ಹೈದರಾಬಾದ್(ಮೇ.09): ಕೆಲ ವರ್ಷಗಳಿಂದ ಪ್ರೀತಿ ಆರಂಭಗೊಂಡಿತ್ತು. ಹುಡುಗನ ವಯಸ್ಸು 22, ಹುಡಿಗಿಯ ವಯಸ್ಸು 20. ಮನೆಯವರ ಒಪ್ಪಿಗೆ ಪಡೆದಿದ್ದರು. ಲಾಕ್‌ಡೌನ್‌ಗೂ ಮುನ್ನ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ ಲಾಕ್‌ಡೌನ್ ಕಾರಣ 3 ಬಾರಿ ಮದುವೆ ಮುಂದೂಡಲಾಯಿತು. ಇಷ್ಟೇ ನೋಡಿ ಆಗಿದ್ದು, ಈ ಯುವಜೋಡಿಗಳು ತಮ್ಮ ಬದುಕಿಗೆ ಅಂತ್ಯ ಹಾಡಿದ್ದಾರೆ.

ವಿಷಾನಿಲ ಸೋರಿಕೆ ಪ್ರಕರಣ: ಎಲ್‌ಜಿಗೆ 50 ಕೋಟಿ ದಂಡ!.

ಕೃಷಿಕನಾಗಿ ತೊಡಗಿಸಿಕೊಂಡಿದ್ದ ತೆಲಂಗಾಣದ ಆದಿಲ್‌ಬಾದ್ ಜಿಲ್ಲೆಯ ಕನ್ನಾಪುರ್ ಗ್ರಾಮದ 22ರ ಹರಯ ಪೆಂದೂರ್ ಗಣೇಶ್ ಹಾಗೂ ಅದೇ ಗ್ರಾಮದ  20ರ ಹರೆಯ ಸೀತಾಬಾಯಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರಿಗೆ ಹೇಳಿ ಎಲ್ಲರ ಒಪ್ಪಿಗೆ ಪಡೆದು ಮದುವೆಗೆ ತಯಾರಿ ಆರಂಭಿಸಿದ್ದರು. ಲಾಕ್‌ಡೌನ್ ಕಾರಣದಿಂದ ಮದುವೆ ವಿಳಂಬವಾಗುತ್ತಲೇ ಹೋಯಿತು.

ಮೊದಲೇ ಪ್ರೀತಿಸಿ ಮದುವೆಯಾಗುತ್ತಿರುವ ಕಾರಣ ತಮ್ಮ ಮದುವೆ ನಡೆಯುತ್ತೋ ಇಲ್ವೋ ಅನ್ನೋ ಅನಮಾನಗಳು ಕಾಡತೊಡಗಿದೆ. ತೆಲಂಗಾಣದಲ್ಲಿ ಲಾಕ್‌ಡೌನ್ ವಿಸ್ತರಣೆಯಾಗುತ್ತಲೇ ಇದೆ. ಹೀಗಾಗಿ ಈ ಜೋಡಿ ನಮ್ಮ ಮದುವೆ ನಡೆಯುವುದೇ ಇಲ್ಲ ಎಂದುಕೊಂಡು ಕ್ರಿಮಿನಾಶಕ ಸೇವಿಸಿ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಇದೀಗ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.