ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳದ ಅಜ್ಜನ ಮಹಾರಥೋತ್ಸವ ನೋಡಲು ಎರಡು ಕಣ್ಣು ಸಾಲದು..!
ಎತ್ತ ನೋಡಿದ್ರು ಜನ ಸಾಗರ. ಭಕ್ತ ಸಾಗರದ ನಡುವೆ ನಡೆದ ವೈಭವದ ರಥೋತ್ಸವ.. ಈ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದ ಕೊಪ್ಪಳದ ಗವಿಸಿದ್ದೇಶ್ವರನ ಮಹಾರಥೋತ್ಸವದಲ್ಲಿ..ಇಂದು [ಭಾನುವಾರ] ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಪದ್ಮಶ್ರೀ ಪುರಸ್ಕೃತೆ, ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಚಾಲನೆ ನೀಡಿದರು. ಮಹಾರಥೋತ್ಸವದಲ್ಲಿ 5 ರಿಂದ 6 ಲಕ್ಷ ಭಕ್ತಾದಿಗಳು ಭಾಗಿಯಾಗಿದ್ದರು. ಈ ಬಾರಿಯ ರಥೋತ್ಸವವನ್ನು ಪ್ರಮುಖ ರಾಜಕೀಯ ನಾಯಕರು ಕಣ್ತುಂಬಿಕೊಂಡರು. ಮಹಾರಥೋತ್ಸದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಸಿ.ಟಿ. ರವಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸೇರಿ ಜಿಲ್ಲೆಯ ಹಾಲಿ-ಮಾಜಿ ಶಾಸಕರು ಉಪಸ್ಥಿತರಿದ್ದರು.
2ನೇ ಕುಂಭಮೇಳ ಎಂದೇ ಕರೆಸಿಕೊಳ್ಳುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಇಂದು [ಭಾನುವಾರ] ಅದ್ದೂರಿಯಾಗಿ ಜರುಗಿತು.
ಮಹಾರಥೋತ್ಸವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಣ್ತುಂಬಿಕೊಂಡರು
ಅಭಿನವ ಗವಿಸಿದ್ಧೇಶ್ವರರ ನೇತೃತ್ವದಲ್ಲಿ ನಡೆದ ಜಾತ್ರೆಯನ್ನು ಧ್ವಜಾರೋಹಣದ ಮೂಲಕ ಶ್ರೀಮತಿ ಮಾಲತಿ ಹೊಳ್ಳ ಅವರು ಉದ್ಘಾಟಿಸಿದರು.
ಕೊಪ್ಪಳದ ಗವಿಸಿದ್ಧೇಶ್ವರ ಅಜ್ಜನ ಮಹಾರಥೋತ್ಸವನ್ನು ಪ್ರಮುಖ ರಾಜಕೀಯ ನಾಯಕರು ಕಣ್ತುಂಬಿಕೊಂಡರು.
ಕೊಪ್ಪಳದ ಗವಿಸಿದ್ಧೇಶ್ವರ ಅಜ್ಜನ ಮಹಾರಥೋತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಕಂಡಿದ್ದು ಹೀಗೆ
ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆ ನಿಮಿತ್ಯ ದೀಪಾಲಂಕಾರಗಳಿಂದ ಭಕ್ತರ ಗಮನ ಸೆಳೆಯುತ್ತಿರುವ ಶ್ರೀ ಗವಿಮಠ
2ನೇ ಕುಂಭಮೇಳ ಎಂದೇ ಕರೆಸಿಕೊಳ್ಳುವ ಕೊಪ್ಪಳ ಮಹಾರಥೋತ್ಸವ ನೋಡಲು ಎರಡು ಕಣ್ಣು ಸಾಲದು..!
ಕೊಪ್ಪಳದ ಗವಿಸಿದ್ಧೇಶ್ವರ ಅಜ್ಜನ ಜಾತ್ರೆಗೆ ಹೋಗಿದ್ದೆ. ಜನಸಾಗರವೋ ಸಾಗರ. ಲಕ್ಷಾಂತರ ಜನ ಸ್ವಯಂ ಪ್ರೇರಿತರಾಗಿ ಜಾತ್ರೆಗೆ ಬಂದಿದ್ದರು.
ಗವಿಸಿದ್ಧೇಶ್ವರ ಮಹಾರಥೋತ್ಸವದಲ್ಲಿಸಿಎಂ ಬಿಎಸ್ ಯಡೊಯೂರಪ್ಪನವರ ಪುತ್ರ ಬಿವೈ ವಿಜಯೇಂದ್ರ ಉಪಸ್ಥಿತರಿದ್ದರು.
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಪದ್ಮಶ್ರೀ ಪುರಸ್ಕೃತೆ, ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಚಾಲನೆ ನೀಡಿದರು.
ಈ ಬಾರಿಯ ಮಹಾರಥೋತ್ಸವದಲ್ಲಿ 5 ರಿಂದ 6 ಲಕ್ಷ ಭಕ್ತಾದಿಗಳು ಭಾಗಿಯಾಗಿದ್ದಾರೆ.
ಕೊಪ್ಪಳದ ಗವಿಸಿದ್ಧೇಶ್ವರ ಅಜ್ಜನ ಜಾತ್ರೆಗೆ ಬಂದಿದ್ದ ಜನಸಾಗರದತ್ತ ಕೈಬೀಸಿದ ಸಿದ್ದರಾಮಯ್ಯ
ಮಹಾರಥೋತ್ಸದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಸಿ.ಟಿ. ರವಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಭಾಗಿ ಸೇರಿ ಜಿಲ್ಲೆ ಹಾಲಿ-ಮಾಜಿ ಶಾಸಕರು ಉಪಸ್ಥಿತರಿದ್ದರು.
ಅಜ್ಜನ ಜಾತ್ರೆಯಲ್ಲಿ ಸೇರಿದ ಭಕ್ತರು, ಡ್ರೋನ್ ಕ್ಯಾಮರದಲ್ಲಿ ಸೆರೆ
ಸಂಪೂರ್ಣ ಭಕ್ತರಿಂದ ತುಂಬಿ ತುಳುಕಿದ ಕೊಪ್ಪಳ ಅಜ್ಜನ ಜಾತ್ರೆ