Asianet Suvarna News Asianet Suvarna News

ಮೇ 31ರಿಂದ ದೆಹಲಿ ಅನ್‌ಲಾಕ್‌ ಆರಂಭ: ಉ. ಪ್ರದೇಶದಲ್ಲೂ ಶೀಘ್ರ ಲಾಕ್ಡೌನ್‌ ಸಡಿಲ!

* ಮೇ 31ರಿಂದ ದೆಹಲಿ ಅನ್‌ಲಾಕ್‌ ಆರಂಭ

* ಹಂತಹಂತವಾಗಿ ನಿರ್ಬಂಧ ತೆರವು ಪ್ರಕ್ರಿಯೆ ಶುರು

* ಉತ್ತರ ಪ್ರದೇಶದಲ್ಲೂ ಶೀಘ್ರ ಲಾಕ್ಡೌನ್‌ ಸಡಿಲ

Delhi Unlock process to begin from May 31 factories construction activities allowed pod
Author
Bangalore, First Published May 29, 2021, 9:51 AM IST | Last Updated May 29, 2021, 4:28 PM IST

ನವದೆಹಲಿ(ಮೇ.29): ಈ ತಿಂಗಳ ಆರಂಭದಲ್ಲಿ ನಿತ್ಯವೂ 25000ಕ್ಕೂ ಹೆಚ್ಚು ಕೇಸು ದಾಖಲಾಗಿ, 300-400 ಸಾವಿಗೆ ಸಾಕ್ಷಿಯಾಗುತ್ತಿದ್ದ ದೆಹಲಿಯಲ್ಲಿ ಕೊನೆಗೂ ಕೋವಿಡ್‌ ನಿಯಂತ್ರಣಕ್ಕೆ ಬಂದಿದ್ದು, ಮಹಾನಗರಿಯಲ್ಲಿ ಆನ್‌ಲಾಕ್‌ ಪ್ರಕ್ರಿಯೆ ಆರಂಭಕ್ಕೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರ್ಕಾರ ನಿರ್ಧರಿಸಿದೆ.

"

ಈ ಕುರಿತು ಹೇಳಿಕೆ ನೀಡಿರುವ ಕೇಜ್ರಿವಾಲ್‌, ‘ಅದು ಹೇಗೋ ನಾವು ಕೊರೋನಾ 2ನೇ ಅಲೆಯ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಹೀಗಾಗಿ ಸರ್ಕಾರ ಹಂತಹಂತವಾಗಿ ಅನ್‌ಲಾಕ್‌ ಪ್ರಕ್ರಿಯೆ ಆರಂಭಕ್ಕೆ ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ಮೇ 31ರ ಸೋಮವಾರದಿಂದ ಕಟ್ಟಡ ನಿರ್ಮಾಣ ಚಟುವಟಿಕೆ ಮತ್ತು ಕಾರ್ಖಾನೆಗಳ ಪುನಾರಂಭಕ್ಕೆ ಅವಕಾಶ ನೀಡಲಾಗುವುದು. ಮುಂದೆ ತಜ್ಞರ ವರದಿ ಆಧರಿಸಿ ಪ್ರತಿವಾರವೂ ಆನ್‌ಲಾಕ್‌ ಪ್ರಕ್ರಿಯೆ ಜಾರಿಗೊಳಿಸಲಾಗುವುದು. ಒಂದು ವೇಳೆ ಈ ಪ್ರಕ್ರಿಯೆ ವೇಳೆ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಳವಾದಲ್ಲಿ ನಾವು ಅನ್‌ಲಾಕ್‌ ಪ್ರಕಿಯೆ ಸ್ಥಗಿತಗೊಳಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಆದರೆ ಅನ್‌ಲಾಕ್‌ ಪ್ರಕ್ರಿಯೆ ಆರಂಭದ ಹೊರತಾಗಿಯೂ, ಸೋಂಕಿನ ವಿರುದ್ಧದ ನಮ್ಮ ಹೋರಾಟ ನಿಲ್ಲದು. ಇದು ಸೋಂಕು ನಿಯಂತ್ರಣ ಮತ್ತು ಹಸಿವಿನಿಂದ ಜನರ ಸಾವನ್ನು ತಪ್ಪಿಸುವ ಸಮತೋಲನದ ನಡೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಶುಕ್ರವಾರ 1141 ಹೊಸ ಕೇಸು ದಾಖಲಾಗಿದ್ದು, 139 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ 1500ಕ್ಕಿಂತ ಕಡಿಮೆ ದಾಖಲಾಗುತ್ತಿರುವುದು ಇದು ಸತತ ಮೂರನೇ ದಿನ. ಇನ್ನು ಪಾಸಿಟಿವಿಟಿ ದರ ಶೇ.159ಕ್ಕೆ ಇಳಿಕೆಯಾಗಿದೆ.

ಈ ನಡುವೆ ಉತ್ತರಪ್ರದೇಶ ಸರ್ಕಾರ ಕೂಡಾ ರಾಜ್ಯದಲ್ಲಿ ಹೇರಲಾಗಿರುವ ಕೊರೊನಾ ಕಫä್ರ್ಯವನ್ನು ಜೂನ್‌ ಮೊದಲ ವಾರದಿಂದ ಸಡಿಲ ಮಾಡುವ ಸಾಧ್ಯತೆ ಇದೆ. ಆದರೆ ರಾತ್ರಿ ಮತ್ತು ವಾರಾಂತ್ಯ ಕಫ್ರ್ಯೂ ಹಿಂದಿನಂತೆಯೇ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios