Asianet Suvarna News Asianet Suvarna News

ರಾಷ್ಟ್ರ ರಾಜಧಾನಿಯಲ್ಲಿ ಅನ್‌ಲಾಕ್‌ ಆರಂಭ: ಸರಿ ಬೆಸ ಆಧಾರದಲ್ಲಿ ಮಾರುಕಟ್ಟೆ, ಮಾಲ್ ಓಪನ್!

* ಅನ್ ಲಾಕ್ 2.0 ಗೆ ಕೇಜ್ರಿವಾಲ್ ಆದೇಶ

* ಶೇ.50ರಷ್ಟು ಸಾಮರ್ಥ್ಯದಲ್ಲಿ ಮೆಟ್ರೋಗೆ ಅವಕಾಶ

* ಸರಿ ಬೆಸ ಆಧಾರದಲ್ಲಿ ಮಾರುಕಟ್ಟೆ, ಮಾಲ್‌ಗಳಿಗೆ ಅವಕಾಶ

Delhi markets to open on odd even basis from Monday metro to run at 50 pc capacity pod
Author
Bangalore, First Published Jun 5, 2021, 2:57 PM IST

ನವದೆಹಲಿ(ಜೂ.05): ಮಾರಕ ಕೊರೋನಾ ವೈರಸ್ ಉಲ್ಬಣದಿಂದಾಗಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಸೋಮವಾರಕ್ಕೆ ಅಂತ್ಯವಾಗಲಿದೆ. ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆಗೆ ಸಿಎಂ ಕೇಜ್ರಿವಾಲ್ ಸರ್ಕಾರ ಚಾಲನೆ ನೀಡಿದ್ದಾರೆ.

ಸರಿ ಬೆಸ ಆಧಾರದಲ್ಲಿ ಮಾರುಕಟ್ಟೆ, ಮಾಲ್ ಗಳಿಗೆ ಅವಕಾಶ: 

ಅನ್‌ಲಾಕ್‌ ಪ್ರಕ್ರಿಯೆ ಬಗ್ಗೆ ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರೀವಾಲ್ ದೆಹಲಿಯಲ್ಲಿ 'ಅನ್ ಲಾಕ್' ಯೋಜನೆಗೆ ಪ್ರೋತ್ಸಾಹ ನೀಡುವ ಭಾಗವಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಗರದ ಮಾರುಕಟ್ಟೆಗಳನ್ನು ಸಮ-ಬೆಸ ನಿಯಮದ ಆಧಾರದಲ್ಲಿ ತೆರೆಯಲು ಅನುಮತಿ ನೀಡಲಾಗುವುದು. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯವನ್ನು ನಿವಾರಿಸಲು ಸಮ-ಬೆಸ ನಿಯಮವನ್ನು ಜಾರಿಗೊಳಿಸಲಾಗಿತ್ತು. ಇದೀಗ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲೂ ಇದೇ ಸಮಬೆಸ ಆಧಾರದ ಮೇಲೆ ಮಾರುಕಟ್ಟೆ ಮತ್ತು ಅಂಗಡಿಗಳನ್ನು ಪ್ರತಿದಿನ ತೆರೆಯಲು ಅನುಮತಿಸಲಾಗುತ್ತದೆ. ಮಾಲ್ ಗಳು ಹಾಗೂ ಶಾಪಿಂಗ್ ಸೆಂಟರ್ ಗಳನ್ನೂ ಕೂಡ ಸಮ-ಬೆಸ ಆಧಾರದಲ್ಲಿ ತೆರೆಯಲ್ಪಡುತ್ತವೆ ಎಂದಿದ್ದಾರೆ.

ಈ ಸಮ-ಬೆಸ ಮಾದರಿಯಲ್ಲಿ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರಲಿದೆ ಎಂದು ಹೇಳಿದ್ದಾರೆ. ಸಂಭಾವ್ಯ ಮೂರನೇ ಅಲೆ ವೇಳೆ ದೆಹಲಿಯಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 37 ಸಾವಿರಕ್ಕೆ ದಾಖಲಾಗುವ ಕುರಿತು ತಜ್ಞರು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಸರ್ಕಾರ ಕೋವಿಡ್ ನಿಯಮಗಳನ್ನು ಮುಂದುವರೆಸಲು ನಿರ್ಧರಿಸಿದೆ.

ಮೆಟ್ರೋದಲ್ಲಿ ಶೇ.50ರಷ್ಟು ಪ್ರಯಾಣಿಕರು


ಇನ್ನು ಸರ್ಕಾರಿ ಸಾರಿಗೆ ಸೇವೆಗಳಿಗೂ ನಿಯಮ ಜಾರಿ ಮಾಡಲಾಗಿದ್ದು, ಪ್ರಮುಖವಾಗಿ ಮೆಟ್ರೋ ರೈಲಿನಲ್ಲಿ ಶೇ.50 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೇವಲ 50 ಪ್ರತಿಶತದಷ್ಟು ಆಸನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಅಂತೆಯೇ ಖಾಸಗಿ ಕಚೇರಿಗಳನ್ನು ಶೇಕಡಾ 50 ರಷ್ಟು ಉದ್ಯೋಗಗಳ ಮಿತಿಯೊಂದಿಗೆ ತೆರೆಯಬಹುದು ಎಂದಿದ್ದಾರೆ. 

ಎಲ್ಎನ್ ಜೆಪಿ ಆಸ್ಪತ್ರೆಯಲ್ಲಿ ಜೆನೋಮ್ ಸೀಕ್ವೆನ್ಸ್ ಲ್ಯಾಬ್\

ಇದೇ ವೇಳೆ ಕೊರೋನಾ ವೈರಸ್ ರೂಪಂತರವನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಎಲ್ಎನ್ ಜೆಪಿ ಆಸ್ಪತ್ರೆಯಲ್ಲಿ ಜೆನೋಮ್ ಸೀಕ್ವೆನ್ಸ್ ಲ್ಯಾಬ್ ತೆರೆಯಲು ನಿರ್ಧರಿಸಲಾಗಿದೆ. ಅಂತೆಯೇ ದೆಹಲಿಯಲ್ಲಿ ಕೋವಿಡ್ ಸೋಂಕು ಹೆಚ್ಚಳಕ್ಕೆ ಕಾರಣವಾದ ಅಂಶಗಳ ಅಧ್ಯಯನಕ್ಕೆ ಈ ಲ್ಯಾಬ್ ನೆರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios