ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆಗಳೊಂದಿಗೆ ಮದರಸಾ ಮುಸ್ಲಿಮ್ ವಿದ್ಯಾರ್ಥಿಗಳು, ಮೌಲ್ವಿಗಳು ತಿರಂಗ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಈ ತಿರಂಗ ಯಾತ್ರೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. 

ದೆಹಲಿ(ಆ.15): 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ದೇಶದಲ್ಲಿ ಮನೆ ಮಾಡಿದೆ. ಅಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾನದಿಂದ ಇಡೀ ದೇಶದಲ್ಲಿ ತಿರಂಗ ಹಾರಾಡಿದೆ. ಪ್ರತಿ ಮನೆ, ಕಚೇರಿ, ಸಂಘ ಸಂಸ್ಥೆಗಳು, ಸ್ಮಾರಕ, ಕಟ್ಟಡಗಳಲ್ಲಿ ತಿರಂಗ ಹಾರಾಡುತ್ತಿದೆ. ದೆಹಲಿಯ ಮದರಸಾದಲ್ಲಿ ವಿದ್ಯಾರ್ಥಿಗಳು, ಮೌಲ್ವಿಗಳು ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ದೆಹಲಿಯ ರೂರ್ಕಿಯ ರೆಹಮಾನಿಯಾ ಮದರಸಾ ಹರ್ ಘರ್ ತಿರಂಗ ಸಂಭ್ರಮದಿಂದ ಆಚರಿಸಿದೆ. ಮದರಸಾ ವಿದ್ಯಾರ್ಥಿಗಳು ಹಾಗೂ ಮೌಲ್ವಿಗಳು ರಾಷ್ಟ್ರ ಧ್ವಜ ಹಿಡಿದು ವಂದೇ ಮಾತರಂ ಘೋಷಣೆಗಳನ್ನು ಕೂಗಿದ್ದಾರೆ. ಮದರಸಾ ವಿದ್ಯಾರ್ಥಿಘಲ ರಾಷ್ಟ್ರಪ್ರೇಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮದರಸಾದಲ್ಲಿ ಬೆಳಗ್ಗೆ ಧ್ವಜಾರೋಹಣ ನೆರವೇರಿಸಲಾಗಿತ್ತು. ವಿದ್ಯಾರ್ಥಿಗಳು ಮೌಲ್ವಿಗಳು, ಮುಸ್ಲಿಮ್ ಮುಖಂಡರು ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಬಳಿಕ ಪ್ರತಿಯೊಬ್ಬರು ರಾಷ್ಟ್ರ ಧ್ವಜ ಹಿಡಿದು ಯಾತ್ರೆ ನಡೆಸಲಾಗಿದೆ. ರೂರ್ಕಿ ರೆಹಮಾನಿಯಾ ಮದರಸಾದಿಂದ ರೂರ್ಕಿ ಬಜಾರ್ ವರೆಗಿನ ಯಾತ್ರೆಯಲ್ಲಿ ಭಾರತ್ ಮಾತಾ ಕಿ ಜೈ, ವಂದೇ ಮಾತರಂ, ಹಿಂದುಸ್ತಾನ್ ಜಿಂದಾಬಾದ್ ಘೋಷಣೆಗಳು ಮೊಳಗಿದೆ.

72 ಲಕ್ಷ ರೂಪಾಯಿ ಜಾಗ್ವಾರ್ ಕಾರಿಗೆ ತಿರಂಗ ಪೈಂಟ್, ಯುವಕನ ಕಾರ್ಯಕ್ಕೆ ಮೆಚ್ಚುಗೆ!

ಈ ವಿಶೇಷ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬೆಹ್ರೋಜ್ ಆಲಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಗುಲ್ಮಾಮ್ ಶೇಖ್ ಸೇರಿದಂತೆ ಕೆಲ ರಾಜಕೀಯ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಮ್ಮ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿ, ಆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದಾರೆ. ಇದೇ ವೇಳೆ, ರಾಷ್ಟ್ರ ವಿಭಜನೆಯ ಕರಾಳ ದಿನ ನಡೆಯಲಿದ್ದು, ಇದರ ಮುನ್ನಾ ದಿನವಾದ ಶನಿವಾರ ಈ ಕುರಿತ ವಸ್ತು ಪ್ರದರ್ಶನಕ್ಕೆ ನಡ್ಡಾ ಚಾಲನೆ ನೀಡಿದರು. ಬಳಿಕ ಉತ್ತರ ಪ್ರದೇಶದ ಮೇರಠ್‌ನಲ್ಲಿ ತಿರಂಗಾ ರಾರ‍ಯಲಿ ನಡೆಸಿದರು. ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಅವರು ಉತ್ತರ ಪ್ರದೇಶದ ಬಲಿಯಾದಲ್ಲಿ ತಿರಂಗಾ ರಾರ‍ಯಲಿಯಲ್ಲಿ ಭಾಗಿಯಾದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಅವರು ಹಿಮಾಚಲ ಪ್ರದೇಶದ ಉನಾ ಪಟ್ಟಣದಲ್ಲಿ ನಡೆದ ‘ಪ್ರಭಾತಫೇರಿ’ಯಲ್ಲಿ ಭಾಗಿಯಾದರು. ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಜೋಧಪುರದಲ್ಲಿ ಪುತ್ಥಳಿಯೊಂದರ ಅನಾವರಣದಲ್ಲಿ ಪಾಲ್ಗೊಂಡರು.

ಸಚಿನ್, ರೋಹಿತ್ ಶರ್ಮಾ ಸೇರಿ ಟೀಂ ಇಂಡಿಯಾ ಕ್ರಿಕೆಟಿಗರ ಸ್ವಾತಂತ್ರ್ಯ ದಿನಾಚರಣೆ ಹೇಗಿತ್ತು?

ಇದೇ ವೇಳೆ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಶಾಸಕರು, ಸಚಿವರು ಹರ್‌ ಘರ್‌ ತಿರಂಗಾದಲ್ಲಿ ಪಾಲ್ಗೊಂಡು, ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಿದರು. ದೇಶದ ಬಹುತೇಕ ಊರುಗಳಲ್ಲಿ ಜನಸಾಮಾನ್ಯರು ತಮ್ಮ ಮನೆ, ಕಚೇರಿ, ವಾಹನಗಳ ಮೇಲೆ ತ್ರಿವರ್ಣಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು.