ನವದೆಹಲಿ, (ನ.4): ದೆಹಲಿಯಲ್ಲಿ ಕೊರೋನಾ 3ನೇ ಅಲೆ ಶುರುವಾಗಿದೆ. ಕೊರೊನಾ ಹನಿಜ್ವರದ ತೀವ್ರತೆ ದಿನೇ ದಿನೇ ಹೆಚ್ಚುತ್ತಿದೆ.  ಹಾಗಾಗಿ ಇದನ್ನು ಮೂರನೇ ಅಲೆ ಅನ್ನಬಹುದು ಅಂಥ ಕೇಜ್ರಿವಾಲ್ ಹೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮತನಾಡಿದ ಅವರು, ದೆಹಲಿಗರು ಭಯಪಡುವ ಅಗತ್ಯ ಇಲ್ಲ. ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ ಎಂದರು.

ಮೂಡಿತು ಭರವಸೆ; ಡಿಸಂಬರ್ ಅಂತ್ಯಕ್ಕೆ ಕೈ ಸೇರಲಿದೆ ಕೋವಿಡ್ ಲಸಿಕೆ?

ಕೊರೋನಾ ಸೋಂಕಿನಿಂದ ಜೀವಹಾನಿ ತಪ್ಪಿಸಲು ಹಾಗು ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ಡೆಲ್ಲಿ ಸರ್ಕಾರ ಸಿದ್ಧವಿದೆ. ಯಾವುದೇ ತುರ್ತು ಸಂದರ್ಭಗಳಲ್ಲಿಯೂ ಆಸ್ಪತ್ರೆಯ ಹಾಸಿಗೆಗಳ ಕೊರತೆಯಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ವಿವರಿಸಿದರು.

ಸುಪ್ರೀಂನಲ್ಲಿ ಪ್ತಶ್ನೆ :
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಶೇ.80% ಐಸಿಯು  ಬೆಡ್ ಗಳನ್ನು ಕೊರೋನಾ ಸೋಂಕಿತರಿಗೆ  ಕಾಯ್ದಿರಿಸಬೇಕೆಂಬ  ನಿಯಮಕ್ಕೆ ಹೈಕೋರ್ಟ್ ತಡೆ ನೀಡಿದೆ. ಈ ತಡೆಯಾಜ್ಞೆ ತೆರವುಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದರು. 
ದೀಪಾವಳಿ ಹಿನ್ನಲೆಯಲ್ಲಿ  ಪಟಾಕಿ ಸಿಡಿಸುವುದನ್ನು ನಿಷೇಧಿಸುವುದರ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು ಈ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.

ದೆಹಲಿಯಲ್ಲಿ ಮಂಗಳವಾರ 59,540 ಕೊರೊನಾ ಪರೀಕ್ಷೆಗಳನ್ನು ನಡೆಸಿದ್ದು,  6,725 ಪ್ರಕರಣಗಳು ವರದಿಯಾಗಿದ್ದವು. ಜೊತೆಗೆ 48 ಮಂದಿ ಸೋಂಕಿತರ ಬಲಿಯಾಗಿದ್ದಾರೆ.