ಜೈಲಲ್ಲೆ ಸಿಸೋಡಿಯಾ ಹತ್ಯೆಯಾಗುವ ಸಾಧ್ಯತೆ, ಬಿಜೆಪಿ ವಿರುದ್ಧ ಗುಡುಗಿದ ಆಪ್!
ಅಬಕಾರಿ ನೀತಿ ಅಕ್ರಮದಲ್ಲಿ ಜೈಲು ಪಾಲಾಗಿರುವ ಆಪ್ ನಾಯಕ ಮನೀಶ್ ಸಿಸೋಡಿಯಾ ತಿಹಾರ್ ಜೈಲಿನಲ್ಲಿದ್ದಾರೆ. ಕ್ರಿಮಿನಲ್‌ಗಳಿರುವ ಕೊಠಡಿಯಲ್ಲೇ ಮನೀಶ್ ಸಿಸೋಡಿಯಾರನ್ನು ಹಾಕಲಾಗಿದೆ. ಇದು ಆಮ್ ಆದ್ಮಿಯನ್ನು ಕೆರಳಿಸಿದೆ. ಹೀಗಾಗಿ ಬಿಜೆಪಿ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿದೆ. ಆದರೆ ಆಪ್ ವಾಗ್ದಾಳಿ ಭರದಲ್ಲಿ ಇದೀಗ ಮನೀಶ್ ಸಿಸೋಡಿಯಾಗೆ ಭಯ ಶುರುವಾಗಿದೆ.
ನವದೆಹಲಿ(ಮಾ.08): ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಇದೀಗ ತಿಹಾರ್ ಜೈಲು ಪಾಲಾಗಿದ್ದಾರೆ. ಕೇಂದ್ರ ಬಿಜೆಪಿ ದ್ವೇಷದ ರಾಜಕಾರಣ ಮೂಲಕ ಸಿಸೋಡಿಯಾ ಬಂಧಿಸಿದೆ ಎಂದು ಹೇಳುತ್ತಲೇ ಬಂದಿದೆ.ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಆಮ್ ಆದ್ಮಿ ಪಾರ್ಟಿ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಆರೋಪವನ್ನು ಮಾಡಿದೆ. ಇದೀಗ ಆಪ್ ಹೊಸ ವಾಗ್ದಾಳಿಗೆ ಸ್ವತಃ ಆಪ್ ನಾಯಕ ಮನೀಶ್ ಸಿಸೋಡಿಯಾ ಬೆಚ್ಚಿ ಬಿದ್ದಿದ್ದಾರೆ. ತಿಹಾರ್ ಜೈಲಿನಲ್ಲಿ ಮನೀಶ್ ಸಿಸೋಡಿಯಾರನ್ನು ಕ್ರಿಮಿನಲ್‌ಗಳ ಜೊತೆ ಹಾಕಲಾಗಿದೆ. ಇದು ಆಪ್ ಕೆರಳಿಸಿದೆ. ಇದು ಬಿಜೆಪಿಯ ಷ್ಯಡ್ಯಂತ್ರ ಎಂದು ವಾಗ್ದಾಳಿ ನಡೆಸಿದೆ. ಇಷ್ಟೇ ಅಲ್ಲ ಸಿಸೋಡಿಯೋ ಸೆಲ್‌ನಲ್ಲಿರುವ ಕ್ರಿಮಿನಲ್‌ಗಳು ಆಕ್ರಮಣ ಮಾಡುವ ಸಾಧ್ಯತೆ ಇದೆ. ಮನೀಶ್ ಸಿಸೋಡಿಯಾ ಜೈಲಿನಲ್ಲೇ ಹತ್ಯೆಯಾಗುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಆದರೆ ಈ ಆರೋಪ ಬಿಜೆಪಿಗೆ ನಡುಕ ಹುಟ್ಟಿಸುವ ಬದಲು ಖುದ್ದು ಮನೀಶ್ ಸಿಸೋಡಿಯಾರನ್ನೇ ಬೆಚ್ಚಿ ಬೀಳಿಸಿದೆ.
ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಲು ಆಪ್ ರಾಷ್ಟ್ರೀಯ ವಕ್ತಾರ ಸೌರಬ್ ಭಾರದ್ವಾಜ್ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಬಿಜೆಪಿ ಉದ್ದೇಶಪೂರ್ವಕವಾಗಿ ಮನೀಶ್ ಸಿಸೋಡಿಯಾರನ್ನು ಕೈದಿಗಳ ಸೆಲ್‌ನಲ್ಲಿಟ್ಟಿದೆ. ಕೋರ್ಟ್‌ನಲ್ಲಿ ಸಿಸೋಡಿಯಾ ವಕೀಲರು ಪ್ರತ್ಯೇಕ ಸೆಲ್ ಮನವಿ ಮಾಡಿದ್ದರು. ಇದಕ್ಕೆ ಕೋರ್ಟ್ ಒಪ್ಪಿಕೊಂಡಿದೆ. ಆದರೆ ಕೇಂದ್ರ ಬಿಜೆಪಿ ಕುತಂತ್ರದಿಂದ ಮನೀಶ್ ಸಿಸೋಡಿಯಾ ಸೆಲ್ ಬದಲಾಗಿಲ್ಲ ಎಂದು ಆರೋಪಿಸಿದೆ.
ಜೈಲಿನಲ್ಲೂ ಮನೀಶ್ ಸಿಸೋಡಿಯಾಗೆ ನೆಮ್ಮದಿ ಇಲ್ಲ, ಸತತ 5 ಗಂಟೆ ಇಡಿ ವಿಚಾರಣೆ!
ದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್ ಜೊತೆ ಸಿಸಿಡೋಯರನ್ನು ಹಾಕಲಾಗಿದೆ. ಇದೀಗ ಆಪ್‌ಗೆ ಸಿಸೋಡಿಯಾ ಸುರಕ್ಷತೆ ಚಿಂತೆಯಾಗಿದೆ. ಜೈಲಿನ ಸೆಲ್‌ನಲ್ಲಿರುವ ಇತರ ಕೈದಿಗಳೇ ಮನೀಶ್ ಸಿಸೋಡಿಯರನ್ನ ಹತ್ಯೆ ಮಾಡುವ ಭೀತಿ ಎದುರಾಗಿದೆ. ಮೊದಲು ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಇದೀಗ ಮನೀಶ್ ಸಿಸೋಡಿಯಾರನ್ನು ಹೀಗೆ ಮಾಡಿದೆ. ಇದು ಬಿಜೆಪಿಯ ಕುತಂತ್ರ ಎಂದು ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಮನೀಶ್ ಸಿಸೋಡಿಯಾ ಪರ ಕೋರ್ಟ್ ನೀಡಿದ ತೀರ್ಪನ್ನು ಬಿಜೆಪಿ ಉಲ್ಲಂಘಿಸಿದೆ. ಪ್ರತ್ಯೇಕ ಕೊಠಡಿ ನೀಡಲು ಸೂಚಿಸಿದ್ದರು. ಬಿಜೆಪಿ ನೀಡುತ್ತಿಲ್ಲ ಎಂದು ಸೌರಬ್ ಭಾರದ್ವಾಜ್ ಹೇಳಿದ್ದಾರೆ.
ಮಾರ್ಚ್ 6ರಂದು ಮನೀಶ್ ಸಿಸೋಡಿಯಾ ಸಿಬಿಐ ಕಸ್ಟಡಿ ಅವಧಿ ಅಂತ್ಯವಾಗಿತ್ತು. ದಿಲ್ಲಿ ವಿಶೇಷ ಸಿಬಿಐ ಕೋರ್ಟ್‌ಗೆ ಹಾಜರುಪಡಿಸಿದ ಸಿಬಿಐ, ಮತ್ತೆ ವಶಕ್ಕೆ ಪಡೆಯುವುದಿಲ್ಲ ಎಂದಿತು. ಹೀಗಾಗಿ ಕೋರ್ಟ್ 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿತು ಹಾಗೂ ಭಗವದ್ಗೀತೆ, ಚಾಳೀಸು ಔಷಧಿ ಇರಿಸಿಕೊಳ್ಳಲು ಅನುಮತಿಸಿತು ಹಾಗೂ ವಿಪಶ್ಶನ ಧ್ಯಾನ ಮಾಡಲು ಅಸ್ತು ಎಂದಿತು. ಬಳಿಕ ಅವರನ್ನು ತಿಹಾರ ಜೈಲಿಗೆ ಕರೆತರಲಾಯಿತು. ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದೆ.
ಕೇಜ್ರಿವಾಲ್ ಸರ್ಕಾರದ 2 ವಿಕೆಟ್ ಪತನ, ಜೈಲು ಪಾಲಾಗಿರುವ ಸಿಸೋಡಿಯಾ, ಸತ್ಯೇಂದ್ರ ಜೈನ್ ರಾಜೀನಾಮೆ!
ಬಂಧನದ ಬೆನ್ನಲ್ಲೇ ಸಿಸೋಡಿಯಾ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಕದ ತಟ್ಟಿದ್ದರು. ಆದರೆ ಎರಡೂ ನ್ಯಾಯಾಲಯ ಸಿಸೋಡಿಯಾ ಜಾಮೀನು ಅರ್ಜಿ ತರಿಸ್ಕರಿಸಿತು.