ನವದೆಹಲಿ(ಮೇ.16): ಪ್ರತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವಾಗ ಪರಿಶೀಲಿಸುವುದು ಅಗತ್ಯ. ಪೋಸ್ಟ್ ಮಾಡುತ್ತಿರುವ ಫೋಟೋ, ವಿಡಿಯೋ ಅಥವಾ ಮಾಹಿತಿ ಸತ್ಯವೇ ಅನ್ನೋದನ್ನು ಮತ್ತೊಮ್ಮೆ ಪರಿಶೀಲಿಸಿ ಪೋಸ್ಟ್ ಮಾಡಿದರೆ ದೇಶದ ಹಲವು ಸಮಸ್ಯೆಗಳು ಬಗೆಹರಿಯುತ್ತದೆ. ಇದೀಗ ದೆಹಲಿ ಬಿಜೆಪಿ ಸಂಸದ ಪರ್ವೇಶ್ ಸಿಂಗ್ ಇದೇ ರೀತಿ ಎಡವಟ್ಟು ಮಾಡಿ ದೆಹಲಿ ಪೊಲೀಸರಿಂದ ಎಚ್ಚರಿಕೆ ಪಡೆದಿದ್ದಾರೆ.

ಜೆಡಿಎಸ್ ನಾಯಕರ ದಿನಸಿ ವಿತರಣೆ ಕಾರ್ಯಕ್ರಮದಲ್ಲಿ ಮಾಸ್ಕ್ ಇಲ್ಲ, ಅಂತರವೂ ಇಲ್ಲ.!.

ಪರ್ವೇಶ್ ಸಿಂಗ್ ಇತ್ತೀಚೆಗೆ ಮುಸ್ಲೀಂರು ಸಾಮೂಹಿಕ ಪ್ರಾರ್ಥನೆ ಮಾಡುತ್ತಿರು ವಿಡಿಯೋ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಬಳಿಕ ಕೊರೋನಾ ವೈರಸ್ ಇರುವ ಈ ಸಂದರ್ಭದಲ್ಲಿ ಯಾವ ಧರ್ಮ ಈ ರೀತಿ ಅನುಮತಿ ನೀಡುತ್ತದೆ. ಲಾಕ್‌ಡೌನ್, ಸಾಮಾಜಿಕ ಅಂತರ ನಿಯಮವೆಲ್ಲ ನಿರ್ನಾಮವಾಗಿದೆ ಎಂದು ಟ್ವೀಟ್ ಮಾಡಿದ್ದರು.

ನಾವು ಮೋದಿಯನ್ನ ಕೊಲ್ಲುತ್ತೇವೆ, 6 ವರ್ಷ ಬಾಲಕನ ಬಾಯಲ್ಲಿ ಇದೆಂತಾ ಮಾತು!

ಇದಕ್ಕೆ ದೆಹಲಿ ಪೊಲೀಸರು ಪ್ರತಿಕ್ರಿಯೆಸಿದ್ದಾರೆ. ನೀವು ಟ್ವೀಟ್ ಮಾಡುವು ಮೊದಲು ಸರಿಯಾಗಿ ಪರಿಶೀಲಿಸಿ. ಇದು ಹಳೆ ವಿಡಿಯೋ, ಲಾಕ್‌ಡೌನ್‌ಗೂ ಮೊದಲಿನ ವಿಡಿಯೋ ಎಂದು ಪೊಲೀಸರು ಹೇಳಿದ್ದಾರೆ. ತಕ್ಷಣವೇ ಪರ್ವೇಶ್ ಸಿಂಗ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ದೆಹಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. ಬಿಜೆಪಿ ನಾಯಕರು ಈ ರೀತಿ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹರಡುವುದೇ ಅವರ ಕೆಲಸ ಎಂದಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಪರ್ವೇಶ್ ಸಿಂಗ್, ಆಪ್ತರೊಬ್ಬರು ಈ ವಿಡಿಯೋ ಕಳಹಿಸಿದ್ದರು. ಆದರೆ ಲಾಕ್‌ಡೌನ್ ಹಿಂದಿನ ವಿಡಿಯೋ ಎಂದು ಅರಿತಾಗ ಡಿಲೀಟ್ ಮಾಡಿದ್ದೇನೆ ಎಂದಿದ್ದಾರೆ.