ಶಾರೂಕ್ ಖಾನ್ ಆಗಿ ಬದಲಾದ ಮೇಕಪ್ ಆರ್ಟಿಸ್ಟ್ ದೆಹಲಿಯ ಮೇಕಪ್ ಆರ್ಟಿಸ್ಟ್ ದೀಕ್ಷಿತಾ ಕೈ ಚಳಕ
ದೆಹಲಿ(ಡಿ.29): ಮೇಕಪ್‌ನಲ್ಲಿ ಹೇಗೆ ಹೇಗೋ ಇರುವವರನ್ನು ಮತ್ತಿನ್ಹೇಗೋ ತೋರಿಸಬಹುದು. ಅಷ್ಟೊಂದು ಬದಲಾವಣೆಗಳು ಇಂದು ಮೇಕಪ್ ಕ್ಷೇತ್ರದಲ್ಲಾಗಿದೆ. ಮೇಕಪ್ ಕಲಾವಿದೆಯೊಬ್ಬರು ಶಾರುಖ್ ಖಾನ್ (Shah Rukh Khan) ಆಗಿ ವಿಸ್ಮಯಕಾರಿಯಾಗಿ ರೂಪಾಂತರಗೊಂಡಿರುವ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೆಹಲಿಯ ಮೇಕಪ್ ಆರ್ಟಿಸ್ಟ್ ದೀಕ್ಷಿತಾ(Dikshita) ಎಂಬವರು ಹೀಗೆ ಮೇಕಪ್ ಹಾಕಿ ಬಾದ್‌ಷಾ ರೀತಿ ಕಾಣಿಸುತ್ತಿದ್ದಾರೆ. ಮೇಕಪ್ ಕಲೆಯಲ್ಲಿ ತುಂಬಾ ಪಳಗಿರುವವರಿಗೆ ಮಾತ್ರ ಇದು ಸಾಧ್ಯ, ಮೇಕಪ್ ಸಾಧನಗಳಾದ ಬ್ಲೆಂಡರ್ಸ್, ಬ್ರಷ್, ಪಫ್ ಜೊತೆ ಆಟವಾಡುವ ದೀಕ್ಷಿತಾ ಕೆಲ ಕ್ಷಣದಲ್ಲೇ ಶಾರೂಖ್ ಖಾನ್ ಆಗಿ ರೂಪಾಂತರಗೊಳ್ಳುತ್ತಾಳೆ.
ಪ್ರಸ್ತುತ ದೀಕ್ಷಿತಾ ತಮ್ಮ ಅದ್ಭುತ ಮೇಕ್ಅಪ್ ಕೌಶಲ್ಯದಿಂದ ವೈರಲ್ ಆಗಿದ್ದಾಳೆ. ಆಕೆ ಮಾಡಿದ ಮೇಕಪ್ ಯಾರನ್ನು ಬೇಕಾದರೂ ಆಶ್ಚರ್ಯಕ್ಕೆ ದೂಡುವುದರಲ್ಲಿ ಎರಡು ಮಾತಿಲ್ಲ. ಮತ್ತು ಅದು ನಿಮ್ಮನ್ನು ಕೂಡ ಆಶ್ಚರ್ಯಚಕಿತಗೊಳಿಸುತ್ತದೆ. ಈ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಟುಕ್ಸೆಡೊ ಧರಿಸಿರುವ ಶಾರುಖ್ ಖಾನ್ ಅವರ ಚಿತ್ರವನ್ನು ಮೊದಲಿಗೆ ತೋರಿಸುವ ದೀಕ್ಷಿತಾ ತಾವು ಮೇಕಪ್ ಮಾಡುತ್ತಾ ಶಾರೂಕ್ ಖಾನ್ ಆಗಿ ಬದಲಾಗುವುದನ್ನು ಈ ವಿಡಿಯೋದಲ್ಲಿ ತೋರಿಸುತ್ತಾರೆ. ಈ ವಿಡಿಯೋಗೆ ಹಿನ್ನೆಲೆಯಲ್ಲಿ ಶಾರುಖ್ ಅವರ ಚಮ್ಮಕ್ ಚಲ್ಲೋ ಹಾಡನ್ನು ಹಾಕಲಾಗಿದೆ.
ಬಾಲಿವುಡ್ ಕಿಂಗ್ ಶಾರೂಕ್ ಖಾನ್ ಆಗಿ ರೂಪಾಂತರಗೊಂಡಿರುವುದು ಎಂದು ಅವರು ಈ ವಿಡಿಯೋಗೆ ಕ್ಯಾಪ್ಷನ್ ನೀಡಿ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾವಿರಾರು ಜನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ದೀಕ್ಷಿತಾ ಅದ್ಭುತವಾದ ಕೆಲಸ ಮಾಡಿದ್ದಾರೆ. ಇದನ್ನು ಶಾರೂಖ್ ಖಾನ್ ನೋಡಬೇಕಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ ಸಾಕುನಾಯಿಯೊಂದು ಮೇಕಪ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾಕು ನಾಯಿ(pet Dog) ಕುಟುಂಬ ಸದಸ್ಯರಿದ್ದಂತೆ. ಅವುಗಳ ತುಂಟಾಟಗಳು, ಪ್ರೀತಿ ತೋರುವ, ಮುದ್ದಾಡುವ ರೀತಿ ಎಲ್ಲವೂ ಇಷ್ಟವಾಗುತ್ತದೆ. ಸಾಕು ನಾಯಿ ಉತ್ತಮ ಸ್ನೇಹಿತ ಕೂಡ ಹೌದು. ಸಾಕು ನಾಯಿಗಳ ಹಲವು ವಿಡಿಯೋಗಳು ವೈರಲ್(Viral video) ಆಗಿದೆ. ಇದೀಗ ಸಾಕು ನಾಯಿಯೊಂದು ಮೇಕ್ಅಪ್ ಅರ್ಟಿಸ್ಟ್(Makeup artist) ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಮುಕುಲ್ ರಿಚರ್ಡ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಾಕು ನಾಯಿ ಬನ್ನಿ, ಮುಕುಲ್ ರಿಚರ್ಡ್ಸ್‌ಗೆ ಮೇಕಪ್ ಮಾಡಲು ನೆರವಾಗುತ್ತಿದೆ. ಮುಕುಲ್ ಮೇಕಪ್ ಮಾಡಲು ಬಿಡದೆ ತಾನು ಮೇಕಪ್ ಮಾಡಲು ಉತ್ಸಾಹ ತೋರುತ್ತಿರುವ ನಾಯಿಗೆ ಯಾವ ರೀತಿ ಮೇಕಪ್ ಮಾಡಬೇಕು ಅನ್ನೋದನ್ನು ಮುಕುಲ್ ರಿಚರ್ಡ್ಸ್ ಹೇಳಿಕೊಟ್ಟಿದ್ದಾರೆ.
ಇಂಡಿಯನ್ ಕ್ರಿಕೆಟಿಗರ ಪತ್ನಿಯರ ಮೇಕಪ್ ಇಲ್ಲದ ಲುಕ್ ಹೇಗಿದೆ ನೋಡಿ!
ಹೆಣ್ಮಕ್ಕಳು ಮೇಕಪ್ (Makeup) ಇಲ್ಲದೆ ಮನೆಯಿಂದ ಹೊರಬರುವುದು ಕಡಿಮೆ. ಅಷ್ಟರಮಟ್ಟಿಗೆ ಹೆಣ್ಮಕ್ಕಳ ಜೀವನದಲ್ಲಿ ಮೇಕಪ್‌ಗೆ ಪ್ರಾಶಸ್ತ್ಯವಿದೆ. ಆದರೆ ಮೇಕಪ್ ಮಾಡುವುದರಿಂದ ಸಹಜವಾಗಿ ಇರುವ ಸೌಂದರ್ಯ (Beauty) ಹಾಳಾಗಬಹುದು. ಹೀಗಾಗಿ ನ್ಯಾಚುರಲ್ ಲುಕ್ ಎಲ್ಲಾ ಟೈಂನಲ್ಲೂ ಬೆಸ್ಟ್. ಅದರಲ್ಲೂ ಮೇಕಪ್ ಇಲ್ಲದೆ ಹುಡುಗಿಯರ ಲೈಫೇ ಇಲ್ಲ. ದಿನದ ಹೆಚ್ಚು ಸಮಯವನ್ನು ಮೇಕಪ್‌ನಲ್ಲೇ ಕಳೆಯುತ್ತಾರೆ. ಅದರಲ್ಲೂ ಆಫೀಸ್, ಪಾರ್ಟಿ, ಮದುವೆ ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಇಂಥಹದ್ದೇ ಮೇಕಪ್ ಬೆಸ್ಟ್ ಅನ್ನೋದು ಬೇರೆ ಇದೆ. ಹೀಗಾಗಿ ಮೇಕಪ್ ಆರ್ಟಿಸ್ಟ್‌ಗಳಿಗೂ ಇವತ್ತಿನ ದಿನಗಳಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.
Beauty Tips: ಮೇಕಪ್ ಮಾಡಿಕೊಳ್ಳದೆ ಸುಂದರವಾಗಿ ಕಾಣುವುದು ಹೇಗೆ..?
ಮೇಕಪ್ ಕಾಣೋದ್ರಿಂದ ವಯಸ್ಸಿನ ಅಂತರವೂ ಇಲ್ಲದೆ ಎಲ್ಲರೂ ಸುಂದರವಾಗಿ ಕಾಣುತ್ತಾರೆ ಅನ್ನೋದೇನೂ ನಿಜ. ಆದರೆ ಫೌಂಡೇಶನ್, ಕ್ರೀಮ್, ಲಿಪ್‌ಸ್ಟಿಕ್ ಮೊದಲಾದ ರಾಸಾಯನಿಕಯುಕ್ತ ಮೇಕಪ್ ಐಟಂಗಳನ್ನು ಧರಿಸುವುದರಿಂದ ಮುಖದ ಸಹಜ ಸೌಂದರ್ಯ ಇಲ್ಲವಾಗುತ್ತದೆ.
