ಋಷಿಕೇಶ(ನ. 23)   ಕೊರೋನಾ ಸವಾಲಿನ ನಡುವೆಯೂ ಕುಂಭಮೇಳ ಆಯೋಜನೆ ಮಾಡಲಾಗುವುದು ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ತಿಳಿಸಿದ್ದಾರೆ. 

ಅಖಿಲ ಭಾರತೀಯ ಅಖಡಾ ಪರಿಷತ್ ನ(ಎಬಿಎಪಿ)  ಸಭೆಯಲ್ಲಿ ಭಾಗವಹಿಸಿದ ನಂತರ ಮುಖ್ಯಮಂತ್ರಿ ಈ ತೀರ್ಮಾನ ಪ್ರಕಟಿಸಿದರು. 2021ರ ಜನವರಿ 14ರಿಂದ ಕುಂಭಮೇಳ ಆರಂಭವಾಗಲಿದೆ.

ಕೋವಿಡ್‌-19  ಸಾಂಕ್ರಾಮಿಕದ ಸವಾಲಿನ ನಡುವೆಯೇ 2021ರಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿದೆ. ಸರ್ಕಾರದ ಇಲಾಖೆಗಳ ಕಾರ್ಯದರ್ಶಿಗಳಿಗೆ ಕುಂಭಮೇಳದ ಸಿದ್ಧತೆಯ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಸಹ 15 ದಿನಗಳಲ್ಲಿ ಪರಿಸ್ಥಿತಿಯ ಪರಿಶೀಲನೆ ಕೈಗೊಳ್ಳಲಿದ್ದಾರೆ. ಕೋವಿಡ್‌-19 ಪರಿಸ್ಥಿತಿಯನ್ನು ಆಧರಿಸಿ ಕುಂಭಮೇಳದ ವಿಸ್ತಾರ ಮತ್ತು ವ್ಯಾಪ್ತಿ ನಿರ್ಧರಿಸಲಾಗುತ್ತದೆ. ಎಬಿಎಪಿ ಹಾಗೂ ಧಾರ್ಮಿಕ ಸಂಘಟನೆಗಳ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.

ಇದು ದಕ್ಷಿಣದ ಕುಂಭಮೇಳ, ನಮ್ಮ ಕೊಪ್ಪಳದಲ್ಲಿ

ಈ ಬಾರಿಯ ಕುಂಭಮೇಳದಲ್ಲಿ ನಿತ್ಯ 35ರಿಂದ 50 ಲಕ್ಷ ಜನರು ಗಂಗಾ ನದಿಯಲ್ಲಿ ಪವಿತ್ರಸ್ನಾನ ಮಾಡುವ ನಿರೀಕ್ಷೆ ಇದ್ದು, ಕುಂಭಮೇಳಕ್ಕಾಗಿಯೇ ನಿರ್ಮಿಸಲಾಗುತ್ತಿರುವ ಒಂಬತ್ತು ಹೊಸ ಘಾಟ್‌ಗಳು (ನದಿ ತೀರಗಳು), ಎಂಟು ಸೇತುವೆಗಳು ಹಾಗೂ ರಸ್ತೆಗಳ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ.  ಸ್ವಚ್ಛತೆಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಕುಡಿಯುವ ನೀರಿನ ಸೌಲಭ್ಯ, ವಾಹನ ನಿಲುಗಡೆ ಹಾಗೂ ಅತಿಕ್ರಮ ಪ್ರವೇಶ ತಡೆಯಲು ಕ್ರಮ ತೆಗೆಗೆದುಕೊಂಡಿದ್ದು ಎಲ್ಲ ಕೆಲಸಗಳು  ಡಿಸೆಂಬರ್‌ 15ಕ್ಕೆ ಪೂರ್ಣಗೊಳ್ಳಲಿವೆ.

ಕುಂಭಮೇಳ ಆಯೋಜನೆ ಮತ್ತು ನಿರ್ವಹಣೆಗೆ ಎಬಿಎಪಿ ಸಕಲ ಸಹಕಾರವನ್ನು ಉತ್ತಾರಾಖಂಡ್ ಸರ್ಕಾರಕ್ಕೆ ನೀಡಲಿದೆ ಎಂದು ಎಬಿಎಪಿ ಮುಖ್ಯಸ್ಥ ಮಹಾಂತ್ ನರೇಂದ್ರ ಗಿರಿ ತಿಳಿಸಿದ್ದಾರೆ.

ಇಂಗ್ಲಿಷ್‌ ನಲ್ಲಿಯೂ ಓದಿ