ಕೇಜ್ರಿವಾಲ್ ಸರ್ಕಾರದ 2 ವಿಕೆಟ್ ಪತನ, ಜೈಲು ಪಾಲಾಗಿರುವ ಸಿಸೋಡಿಯಾ, ಸತ್ಯೇಂದ್ರ ಜೈನ್ ರಾಜೀನಾಮೆ!

ಆಮ್ ಆದ್ಮಿ ಸರ್ಕಾರಕ್ಕೆ ಒಂದರ ಮೇಲೊಂದರಂತೆ ಹೊಡತೆ ಬೀಳುತ್ತಿದೆ. ಪ್ರತಿ ಹೊಡೆತದಿಂದ ಮೇಲೆಳಲು ಸಾಧ್ಯವಾಗದ ಪರದಾಡುತ್ತಿದೆ. ಮನೀಶ್ ಸಿಸೋಡಿಯಾ ಬಂಧನ ಆಪ್‌ಗೆ ತೀವ್ರ ಮುಖಭಂಗ ತಂದಿದೆ. ಇದರ ಬೆನ್ನಲ್ಲಿ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಇದೀಗ ಅರವಿಂದ್ ಕೇಜ್ರಿವಾಲ್ ಸಂಪುಟದಿಂದ ಜೈಲುಪಾಲದ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ.
 

Big set back for AAP Arrested Delhi DCM Manish sisodia and minister Satyendar Jain resign from Arvind Kerjriwal cabinet ckm

ನವದೆಹಲಿ(ಫೆ.28): ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರಕ್ಕೆ ಮತ್ತೊಂದು ಆಘಾತ ಎದುರಾಗಿದೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಈಗಾಗಲೇ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲುಪಾಲಾಗಿದ್ದಾರೆ.ಸಿಸೋಡಿಯಾ ಬಂಧನ ವಿರೋಧಿಸಿ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿದೆ. ಕೋರ್ಟ್ ಆಪ್ ಪ್ರಯತ್ನಕ್ಕೆ ಯಾವುದೇ ಸೊಪ್ಪು ಹಾಕಿಲ್ಲ.ಈ ಬೆಳವಣಿಗೆ ಬೆನ್ನಲ್ಲೇ ಆಮ್ ಆದ್ಮಿ ಸರ್ಕಾರದ ಜೈಲುಪಾಲಾಗಿರುವ ಇಬ್ಬರು ಸಚಿವರಾದ ಮನೀಶ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ಮನೀಶ್ ಸಿಸೋಡಿಯಾ ಭಾನುವಾರ(ಫೆ.26) ರಂದು ಸಿಬಿಬಿಐ ಅಧಿಕಾರಿಗಳು ಬಂಧಿಸಿದ್ದರು. ಇದಾದ ಎರಡೇ ದಿನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆಧರೆ ಮತ್ತೊರ್ವ ಸಚಿವ ಸತ್ಯೇಂದ್ರ ಜೈನ್ ಸರಿಸುಮಾರು ಒಂದು ವರ್ಷದಿಂದ ಜೈಲಿನಲ್ಲಿದ್ದರೂ ರಾಜೀನಾಮೆ ನೀಡಿರಲಿಲ್ಲ. ಇದೀಗ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಇಬ್ಬರು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅರವಿಂದ್ ಕೇಜ್ರಿವಾಲ್ ಸಂಪುಟದಿಂದ ಎರಡು ವಿಕೆಟ್ ಪತನಗೊಂಡಿದೆ.

ಮನೀಶ್ ಸಿಸೋಡಿಯಾ ದೆಹಲಿಯ 33 ಇಲಾಖೆಗಳ ಪೈಕಿ 18 ಇಲಾಖೆ ಜವಾಬ್ದಾರಿ ಹೊಂದಿದ್ದರು. ಇದೀಗ ಇಬ್ಬರ ರಾಜೀನಾಮೆಯನ್ನು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಾರ್ಟಿ ಮಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅಂಗೀಕರಿಸಿದ್ದಾರೆ. ಇಬ್ಬರು ಸ್ಥಾನಕ್ಕೆ ಇದೀಗ ಹೊಸ ನಾಯಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮನೀಶ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಅವರಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ಕೈಲಾಶ್ ಗಹ್ಲೋಟ್ ಹಾಗೂ ರಾಜ್ ಕುಮಾರ್ ಆನಂದ್ ಜವಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ. 

Delhi excise policy case ಆಪ್‌ಗೆ ತೀವ್ರ ಹಿನ್ನಡೆ, ಬಂಧಿತ ಮನೀಶ್ ಸಿಸೋಡಿಯಾರನ್ನು ಸಿಬಿಐ ವಶಕ್ಕೆ ನೀಡಿದ ಕೋರ್ಟ್!

ಸಿಸೋಡಿಯಾ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ದಿಲ್ಲಿ ಅಬಕಾರಿ ಹಗರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ನಿರ್ಗಮಿತ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಚ್‌ ಮಂಗಳವಾರ ನಿರಾಕರಿಸಿದೆ. ಇದರ ಬದಲು ದಿಲ್ಲಿ ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಲು ಸೂಚಿಸಿದೆ. ಇದರಿಮದ ಅವರಿಗೆ ದೊಡ್ಡ ಹಿನ್ನಡೆ ಆಗಿದೆ.ಈ ಪ್ರಕರಣದಲ್ಲಿ ಭಾನುವಾರ ಬಂಧಿಸಲ್ಪಟ್ಟಸಿಸೋಡಿಯಾ ಅವರನ್ನು ವಿಶೇಷ ನ್ಯಾಯಾಲಯ 5 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿತ್ತು. ಇದಾದ ಬಳಿಕ ಸಿಸೋಡಿಯಾ ಜಾಮೀನು ಕೋರಿ ಸುಪ್ರೀಂ ಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು.

ಮನೀಶ್ ಸಿಸೋಡಿಯಾ ಬಂಧನ ವಿರೋಧಿಸಿ ದೇಶಾದ್ಯಂತ ಆಪ್ ಪ್ರತಿಭಟನೆ!

ಸಿಸೋಡಿಯಾ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎ.ಎಂ ಸಿಂಘ್ವಿ, ಅಬಕಾರಿ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಬಂಧಿಸಿರುವುದು ವಿಚಿತ್ರವಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ ಯಾವುದೇ ಹಣವನ್ನು ವಶಪಡಿಸಿಕೊಂಡಿಲ್ಲ ಎಂದು ಕೋರ್ಚ್‌ ಹೇಳಿದರು. ಈ ವೇಳೆ ಮುಖ್ಯ ನ್ಯಾ ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾಪಿ.ಎಸ್‌.ನರಸಿಂಹ ಅವರಿದ್ದ ಪೀಠ, ‘ಈ ಪ್ರಕರಣಕ್ಕೆ ಪರಿಹಾರವನ್ನು ಸ್ಥಳೀಯ ನ್ಯಾಯಾಲಯದಲ್ಲೇ ಕೇಳಬಹುದು ಅಥವಾ ದೆಹಲಿ ಹೈ ಕೋರ್ಚ್‌ ಮೊರೆ ಹೋಗಬಹುದು. ಸುಪ್ರೀಂ ಕೋರ್ಚ್‌ ದಿಲ್ಲಿಯಲ್ಲಿದೆ ಎಂದ ಮಾತ್ರಕ್ಕೆ ಅವರು ನೇರವಾಗಿ ಇಲ್ಲಿಗೆ ಬರುವುದು ತಪ್ಪು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸುವುದು ಕೆಟ್ಟಪರಂಪರೆಗೆ ನಾಂದಿ ಹಾಡುತ್ತದೆ’ ಎಂದು ಹೇಳಿತು.
 

Latest Videos
Follow Us:
Download App:
  • android
  • ios