Asianet Suvarna News Asianet Suvarna News

ವಿಶ್ವದಲ್ಲಿ ಆರ್ಥಿಕ ಹಿಂಜರಿತ ಆದರೂ ಲಾಭದಲ್ಲಿ ಭಾರತ

ಈ ವರ್ಷ ಜಾಗತಿಕ ಆರ್ಥಿಕ ಕುಸಿತದ ಸಾಧ್ಯತೆ ದಟ್ಟವಾಗಿದೆ. ಆದರೆ ಇದರಿಂದ ಭಾರತ, ಬಾಂಗ್ಲಾದೇಶದಂಥ ದಕ್ಷಿಣ ಏಷ್ಯಾ ರಾಷ್ಟ್ರಗಳು ತೊಂದರೆಗೆ ತುತ್ತಾಗುವ ಸಾಧ್ಯತೆ ಇಲ್ಲ. ಬದಲಾಗಿ ಅವುಗಳಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಫ್‌) ವರದಿ ತಿಳಿಸಿದೆ.

Despite the economic recession in the world, India is in profitable akb
Author
First Published Jan 17, 2023, 7:08 AM IST

ಪಿಟಿಐ ದಾವೋಸ್‌

ಈ ವರ್ಷ ಜಾಗತಿಕ ಆರ್ಥಿಕ ಕುಸಿತದ ಸಾಧ್ಯತೆ ದಟ್ಟವಾಗಿದೆ. ಆದರೆ ಇದರಿಂದ ಭಾರತ, ಬಾಂಗ್ಲಾದೇಶದಂಥ ದಕ್ಷಿಣ ಏಷ್ಯಾ ರಾಷ್ಟ್ರಗಳು ತೊಂದರೆಗೆ ತುತ್ತಾಗುವ ಸಾಧ್ಯತೆ ಇಲ್ಲ. ಬದಲಾಗಿ ಅವುಗಳಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಫ್‌) ವರದಿ ತಿಳಿಸಿದೆ. ದಾವೋಸ್‌ನಲ್ಲಿ ಸೋಮವಾರ ಆರಂಭ ಆಗಿರುವ ವಿಶ್ವ ಆರ್ಥಿಕ ಶೃಂಗಕ್ಕೂ ಮುನ್ನ ಆರ್ಥಿಕ ತಜ್ಞರನ್ನು ಸಂದರ್ಶಿಸಿ ನಡೆಸಲಾದ ಸಮೀಕ್ಷೆಯಲ್ಲಿ ಈ ಅಚ್ಚರಿಯ ಅಂಶ ಹೊರಬಿದ್ದಿದೆ.

ಭಾರತಕ್ಕೆ ಲಾಭ ಹೇಗೆ?:

ಜಾಗತಿಕ ಆರ್ಥಿಕ ಹಿಂಜರಿಕೆಯ ಹೊರತಾಗಿಯೂ ಭಾರತ(India), ಬಾಂಗ್ಲಾದೇಶದಂಥ (Bangladesh) ದೇಶಗಳು ಇದರ ಪರಿಣಾಮಕ್ಕೆ ತುತ್ತಾಗುವ ಸಾಧ್ಯತೆ ಇಲ್ಲ. ಬದಲಾಗಿ ಅವುಗಳಿಗೆ ಈ ಪರಿಸ್ಥಿತಿ ಹೆಚ್ಚಿನ ಲಾಭ ಮಾಡಬಹುದು ಎಂದು ಆರ್ಥಿಕ ವೇದಿಕೆ ವರದಿ ಹೇಳಿದೆ. ಕಾರಣ, ಈ ದೇಶಗಳ ಉತ್ಪಾದನಾ ವಲಯವು ಚೀನಾವನ್ನು ಹೆಚ್ಚಾಗಿ ಅವಲಂಬಿಸಿಲ್ಲ. ಅಲ್ಲದೆ, ಜಗತ್ತಿನ ಅನೇಕ ದೇಶಗಳು ಬದಲಾದ ವಿಶ್ವದಲ್ಲಿ ಚೀನಾ ಜತೆ ವ್ಯಾಪಾರ ವಹಿವಾಟಿನಿಂದ ದೂರವಾಗಿವೆ ಹಾಗೂ ಭಾರತಕ್ಕೆ ವ್ಯಾಪಾರ ವಹಿವಾಟಿನಲ್ಲಿ ಹತ್ತಿರವಾಗುತ್ತಿವೆ. ಹೀಗಾಗಿ ಭಾರತವು ಜಾಗತಿಕ ಆರ್ಥಿಕ ಹಿಂಜರಿಕೆಯ ಲಾಭ ಪಡೆಯುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಆರ್ಥಿಕ ಹಿಂಜರಿತ: ಚೀನಾಕ್ಕೆ ದೊಡ್ಡ ಗಂಡಾಂತರ ಐಎಂಎಫ್‌

ತಜ್ಞರ ಅಭಿಪ್ರಾಯ ಏನು?:

ಭೌಗೋಳಿಕ ರಾಜಕೀಯ ಬಿಕ್ಕಟ್ಟು 2023ರಲ್ಲೂ ಜಾಗತಿಕ ಆರ್ಥಿಕತೆಯ (global economy) ಹಣೆಬರಹವನ್ನು ರೂಪಿಸಲಿದೆ. ಅಮೆರಿಕ (America) ಮತ್ತು ಯುರೋಪ್‌ನಲ್ಲಿ ಹಣದುಬ್ಬರ ತಡೆಯಲು ಮತ್ತಷ್ಟು ಕಠಿಣ ವಿತ್ತೀಯ ಕ್ರಮ (monetary measures) ಜಾರಿ ಸಾಧ್ಯತೆ ಇದೆ. ಆಹಾರ, ಇಂಧನ, ಹಣದುಬ್ಬರ ಮತ್ತಷ್ಟು ಗಗನಕ್ಕೇರುವ ಸಂಭವ ಇದೆ ಎಂದು ವರದಿ ವಿವರಿಸಿದೆ.

ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ ಶೇ.70ರಷ್ಟು ತಜ್ಞರು 2023ರಲ್ಲಿ ಆರ್ಥಿಕ ಹಿಂಜರಿತ (economic recession) ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ. ಈ ಪೈಕಿ ಶೇ.18ರಷ್ಟು ಜನರು ಜಾಗತಿಕ ಆರ್ಥಿಕ ಹಿಂಜರಿಕೆ ಬಹುತೇಕ ಖಚಿತ ಎಂದಿದ್ದಾರೆ. ಈ ಪ್ರಮಾಣ, 2022ರ ಸೆಪ್ಟೆಂಬರ್‌ನಲ್ಲಿ ನಡೆಸಿದ ಸಮೀಕ್ಷೆಗಿಂತ ಎರಡು ಪಟ್ಟು ಹೆಚ್ಚು ಎಂಬುದು ಗಮನಾರ್ಹ. ಆದರೆ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.35ರಷ್ಟು ತಜ್ಞರು ಈ ವರ್ಷ ಆರ್ಥಿಕ ಹಿಂಜರಿತ ಸಾಧ್ಯತೆ ಇಲ್ಲ ಎಂದಿದ್ದಾರೆ. ಆದರೆ 2023ರಲ್ಲಿ ಜಾಗತಿಕ ಆರ್ಥಿಕ ಪ್ರಗತಿಯಲ್ಲಿ ಮಂದಗತಿಯ ಬೆಳವಣಿಗೆ ದಾಖಲಾಗಲಿದೆ ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಬಹುತೇಕ ತಜ್ಞರು ಒಮ್ಮತ ವ್ಯಕ್ತಪಡಿಸಿದ್ದಾರೆ.

2023ರಲ್ಲಿ ವಿಶ್ವದಲ್ಲಿ ಆರ್ಥಿಕ ಹಿಂಜರಿತ: ಆರ್ಥಿಕ ತಜ್ಞರ ಎಚ್ಚರಿಕೆ

ಪ್ರಸಕ್ತ ಇರುವ ಹಣದುಬ್ಬರ ಪ್ರಮಾಣ, ಆರ್ಥಿಕ ಪ್ರಗತಿಯಲ್ಲಿನ ಕುಂಠಿತ, ಹೆಚ್ಚಿನ ಸಾಲದ ಪ್ರಮಾಣ, ಪ್ರತಿಕೂಲ ಪರಿಸ್ಥಿತಿಯಿಂದಾಗಿ ಹೂಡಿಕೆಗೆ ಸೂಕ್ತ ಪ್ರೋತ್ಸಾಹ ಸಿಗದೇ ಇರುವ ಸಾಧ್ಯತೆ ಜಾಗತಿಕ ಆರ್ಥಿಕ ಹಿಂಜರಿಕೆಗೆ ಪ್ರಮುಖ ಕಾರಣವಾಗಿರಲಿದೆ ಎಂದು ತಜ್ಞರು ಹೇಳಿದ್ದಾರೆ.

Follow Us:
Download App:
  • android
  • ios