ದಿಲ್ಲಿ ಸಿಎಂ ಕಚೇರಿಯಲ್ಲಿ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಫೋಟೋಗಳನ್ನು ಸ್ಥಳಾಂತರಿಸಿ ರಾಷ್ಟ್ರಪತಿ ಮತ್ತು ಪ್ರಧಾನಿ ಫೋಟೋ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ. ಆಪ್ ದಲಿತ ವಿರೋಧಿ ಎಂದು ಟೀಕಿಸಿದರೆ, ಬಿಜೆಪಿ ಹಾಲಿ ಆಡಳಿತಗಾರರ ಫೋಟೋ ಹಾಕಿದ್ದಾಗಿ ಸಮರ್ಥಿಸಿಕೊಂಡಿದೆ.
ನವದೆಹಲಿ (ಫೆ.25): ಬಿಜೆಪಿ ಹೆದ್ದ ಬಳಿಕ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿರುವ ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸಿಎಂ ಕಚೇರಿಯಲ್ಲಿನ ಅಂಬೇಡ್ಕರ್ ಹಾಗೂ ಭಗತ್ ಸಿಂಗ್ ಫೋಟೋಗಳನ್ನು, ಕಚೇರಿಯಲ್ಲಿನ ಬೇರೆ ಗೋಡೆಗೆ ಸ್ಥಳಾಂತರಿಸಿದ್ದು ವಿವಾದಕ್ಕೀಡಾಗಿದೆ. ಆ ಫೋಟೋಗಳಿದ್ದ ಜಾಗದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಕಲಾಗಿದೆ. ಇದನ್ನು ದಲಿತ ವಿರೋಧಿ ನಡೆ ಎಂದು ಆಪ್ ಖಂಡಿಸಿದೆ. ಆದರೆ ಸಿಎಂ ರೇಖಾ ಇದಕ್ಕೆ ತಿರುಗೇಟು ನೀಡಿ, ‘ಮುಖ್ಯಮಂತ್ರಿ ಕುರ್ಚಿಯ ಗೋಡೆ ಹಿಂದೆ ದೇಶದ ಹಾಲಿ ಆಡಳಿತಗಾರರ ಫೋಟೋ ಇರಬೇಕು ಎಂದು ಮುರ್ಮು ಹಾಗೂ ಮೋದಿ ಫೋಟೋ ಹಾಕಲಾಗಿದೆ. ಎದುರಿನ ಗೋಡೆ ಮೇಲೆ ಅಂಬೇಡ್ಕರ್ ಹಾಗೂ ಭಗತ್ ಫೋಟೋ ಹಾಕಲಾಗಿದೆ. ಯಾರಿಗೂ ಅಗೌರವ ತೋರಿಲ್ಲ’ ಎಂದಿದ್ದಾರೆ.
ಅತಿಶಿ ಆರೋಪವನ್ನು ತೀವ್ರವಾಗಿ ಖಂಡಿಸಿರುವ ರೇಖಾ ಗುಪ್ತಾ, ತಾವು ಮಾಡಿದ ಭ್ರಷ್ಟಾಚಾರ ಹಾಗೂ ದುಷ್ಕೃತ್ಯಗಳನ್ನು ಮರೆ ಮಾಡುವ ಸಲುವಾಗಿ ಅಂಬೇಡ್ಕರ್ ಹಾಗೂ ಭಗತ್ ಸಿಂಗ್ ಅವರ ಚಿತ್ರ ಹಾಕಿ ಜನರನ್ನು ಮೂರ್ಖರನ್ನಾಗಿ ಮಾಡುವ ತಂತ್ರ ಮಾಡಿತ್ತು ಎಂದು ಹೇಳಿದ್ದಾರೆ.
ದೆಹಲಿಯ ಖಜಾನೆ ಖಾಲಿ ಎಂದ ಸಿಎಂ ರೇಖಾ ಗುಪ್ತಾ, 'ನೆಪ ಹೇಳೋದು ಬಿಡಿ' ಎಂದು ತಿರುಗೇಟು ನೀಡಿದ ಆತಿಶಿ!
ಈಗಿರುವ ಸರ್ಕಾರದ ಮುಖ್ಯಸ್ಥರ ಫೋಟೋ ಹಾಕಬಾರದೇ? ದೇಶದ ರಾಷ್ಟ್ರಪತಿಗಳ ಫೋಟೋ ಹಾಕಬಾರದೇ? ರಾಷ್ಟ್ರಪಿತ ಗಾಂಧಿಯವರ ಫೋಟೋ ಹಾಕಬಾರದೇ? ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ದೇಶದ ಗೌರವಾನ್ವಿತ ವ್ಯಕ್ತಿಗಳು ಮತ್ತು ನಮ್ಮ ಮಾರ್ಗದರ್ಶಕರು. ಆದ್ದರಿಂದ, ಈ ಕೊಠಡಿ ದೆಹಲಿಯ ಮುಖ್ಯಮಂತ್ರಿಯವರಾಗಿದ್ದು, ಸರ್ಕಾರದ ಮುಖ್ಯಸ್ಥರಾಗಿ ನಾವು ಅವರಿಗೆ ಜಾಗ ನೀಡಿದ್ದೇವೆ. ಅವರಿಗೆ ಉತ್ತರಿಸುವುದು ನನ್ನ ಕೆಲಸವಲ್ಲ, ನಾನು ಜನರಿಗೆ ಉತ್ತರಿಸುತ್ತೇನೆ..' ಎಂದು ಹೇಳಿದ್ದಾರೆ.
ದೆಹಲಿ ನೂತನ ಸಿಎಂ ರೇಖಾ ಗುಪ್ತಾ ಹಳೇ 'ಗಲಾಟೆ' ವಿಡಿಯೋಗಳು ವೈರಲ್

