6 ಶಂಕಿತ ಭಯೋತ್ಪಾದಕರ ಬಂಧಿಸಿದ ದೆಹಲಿ ಪೊಲೀಸ್ 6ರಲ್ಲಿ ಇಬ್ಬರು ಪಾಕಿಸ್ತಾನದಿಂದ  ತರಬೇತಿ ಪಡೆದ ಉಗ್ರರು ಮಹಾರಾಷ್ಟ್ರ, ದೆಹಲಿ, ಯುಪಿ ಮೇಲೆ ದಾಳಿಗೆ ಸಂಚು 

ನವದೆಹಲಿ(ಸೆ.14): ಕೊರೋನಾದಿಂದ ಚೇತರಿಸಿಕೊಂಡಿರುವ ಭಾರತದಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಈಗಾಗಲೇ ಗಣೇಶ ಹಬ್ಬ ಆಚರಿಸಿದ ಜನ ಇದೀಗ ನವರಾತ್ರಿ, ರಾಮಲೀಲಾ ಹಬ್ಬಕ್ಕೆ ತಯಾರಿ ಆರಂಭಿಸಿದ್ದಾರೆ. ಆದರೆ ಇದೇ ಹಬ್ಬದ ಸಂದರ್ಭದಲ್ಲಿ ಪಾಕಿಸ್ತಾನದಿಂದ ತರಬೇತಿ ಪಡೆದ ಉಗ್ರರು ಭಾರತದಲ್ಲಿ ದಾಳಿಗೆ ರೂಪಿಸಿದ್ದ ಸಂಚು ಬಯಲಾಗಿದೆ. ಮಹತ್ವದ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸರು 6 ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸ್ಫೋಟಕ ಸಾಮಾಗ್ರಿ, ಕಚ್ಚಾ ಬಾಂಬ್, ಅತ್ಯಾಧುನಿಕ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.

ಗೀಲಾನಿ ಮೃತದೇಹಕ್ಕೆ ಪಾಕ್‌ ಧ್ವಜ, ದೇಶದ್ರೋಹಿ ಘೋಷಣೆ: ಕುಟುಂಬದ ವಿರುದ್ಧ FIR!

ಹಲವು ರಾಜ್ಯಗಳಲ್ಲಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ 6 ಮಂದಿ ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ಭಯೋತ್ಪಾದಕರಿಗೆ ಭೂಗತ ಪಾತಕಿ ದಾವುದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಆರ್ಥಿಕ ನೆರವು ನೀಡುತ್ತಿರುವುದಾಗಿ ವಿಶೇಷತ ತನಿಖಾ ದಳ ಪೊಲೀಸ್ ಅಧಿಕಾರಿ ನೀರಜ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Scroll to load tweet…

ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿನ ಹಬ್ಬಗಳ ಸಂದರ್ಭದಲ್ಲಿ ದಾಳಿ ಮಾಡಲು ಈ ಭಯೋತ್ಪಾದಕರು ಸಂಚು ರೂಪಿಸಿದ್ದರು.ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ಆರಂಭಗೊಂಡಿತ್ತು ಎಂದು ನೀರಜ್ ಠಾಕೂರ್ ಹೇಳಿದ್ದಾರೆ.

ಗಡಿಯಲ್ಲಿ ಹೈಅಲರ್ಟ್; ವಾಘಾ ಬಾರ್ಡರ್‌ನಲ್ಲಿ ಫುಲ್ ಬಾಡಿ ಟ್ರಕ್ ಸ್ಕ್ಯಾನರ್ ಅಳವಡಿಸಿದ ಭಾರತ!

ಬಂಧನಕ್ಕೊಳಗಾಗಿರುವ 6 ಮಂದಿಯನ್ನು ಮಹಾರಾಷ್ಟ್ರದ ಜನ್ ಮೊಹಮ್ಮದ್ ಶೇಖ್, ದೆಹಲಿಯ ಒಸಾಮಾ ಸಾಮಿ, ರಾಯ್ ಬರೇಲಿಯ ಲಾಲಾ, ಉತ್ತರ ಪ್ರದೇಶದ ಜೀಶಾನ್ ಎಂದು ಗುರುತಿಸಲಾಗಿದೆ. ಲಖನೌದ ಮೊಹಮದ್ ಅಮೀರ್ ಜಾವೇದ್ ಒಸಾಮಾ ಮತ್ತು ಜೀಶನ್ ಪಾಕಿಸ್ತಾನದಲ್ಲಿ ಭಯೋತ್ಪದಾನ ತರಬೇತಿ ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪಾಕಿಸ್ತಾನ ಪೋಷಿತ ಭಯೋತ್ಪಾದನೆ ಇದಾಗಿದೆ. ಕಾಶ್ಮೀರದ ಆಸೆ ಮರೀಚಿಗೆಯಾಗುತ್ತಿದ್ದಂತೆ 2008ರ ಮುಂಬೈ ರೀತಿಯಲ್ಲಿನ ದಾಳಿ ನಡೆಸಲು ಪಾಕ್ ಮೂಲದ ಭಯೋತ್ಪಾದಕರು ಸಂಚು ರೂಪಿಸಿತ್ತಾದ್ದಾರೆ. ಇವರಿಗೆ ಭಾರತದಲ್ಲಿನ ಹಲವು ಮರೆಯಲ್ಲಿ ಕೆಲಸ ಮಾಡುತ್ತಿರುವ ಭಯೋತ್ಪಾದಕರು ನೆರವಾಗುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.