Asianet Suvarna News Asianet Suvarna News

Alpine girl| ಆರೋಗ್ಯ ಸಮಸ್ಯೆ ನಡುವೆಯೂ 50 ಸರೋವರ ಏರಿದ ನಮ್ರತಾ!

* ಸಂಧಿವಾತದಿಂದ ಬಳಲುತ್ತಿದ್ದರೂ ಒಂದೇ ಋುತುವಿನಲ್ಲಿ ಈ ಸಾಧನೆ

* ಆರೋಗ್ಯ ಸಮಸ್ಯೆ ನಡುವೆಯೂ 50 ಸರೋವರ ಏರಿದ ನಮ್ರತಾ

Despite arthritis Alpine girl Namrata climbs 50 lakes located at 10000 feet above sea level pod
Author
Bangalore, First Published Nov 8, 2021, 8:04 AM IST

ಶ್ರೀನಗರ(ನ.08): ಬೆಂಗಳೂರಿನ (Bengaluru) ಮಹಿಳೆಯೊಬ್ಬರು ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ ಕಾಶ್ಮೀರದಲ್ಲಿ (Kashmir) ಸಮುದ್ರಮಟ್ಟದಿಂದ ಸುಮಾರು 10 ಸಾವಿರ ಅಡಿ ಎತ್ತರದಲ್ಲಿರುವ 50 ಎತ್ತರದ ಸರೋವರಗಳಿಗೆ ಟ್ರೆಕ್ಕಿಂಗ್‌ ಮಾಡಿ ಅಲ್ಪೈನ್‌ ಗರ್ಲ್ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಂಧಿವಾತದಿಂದ ಬಳಲುತ್ತಿರುವ ಹೊರತಾಗಿಯೂ ಅವರು ಮಾಡಿರುವ ಈ ಸಾಧನೆಯನ್ನು ಚಾರಣಿಗರು ಬಹುವಾಗಿ ಹೊಗಳಿದ್ದಾರೆ.

ದಕ್ಷಿಣ ಕಾಶ್ಮೀರದ ಪಿರ್‌ ಪಂಜಾಲ್‌ ಮತ್ತು ಝನ್ಸ$್ಕರ್‌ ಪರ್ವತ ಶ್ರೇಣಿಗಳ ನಡುವೆಯಿರುವ ತುಲಿಯನ್‌ ಸರೋವರದಿಂದ ಆರಂಭಸಿದ ಚಾರಣವನ್ನು ಅನಂತ್‌ನಾಗ್‌- ಕಿಶ್ತ್ವಾರ್‌ ಪ್ರದೇಶದ ಶಿಲ್ಸಾರ್‌ ಸರೋವರದವರೆಗೆ ಮುಂದುವರೆಸಿದ್ದಾರೆ. ಈ ಸರೋವರಗಳು ಸಮುದ್ರಮಟ್ಟದಿಂದ ಸುಮಾರು 10,000 ಅಡಿ ಎತ್ತರದಲ್ಲಿವೆ.

‘ಏನೂ ಪೂರ್ವ ನಿರ್ಧಾರಿತವಾಗಿರಲಿಲ್ಲ. ಕಳೆದ ಚಳಿಗಾಲದಲ್ಲಿ ಶ್ರೀನಗರಕ್ಕೆ ಭೇಟಿ ನೀಡಿದಾಗ ನನ್ನ ಪತಿ ಅಭೀಷೇಕ್‌ ಹೆಪ್ಪುಗಟ್ಟಿದ ದಾಲ್‌ ಸರೋವರವನ್ನು (Dal Lake) ನೋಡಲು ಬಯಸಿದ್ದರು. ಅಲ್ಲಿಂದಲೇ ಸರೋವರಗಳ ಚಾರಣದ ಬಗ್ಗೆ ನಾವು ಯೋಚಿಸಿದೆವು. ನನ್ನ 33ನೇ ಹುಟ್ಟುಹಬ್ಬದ ಉಡುಗೊರೆಯಾಗಿ 33 ಸರೋವರಗಳನ್ನು ಚಾರಣ ಮಾಡಲು ನಿರ್ಧರಿಸಿದ್ದೆ. ನಂತರ ನನ್ನ ಗುರಿಯನ್ನು 50 ಸರೋವರಗಳಿಗೆ ಹೆಚ್ಚಿಸಿದೆ ಎಂದು ನಂದೀಶ್‌ ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಎಚ್‌ಆರ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ನಮ್ರತಾ (Namrata) ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ಬಳಸಿಕೊಂಡು ಜೂನ್‌ ತಿಂಗಳ ಮಧ್ಯ ಭಾಗದಿಂದ ಕೇವಲ ವಾರಾಂತ್ಯದಲ್ಲಿ ಚಾರಣವನ್ನು ನಡೆಸುತ್ತ ಒಟ್ಟಾರೆ 31 ದಿನಗಳಲ್ಲಿ 460 ಕಿ.ಮೀ ದೂರ ಚಾರಣ ಮಾಡಿ ಹೊಸ ದಾಖಲೆ ಬರೆದಿದ್ದಾರೆ.

ರಷ್ಯಾ ಪರ್ವತದಲ್ಲಿ ಕನ್ನಡದ ಬಾವುಟ ನೆಟ್ಟ ಬೆಂಗಳೂರಿಗ!

ಬೆಂಗಳೂರಿನ (Bengaluru) ನಿವಾಸಿ ಮತ್ತು ಟ್ರೆಕ್‌ನೊಮಾಡ್ಸ್‌ ಫೌಂಡೇಶನ್‌ ಸಂಸ್ಥಾಪಕ ನವೀನ್‌ ಮಲ್ಲೇಶ್‌ (Naveen Mallesh) ಅವರು ರಷ್ಯಾದ (Russia) ಅತ್ಯಂತ ಎತ್ತರದ ಶಿಖರ ‘ಮೌಂಟ್‌ ಎಲ್‌ಬ್ರಸ್‌’ (Mount Elbrus) ಏರಿ ಕನ್ನಡದ ಬಾವುಟ ಹಾರಿಸಿದ್ದಾರೆ.

ಯುರೋಪ್‌ ಖಂಡದಲ್ಲೇ ಅತ್ಯಂತ ಎತ್ತರದ 18,510 ಅಡಿ (5,642 ಮೀಟರ್‌) ಶಿಖರವೇರಿದ ನವೀನ್‌ ‘ಕನ್ನಡ ಮತ್ತು ಭಾರತದ ಬಾವುಟ ನೆಟ್ಟಿದ್ದಾರೆ. ರಷ್ಯಾದ ಶಿಖರದಲ್ಲಿ ಕನ್ನಡದ ಹೆಜ್ಜೆ ಮೂಡಿಸಿದ ನವೀನ್‌, ಈ ಹಿರಿಮೆಯನ್ನು ಕೊರೋನಾ (Covid ) ಫ್ರಂಟ್‌ಲೈನ್‌ ವಾರಿಯರ್‌ಗಳಾದ ವೈದ್ಯರು, ದಾದಿಯರು, ಆಸ್ಪತ್ರೆ ಸಿಬ್ಬಂದಿ, ಪೊಲೀಸರು (Police), ಪೌರಕಾರ್ಮಿಕರು ಸೇರಿದಂತೆ ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ.

ಅತಿ ಎತ್ತರದ ಕಿಲಿಮಂಜಾರೋ ಪರ್ವತದ ಮೇಲೆ ಸೋನು ಸೂದ್ ಫೋಟೋ; ಅಭಿಮಾನಿಯಿಂದ ಧನ್ಯವಾದ!

ಸದ್ಯ ಪರ್ವತದ ಪ್ರಯಾಣ ಕುರಿತು ಫೋಟೊ ಮತ್ತು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನವೀನ್‌ ತಾವೇ ರೂಪಿಸಿದ ಅಲೆಮಾರಿ ಚಾರಣಿಗರು ಯೋಜನೆಯ 7ನೇ ಆವೃತ್ತಿಯಲ್ಲಿ ‘ಮೌಂಟ್‌ ಎಲ್‌ಬ್ರಸ್‌’ ಹತ್ತಲು ಸೆಪ್ಟೆಂಬರ್‌ ಮೊದಲ ವಾರ ನಿರ್ಧರಿಸಿದ್ದರು. ವಿಸಾ ಸಿಗುವುದು ತಡವಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ಮೂರನೇ ವಾರ ಯೋಜನೆ ಆರಂಭವಾಯಿತು. ಗೈಡ್‌ನ ಸಹಾಯದಿಂದ ಫೌಂಡೇಶನ ಸದಸ್ಯರ ಜೊತೆ ಸೆ.17ಕ್ಕೆ ಶಿಖರವೇರುವ ಕಾರ್ಯ ಆರಂಭವಾಯಿತು. ಈವರೆಗೂ ನಾನು ಏರಿದ ಪರ್ವತಗಳ ಪೈಕಿ ಈ ಎಲ್‌ಬ್ರಸ್‌ ಕಠಿಣ ಹಾದಿ. ಅತಿ ಚಳಿ ಜೊತೆಗೆ ದೇಹ ವಾತಾವರಣಕ್ಕೆ ಹೊಂದಿಕೊಳ್ಳದ ಸ್ಥಿತಿ ಎದುರಿಸಿ ಚಾರಣ ಯಶಸ್ವಿಯಾಗಿ ಕೊನೆಗೊಳಿಸಿದೆವು ಎಂದು ನವೀನ್‌ ಬರೆದುಕೊಂಡಿದ್ದಾರೆ.

ನವೀನ್‌ ನಗರದ ಡಾ.ಅಂಬೇಡ್ಕರ್‌ ತಾಂತ್ರಿಕ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಲಖನೌನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ್ದಾರೆ. ಜತೆಗೆ ಜವಾಹರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮೌಂಟೇನಿಯರಿಂಗ್‌ ಆ್ಯಂಡ್‌ ವಿಂಟರ್‌ ಸ್ಪೋಟ್ಸ್‌ರ್‍ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.

Follow Us:
Download App:
  • android
  • ios