ಮದ್ಯಪಾನ ಸೇವನೆಯ ಕನಿಷ್ಠ ವಯೋಮಿತಿ ಇಳಿಕೆ| ಮದ್ಯಪಾನದ ಕನಿಷ್ಠ ವಯಸ್ಸು 25ರಿಂದ 21ಕ್ಕೆ ಇಳಿಕೆ

ನವದೆಹಲಿ(ಮಾ.21): ಮದ್ಯಪಾನ ಸೇವನೆಯ ಕನಿಷ್ಠ ವಯೋಮಿತಿಯನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸುವ ಪ್ರಸ್ತಾವನೆಗೆ ದಿಲ್ಲಿ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಹೇಳಿದ್ದಾರೆ.

ಸಚಿವರ ಶಿಫಾರಸುಗಳ ಮೇರೆಗೆ ಅಬಕಾರಿಯ ನೂತನ ನೀತಿಗಳನ್ನು ಶನಿವಾರ ದಿಲ್ಲಿ ಸಚಿವ ಸಂಪುಟ ಸಭೆ ಅನುಮೋದಿಸಿದೆ.

ಈ ಪ್ರಕಾರ ಹೊಸ ಬಾರ್‌ಗಳ ಆರಂಭಕ್ಕೆ ಅನುಮತಿ ನೀಡುವುದಿಲ್ಲ. ಸರ್ಕಾರವೂ ಬಾರ್‌ಗಳನ್ನು ನಡೆಸುವುದಿಲ್ಲ ಎಂದಿದ್ದಾರೆ. ಈಗಾಗಲೇ ದಿಲ್ಲಿಯಲ್ಲಿನ ಶೇ.60 ಬಾರ್‌ಗಳು ಸರ್ಕಾರದ ಅಧೀನದಲ್ಲಿವೆ.