ರಕ್ಕಸ  ಪೆರೋಲ್ ಮೇಲೆ ಹಹೊರ ಬಂದಿದ್ದ. ಇಪ್ಪತ್ತು ದಿನಗಳ ಬಳಿಕ ಆತ ಮತ್ತೆ ಜೈಲಿಗೆ ಹೋಗಬೇಕಿತ್ತು. ಆದರೆ ಅಷ್ಟರಲ್ಲೇ ನಿಗೂಢವಾಗಿ ಆತ ಭೂಗತವಾಗಿದ್ದ. ಆದರೀಗ ಆತನನ್ನು ಪೊಲೀಸರು ಬಂಧಿಸಿದ್ದು, ಆತನ ಎಲ್ಲಾ ಅಪರಾಧ ಕೃತ್ಯಗಳೂ ಬೆಳಕಿಗೆ ಬಂದಿವೆ.

ಗ್ಯಾಸ್‌ ಏಜೆನ್ಸಿಯಲ್ಲಿ ದರೋಡೆ ಮಾಡಿ ಸಿಲಿಂಡರ್ ಮಾರಾಟ

ರಾಜಸ್ಥಾನದಲ್ಲಿ ಡಾಕ್ಟರ್ ಆಗಿದ್ದ ದೇವೇಂದ್ರ ಶರ್ಮಾ ಕೊಲೆಗಾರ ಆಗಿದ್ದು ಹೇಗೆ ಎಂಬುವುದ್ನು ತಿಳಿಯಲು ಎಲ್ಲರಿಗೂ ಆಸಕ್ತಿ ಇತ್ತು. ಈತ ಒಂದೆಡೆ ಹಣ ಹೂಡಿಕೆ ಮಾಡಿದ್ದು, ಇಲ್ಲಿ ಮೋಸಕ್ಕೊಳಗಾಗಿದ್ದ. ಹೀಗಾಗಿ ಈತ ಅಪರಾಧ ಕೃತ್ಯಗಳನ್ನು ಮಾಡಲಾರಂಭಿಸಿದ. ಬಳಿಕ ವೈದ್ಯಕೀಯ ವೃತ್ತಿ ಜೊತೆ, ಕಿಡಗ್ನಿ ಟ್ರಾನ್ಸ್‌ಪ್ಲಾಂಟ್, ನಕಲಿ ಗ್ಯಾಸ್ ಏಜೆನ್ಸಿ ಕೂಡಾ ಆರಂಭಿಸಿದ್ದರು. ಅಲ್ಲದೇ ವಾಹನ ಕಳ್ಳಯತನ ಮಾಡಿ ಮಾರಾಟ ಕೂಡಾ ಮಾಡುತ್ತಿದ್ದ. ನಕಲಿ ಗ್ಯಾಸ್ ಏಜೆನ್ಸಿಗೆ ಸಿಲಿಂಡರ್ ಬೇಕೆಂದಾಗ ಗ್ಯಾಸ್ ಡೆಲಿವರಿ ಟ್ರಕ್ ದರೋಡೆ ಮಾಡಿ ಡ್ರೈವರ್‌ನನ್ನು ಸಾಯಿಸಿ ಸಿಲಿಂಡರ್ ಮಾರಾಟ ಮಾಡುತ್ತಿದ್ದ.

ದೇಶದಲ್ಲಿ 10 ಲಕ್ಷ ಸೋಂಕಿತರು ಗುಣಮುಖ..! ಇನ್ನೂ ಹೆಚ್ಚಾಗಲಿದೆ ಸೋಂಕಿತರ ಸಂಖ್ಯೆ

ಚಾಲಕನ ಶವ ನಾಲೆಗೆಸೆದ

ದೇವೇಂದ್ರ ಕ್ಯಾಬಬ್‌ ಡ್ರೈವರ್‌ಗಳನ್ನು ವಾಹನ ಕಳ್ಳತನ ಮಾಡುವಾಗ ಸಾಯಿಸುತ್ತಿದ್ದ. ದೆಹಲಿಯಿಂದ ಉತ್ತರ ಪ್ರದೇಶಕ್ಕೆ ತೆರಳುವ ಕ್ಯಾಬ್‌ಗಳನ್ನೇ ಆಯ್ಕೆ ಮಾಡಿ ಈತ ಕಳ್ಳತನ ಮಾಡುತ್ತಿದ್ದ. ಹೀಗಿರುವಾಗ ಚಾಲಕರನ್ನು ಸಾಯಿಸಿ ಹಾದಿಯಲ್ಲಿ ಸಿಗುತ್ತಿದ್ದ ನಾಲೆಯ ಮೊಸಳೆಗಳಿಗೆ ಎಸೆಯುತ್ತಿದ್ದ.

ವೈದ್ಯನಿಂದ ರಕ್ಕಸನಾಗಿದ್ದು ಹೀಗೆ

ಕಳೆದ ಬುಧವಾರ ಶರ್ಮಾನನ್ನು ದೆಹಲಿ ಪೊಲಿಸರು ಬಂಧಿಸಿದ್ದಾರೆ. 1984ರಲ್ಲಿ ದೇವೇಂದ್ರ ಶರ್ಮಾ ಆಯುರ್ವೇದಿಕ್ ಮೆಡಿಸಿನ್‌ನಲ್ಲಿ ಪದವಿ ಪೂರೈಸಿ ರಾಜಸ್ಥಾನದಲ್ಲಿ ಕ್ಲಿನಿಕ್ ಆರಂಭಿಸಿದ್ದರು. 1994 ರಲ್ಲಿ ಈತ ಗ್ಯಾಸ್ ಏಜೆನ್ಸಿ ಆರಂಭಿಸಿದ್ದ. ಇದಕ್ಕಾಗಿ ಆತ ಕಂಪನಿಗೆ 11 ಲಕ್ಷ ರೂಪಾಯಿ ಹೂಡಕೆ ಮಾಡಿದ್ದ. ಆದರೆ ಈ ಕಂಪನಿ ಅಚಾನಕ್ಕಾಗಿ ಮಾಯವಾಯ್ತು. ಹೀಗಾಗಿ 1995ರಲ್ಲಿ ಆತ ನಕಲಿ ಗ್ಯಾಸ್ ಏಜೆನ್ಸಿ ಆರಂಭಿಸಿದ.

ಇದಕ್ಕಾಗಿ ಶರ್ಮಾ ಗ್ಯಾಂಗ್ ಒಂದನ್ನೂ ಮಾಡಿದ್ದ. ಇವರು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊಂಡೊಯ್ಯುತ್ತಿದ್ದ ಟ್ರಕ್‌ಗಳನ್ನು ಲೂಟಿ ಮಾಡುತ್ತಿದ್ದರು. ಹೀಗಿರುವಾಗ ದೇವೇಂದ್ರ ತಾನು ಕಟ್ಟಿದ್ದ ಗ್ಯಾಂಗ್ ಜೊತೆ ಸೇರಿ ಒಟ್ಟು 24 ಕೊಲೆ ಮಾಡಿದ್ದ. ಬಳಿಕ ದೇವೇಂದ್ರ ಕಿಡ್ನಿ ದಂಧೆ ಆರಂಭಿಸಿದ. ಪ್ರತಿ ಕಿಡ್ಇಗೆ ಏಳು ಲಕ್ಷ ರೂ. ನಿಗಧಿಪಡಿಸಿ ಒಟ್ಟು 125 ಕಿಡ್ನಿ ಮಾರಾಟ ಮಾಡಿದ್ದ. ಇವೆಲ್ಲದರ ಜೊತೆ ಕ್ಯಾಬ್ ಡ್ರೈವರ್‌ಗಳನ್ನು ಸಾಯಿಸಿ ವಾಹನ ಕಳ್ಳತನ ನಡೆಸುತ್ತಿದ್ದ. ಬಳಿಕ ಅದನ್ನು ಮಾರುತ್ತಿದ್ದ.

ರಷ್ಯಾ ಮಗುವಿಗೆ ಮರುಜನ್ಮ ಕೊಟ್ಟ ಭಾರತದ ವೈದ್ಯರು..ಅದು 7 ಗಂಟೆಯ ಆಪರೇಶನ್!

ಇದಾದ ಬಳಿಕ 2004ರಲ್ಲಿ ಆತನನ್ನು ಬಂಧಿಸಲಾಯ್ತು ಹಾಗೂ 16 ವರ್ಷ ಜೈಪುರ ಜೈಲಿನಲ್ಲಿ ದಿನ ಕಳೆದ. ಬಳಿಕ ಸನ್ನಡತೆ ಆಧಾರದಲ್ಲಿ 2020ರಲ್ಲಿ 20 ದಿನಗಳ ಪೆರೋಲ್ ನೀಡಲಾಯ್ತು. ಆದರೆ ಆತ ಪರಾರಿಯಾಗಿ ಭೂಗತನಾದ ಹಾಗೂ ದೆಹಲಿಯ ಮೋಹನ್ ಗಾರ್ಡನ್‌ನಲ್ಲಿ ತಲೆಮರೆಸಿಕೊಂಡು ದಿನ ಕಳೆಯತೊಡಗಿದ. ಅಲ್ಲಿ ಆತ ಉದ್ಯಮಿಯೊಬ್ಬನಿಗೆ ತನ್ನ ಜಾಲದಲ್ಲಿ ಸಿಲುಕಿಸಲು ತಯಾರಿ ನಡೆಸಿದ್ದ. ಆದರೆ ಪೊಲೀಸರಿಗೆ ಆತ ಇಲ್ಲಿದ್ದಾನೆಂಬ ಮಾಹಿತಿ ಲಭಿಸಿದ್ದು, ಆತನನ್ನು ಬಂಧಿಸಿದ್ದಾರೆ.