ದೆಹಲಿಯಲ್ಲಿ ಭೂಕಂಪ; ರಿಕ್ಟರ್ ಮಾಪನದಲ್ಲಿ 4.6 ತೀವ್ರತೆ ದಾಖಲು!
ಕೊರೋನಾ ವೈರಸ್‌ನಿಂದ ನಲುಗಿರುವ ದೆಹಲಿ ಜನತೆಗೆ ಮತ್ತೊಂದು ಆಘಾತ/ ಇಂದು ದೆಹಲಿಯಲ್ಲಿ ಮತ್ತೆ ಭೂಕಂಪನ/ 4.6 ರಷ್ಟು ತೀವ್ರತೆ ಹೊಂದಿದ್ದ ಭೂಕಂಪನ/
ದೆಹಲಿ(ಮೇ.29): ರಾಷ್ಟ್ರ ರಾಜಧಾನಿ ದೆಹಲಿಯಿಂದ 64 ಕಿಲೋಮೀಟರ್ ದೂರದಲ್ಲಿರವ ರೋಹ್ಟಕ್ ಹಾಗೂ ಹರಿಯಾಣದಲ್ಲಿ ಭೂಕಂಪನ ಸಂಭವಿಸಿದೆ. 9.08 ಗಂಟೆಗೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. ರಸ್ತೆಗಳು ಬಿರುಕು ಬಿಟ್ಟಿದೆ. ಕಟ್ಟಗಳು ಬಿರುಕು ಬಿಟ್ಟಿದೆ. ಭೂಮಿ ಕಂಪನ ಅನುಭವವಾಗುತ್ತಿದ್ದಂತೆ ಮನೆಯೊಳಗಡೆ, ಕಟ್ಟದೊಳಗೆ ಇದ್ದವರು ಹೊರಗೆ ಓಡಿ ಬಂದಿದ್ದಾರೆ.
4.6ರ ತೀವ್ರ ದಾಖಲಾದ ಕಾರಣ, ಈ ಹಿಂದಿನ 4 ಭೂಕಂಪನಗಿಂತ ಹೆಚ್ಚು ತೀವ್ರತೆ ಹೊಂದಿದೆ. ಇಂದು(ಮೇ.29) ರಂದು ಸಂಭವಿಸಿದ ಭೂಕಂಪನದ ಕುರಿತ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಲಭ್ಯವಾಗಲಿದೆ.
ಕಳೆದೆರಡು ತಿಂಗಳಲ್ಲಿ ದೆಹಲಿಯಲ್ಲಿ 5 ಬಾರಿ ಭೂಕಂಪನ ಸಂಭವಿಸಿದೆ. ಮೇ. 15 ರಂದು ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 2.2 ರಷ್ಟು ತೀವ್ರತೆ ದಾಖಲಾಗಿತ್ತು. ಮೇ.10 ರಂದು 3.4 ರಷ್ಟು ತೀವ್ರತೆಯ ಭೂಕಂಪನವಾಗಿತ್ತು. ಎಪ್ರಿಲ್ 12 ಹಾಗೂ 13ರಂದುು ಕೂಡ ದೆಹಲಿಯಲ್ಲಿ ಭೂಮಿ ಕಂಪಿಸಿತ್ತು.
ಕೊರೋನಾ ವೈರಸ್‌ನಿಂದ ನಲುಗಿರುವ ದೆಹಲಿ ಜನತೆಗೆ ಇದೀಗ ಭೂಕಂಪನ ಮತ್ತಷ್ಚು ಆತಂಕ ತಂದಿದೆ.