ದೆಹಲಿ ಅಬಕಾರಿ ಹಗರಣ ಸಂಬಂದ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧಿಸಿದ್ದಾರೆ. ಈ ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಾಳೆ ವಿಚಾರಣೆ ನಡೆಸಲಿದೆ. 

ನವದೆಹಲಿ(ಮಾ.26) ದೆಹಲಿ ಅಬಕಾರಿ ಹಗರಣ ತನಿಖೆ ಚುರುಕುಗೊಂಡಿದ್ದರೆ, ಇತ್ತ ಕಾನೂನು ಹೋರಾಟಗಳು ತೀವ್ರಗೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ರಾಜಕೀಯ ಕೋಲಾಹಲ ಸೃಷ್ಟಿಸಿದೆ. ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನಾಳೆ(ಮಾ.26) ವಿಚಾರಣೆ ನಡೆಸಲಿದೆ. ಜಸ್ಟೀಸ್ ಸ್ವರ್ಣ ಕಾಂತ ಶರ್ಮ 10.30ಕ್ಕೆ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. 

ಮಾರ್ಚ್ 21ರಂದು ದೆಹಲಿ ಅಬಕಾರಿ ನೀತಿ ಅಕ್ರಮಗಳ ತನಿಖೆ ನಡೆಸುತ್ತಿರುವ ಇಡಿ ಅದಿಕಾರಿಗಳು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ಇಡಿ ಅಧಿಕಾರಿಗಳ 9 ಸಮನ್ಸ್‌ಗೆ ಗೈರಾಗಿದ್ದ ಕೇಜ್ರಿವಾಲ್ ಮನೆ ಮೇಲೆ ರೇಡ್ ಮಾಡಿ ಇಡಿ ಅದಿಕಾರಿಗಳು ಕೇಜ್ರಿವಾಲ್ ಬಂಧಿಸಿದ್ದರು. ಕೇಜ್ರಿವಾಲ್ ಜೈಲಿನಿಂದಲೇ ಮುಖ್ಯಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಆಪ್ ಸ್ಪಷ್ಟನೆ ನೀಡಿದೆ. 

ಸ್ವಯಂ ಕೃತ್ಯವೇ ಕೇಜ್ರಿವಾಲ್‌ಗೆ ಮುಳುವು, ದೆಹಲಿ ಸಿಎಂ ಬಂಧನ ಕುರಿತು ಅಣ್ಣ ಹಜಾರೆ ಪ್ರತಿಕ್ರಿಯೆ!

ರೋಸ್ ಅವೆನ್ಯೂ ಕೋರ್ಟ್ ಕೇಜ್ರಿವಾಲ್ ಅವರನ್ನು ಮಾರ್ಚ್ 28ರ ವರೆಗೆ ಇಡಿ ಕಸ್ಟಡಿಗೆ ನೀಡಿದೆ. ಇದರ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರವಿಂದ್ ಕೇಜ್ರಿವಾಲ್ ಬಂಧನ ಕಾನೂನು ಬಾಹಿರವಾಗಿದೆ. ಹೀಗಾಗಿ ತಕ್ಷಣವೇ ಕೇಜ್ರಿವಾಲ್ ಬಿಡುಗಡಗೆ ಕೋರ್ಟ್ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಮಾರ್ಚ್ 27ರಂದು ವಿಚಾರಣೆ ನಡೆಸಲಿದೆ.

ನಾಳೆ ಕೇಜ್ರಿವಾಲ್ ಬಂಧನ ಕುರಿತು ಹೈಕೋರ್ಟ್ ಮಹತ್ವದ ಸೂಚನೆ ನೀಡಲಿದೆ. ಇದೀಗ ತೀವ್ರು ಕುತೂಹಲ ಕೆರಳಿಸಿದೆ. ಕಾರಣ ಆಪ್ ನಾಯಕರು ಇದು ಪ್ರಧಾನಿ ಮೋದಿಯ ಸರ್ವಾಧಿಕಾರಿ ಧೋರಣೆ ಎಂದು ಆರೋಪಿಸಿದೆ. ಲೋಕಸಭಾ ಚುನಾವಣೆಗೆ ವಿಪಕ್ಷ ನಾಯಕರನ್ನು ಜೈಲಿಗೆ ಕಳುಹಿಸುವ ರಾಜಕೀಯ ಷಡ್ಯಂತ್ರ ಎಂದು ಆಪ್ ಆರೋಪಿಸಿದೆ. ಹೀಗಾಗಿ ಹೈಕೋರ್ಟ್ ಆದೇಶ ತೀವ್ರ ಕುತೂಹಲ ಕೆರಳಿಲಿದೆ. ಕೇಜ್ರಿವಾಲ್ ಬಂಧನದಿಂದ ಮುಕ್ತಿಯಾಗುತ್ತಾರಾ ಅನ್ನೋ ಚರ್ಚೆಗಳು ಜೋರಾಗಿದೆ.

ದೆಹಲಿ ಸಿಎಂ ಸ್ಥಾನದಿಂದ ಅರವಿಂದ್‌ ಕೇಜ್ರಿವಾಲ್‌ ವಜಾ ಮಾಡಿ: ಹೈಕೋರ್ಟ್‌ಗೆ ಪಿಐಎಲ್‌ ಅರ್ಜಿ

ಜೈಲು ಪಾಲಾಗಿರುವ ಅರವಿಂದ್ ಕೇಜ್ರಿವಾಲ್ ಈಗಾಗಲೇ ಎರಡು ಸರ್ಕಾರಿ ಆದೇಶಗಳನ್ನು ಜೈಲಿನಿಂದಲೇ ಹೊರಡಿಸಿದ್ದಾರೆ. ಈ ಆದೇಶಗಳು ನಕಲಿ ಎಂದು ಬಿಜೆಪಿ ಆರೋಪಿಸಿದೆ. ಜೈಲಿನಿಂದ ಕಳುಹಿಸಿದ ಸಂದೇಶವನ್ನು ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ವಿಡಿಯೋ ಮೂಲಕ ನೀಡಿದ್ದಾರೆ. ಆದರೆ ಮುಖ್ಯಮಂತ್ರಿ ಕಚೇರಿಯಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂಬ ಆರೋಪಗಳು ಗಂಭೀರವಾಗಿ ಕೇಳಿಬಂದಿದೆ.