ನವದೆಹಲಿ: ರಸ್ತೆಯಲ್ಲಿ ಸಣ್ಣ ಮಾತಿನ ಚಕಮಕಿಯಿಂದ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ: ರಸ್ತೆಯಲ್ಲಿ ಸಣ್ಣ ಮಾತಿನ ಚಕಮಕಿಯಿಂದ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಹೆಣ್ಣಿನ ವೇಷ ಧರಿಸಿದ್ದ ಆದರೆ ನೋಡಲು ಯುವಕನಂತೆ ಕಾಣುವ ವ್ಯಕ್ತಿ ಹಾಗೂ ಮತ್ತೊರ್ವ ವ್ಯಕ್ತಿಯ ನಡುವೆ ಪರಸ್ಪರ ಮಾತಿನ ವಾಕ್ಸಮರ ನಡೆಯುತ್ತದೆ. ಈ ವೇಳೆ ಹೆಣ್ಣಿನ ವೇಷ ಧರಿಸಿದಾನಿಗೆ ಮತ್ತೊಬ್ಬ ಕಪಾಳ ಮೋಕ್ಷ ಮಾಡಿದ್ದಾನೆ. ಈ ವೇಳೆ ಸಿಟ್ಟಿಗೆದ್ದ ಹೆಣ್ಣಿನ ವೇಷಧಾರಿ ತನ್ನ ತಲೆಗೆ ಹಾಕಿದ್ದ ವಿಗ್ ತೆಗೆದು ತನಗೆ ಹೊಡೆದಾತನನ್ನು ನೆಲಕ್ಕೆ ಬೀಳಿಸಿ ಆತನಿಗೆ ಸರಿಯಾಗಿ ಬಾರಿಸುತ್ತಾನೆ.
ಹೆಣಿನ ವೇಷದಲ್ಲಿದತ್ತ ಬ್ಯಾಕ್‌ಲೆಸ್ ಡ್ರೆಸ್ ಧರಿಸಿದ್ದು, ವಿಗ್ ಕಿತ್ತೆಸೆದು ತನಗೆ ಹೊಡೆದಾತನಿಗೆ ತಿರುಗಿಸಿ ಬಾರಿಸುತ್ತಿದ್ದೇನೆ. ರಸ್ತೆಯಲ್ಲಿ ಹೋಗುವವರೆಲ್ಲಾ ಇವರ ಹೊಡೆದಾಟವನ್ನು ನೋಡುತ್ತಾ ನಿಂತಿದ್ದಾರೆ. ಹೆಣ್ಣಿನ ವೇಷದಲ್ಲಿದ್ದಾತ ಮಂಗಳಮುಖಿಯೋ ಅಥವಾ ಹೆಣ್ಣಿನ ವೇಷದಲ್ಲಿದ್ದ ಗಂಡೋ ಎಂಬುದು ಮಾತ್ರ ತಿಳಿದು ಬಂದಿಲ್ಲ. ನಡುರಸ್ತೆಯಲ್ಲಿ ಇವರ ಹೊಡೆದಾಟದಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದಂತು ನಿಜ. ಆದರೆ ಯಾಕಾಗಿ ಈ ಇಬ್ಬರು ಕಿತ್ತಾಡಿಕೊಂಡರು ಎಂಬುದು ತಿಳಿದಿಲ್ಲ.
ನಡುರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಆಗಾಗ ಗಲಾಟೆಯಾಗುತ್ತಿರುತ್ತದೆ. ಇದರ ಹಲವು ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ರಸ್ತೆ ಅಪಘಾತಗಳಲ್ಲಿ ಕೆಲವೊಮ್ಮೆ ತಪ್ಪಿಲ್ಲದೇ ಶಿಕ್ಷೆಗೊಳಗಾಗುವ ಸನ್ನಿವೇಶಗಳು ನಡೆದಿರುವುದನ್ನು ನೀವು ನೋಡಿರಬಹುದು. ಹೇಗೋ ಅಚಾನಕ್ ಆಗಿ ಅಪಘಾತವಾಗುತ್ತದೆ. ಈ ವೇಳೆ ಸಮೀಪದಲ್ಲಿದ್ದ ವಾಹನವೇ ತನ್ನ ವಾಹನಕ್ಕೆ ಡಿಕ್ಕಿ ಹೊಡೆಯಿತು ಎಂದು ಜಗಳವಾಗುವುದನ್ನು ಸಾಮಾನ್ಯವಾಗಿ ನೋಡಿದ್ದೇವೆ. ಅದೇ ರೀತಿಯ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ಆದರೆ ಹಿಂಬದಿ ಇದ್ದ ಬೈಕ್ ಸವಾರನ ಅದೃಷ್ಟ ಚೆನ್ನಾಗಿತ್ತೋ ಏನೋ ಆತನ ವಾಹನದಲ್ಲಿದ್ದ ಕ್ಯಾಮರಾದಲ್ಲಿ ಘಟನೆ ಸೆರೆಯಾದ ಕಾರಣ ಆತ ದೊಡ್ಡ ಅನಾಹುತದಿಂದ ಪಾರಾಗಿದ್ದಾನೆ.
ಜಮೀನು ವಿವಾದ, ನಡುರಸ್ತೆಯಲ್ಲೇ ಬಡಿದಾಟ ಮಹಿಳೆಯರಿಗೇ ದೊಣ್ಣೆಯಿಂದ ಥಳಿತ
ಜೋಡಿಯೊಂದು ಬೈಕೊಂದರಲ್ಲಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದು, ದೂರ ಹೋಗುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಇವರು ಪ್ರಯಾಣಿಸುತ್ತಿದ್ದ ಸ್ಕೂಟಿ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತದೆ. ಸ್ಕೂಟರ್‌ನಲ್ಲಿದ್ದ ಇಬ್ಬರು ಕೆಳಗೆ ಬೀಳುತ್ತಾರೆ. ಕೂಡಲೇ ಮೇಲೆದ್ದ ಮಹಿಳೆ ಸೀದಾ ಬಂದು ಹಿಂಬದಿ ಬರುತ್ತಿದ್ದ ಬೈಕ್ ಸವಾರನಿಗೆ ಧಮ್ಕಿ ಹಾಕಲು ಶುರು ಮಾಡುತ್ತಾಳೆ. ನೀವು ಬೈಕ್‌ನಲ್ಲಿ ಹಿಂದಿನಿಂದ ಗುದ್ದಿದ್ದರಿಂದಲೇ ನಾವು ಕೆಳಗೆ ಬಿದ್ದೆವು ಎಂದು ಮಹಿಳೆ ಆರೋಪ ಮಾಡುತ್ತಾಳೆ. ಆದರೆ ಈತ ತನ್ನ ವಾಹನದಲ್ಲಿದ್ದ ಕ್ಯಾಮರಾ ರೆಕಾರ್ಡಿಂಗ್ ಅನ್ನು ಅವರಿಗೆ ತೋರಿಸಲು ಯತ್ನಿಸುತ್ತಾನೆ ಆದಾಗ್ಯೂ ಆಕೆ ರೆಕಾರ್ಡಿಂಗ್ ನೋಡಲು ಇಷ್ಟ ಪಡದೇ ಈತನೊಂದಿಗೆ ವಾದ ಮುಂದುವರೆಸುತ್ತಾಳೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಡ್ಯಾಸ್‌ಕ್ಯಾಮ್‌ಗಳ ಅಗತ್ಯತೆ ಬಗ್ಗೆ ಚರ್ಚೆ ಹುಟ್ಟಿಸಿದೆ. ವಿದೇಶಗಳಲ್ಲಿ ಇಂತ ಡ್ಯಾಶ್‌ಕ್ಯಾಮ್‌ಗಳ ಬಳಕೆ ಸಾಮಾನ್ಯವಾಗಿದೆ.
JNU clash ಜೆಎನ್‌ಯುನಲ್ಲಿ ಮಾರಾಮಾರಿ, ವಿದ್ಯಾರ್ಥಿ ಸಂಘಟನೆಗಳ ಬಡಿದಾಟದಲ್ಲಿ ಹಲವರಿಗೆ ಗಾಯ!
ಈ ವೀಡಿಯೊದ ಉದ್ದೇಶವು ಯಾವ ರೀತಿ ಘಟನೆಗಳು ಸಂಭವಿಸಬಹುದು ಎಂಬುದನ್ನು ತೋರಿಸುವ ಸಲುವಾಗಿ ಆಗಿದೆ. ಮತ್ತು ಒಂದು ಸಣ್ಣ ತಪ್ಪು ನಡೆ ನಿಮ್ಮ ತಪ್ಪಲ್ಲದಿದ್ದರೂ ಸಹ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಯಾವಾಗಲೂ ನಿಮ್ಮ ಸುತ್ತಮುತ್ತಲಿನ ಬಗ್ಗೆ ಜಾಗೃತರಾಗಿರಿ ಮತ್ತು ಸುರಕ್ಷಿತವಾಗಿ ಸವಾರಿ ಮಾಡಿ ಎಂದು ಬೈಕರ್ ಆನ್‌ಲೈನ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ.