ನವದೆಹಲಿ[ಫೆ.18]: ಎಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸೋಮವಾರದಂದು ಜಾರಿಗೊಳಿಸಿದ ವರದಿಯನ್ವಯ ಆಮ್ ಆದ್ಮಿ ಸರ್ಕಾರದ ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಎಲ್ಲರಿಗಿಂತ ಶ್ರೀಮಂತ ಸಚಿವರು. ADR ನೀಡಿರುವ ಹೇಳಿಕೆಯೊಂದರಲ್ಲಿ ಡೆಲ್ಲಿ ಎಲೆಕ್ಷನ್ ವಾಚ್ ಹಾಗೂ ಎಡಿಆರ್ ಸಿಎಂ ಅರವಿಂದ ಕೇಜ್ರೀವಾಲ್ ಸೇರಿದಂತೆ ಪಕ್ಷದ ಎಲ್ಲಾ ಏಳು ನಾಯಕರ ಅಫಿಡವಿಟ್ ವಿಶ್ಲೇಷಿಸಿದ್ದಾರೆ. 

ಈ ಅಫಿಡವಿಟ್ ನಲ್ಲಿ ನೀಡಿರುವ ಮಾಹಿತಿಯಂತೆ ಎಲ್ಲರಿಗಿಂತ ಕಡಿಮೆ ಆಸ್ತಿ ಹೊಂದಿರುವ ಮಂತ್ರಿ ಗೋಪಾಲ್ ರಾಯ್ ಆಗಿದ್ದಾರೆ. ಇವರ ಆಸ್ತಿ 90.01 ಲಕ್ಷ ರೂಪಾಯಿ ಆಗಿದೆ. ಇನ್ನು ಅತ್ಯಂತ ಶ್ರೀಮಂತ ಸಚಿವ 46.07ಕೋಟಿ ರೂಪಾಯಿ ಆಸ್ತಿ ಇರುವ ಕೈಲಾಶ್ ಗೆಹ್ಲೋಟ್ ಆಗಿದ್ದಾರೆ. 

Photos| ಕೇಜ್ರಿ ಮಂತ್ರಿಗಳೆಷ್ಟು ಓದಿದ್ದಾರೆ: ದೆಹಲಿ ಜನರಷ್ಟೇ ಅವರೂ ಜಾಣರಿದ್ದಾರೆ!

ದೆಹಲಿ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿರುವ ಕೈಲಾಶ್ ಗೆಹ್ಲೋಟ್ LLB ಪದವೀಧರರು. ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೂ ಮೊದಲು ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ನಜಫ್ಘಡ್ ಕ್ಷೇತ್ರದಿಂದ ಬಿಜೆಪಿಯ ಅಜಿತ್ ಸಿಂಗ್ ಖರ್ಖರಿಯನ್ನು ಭಾರೀ ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಕಳೆದ ಅವಧಿಯಲ್ಲಿ ಅವರು ಸಾರಿಗೆ ಹಾಗೂ ಪರಿಸರ ಸಚಿವರಾಗಿದ್ದರು. 

ಇದನ್ನು ಹೊರತುಪಡಿಸಿ ಆದಾಯ, ಕಾನೂನು ಮೊದಲಾದ ಖಾತೆಗಳನ್ನೂ ನಿರ್ವಹಿಸಿದ್ದಾರೆ. ದೆಹಲಿ ವಾಯು ಮಾಲಿನ್ಯ ಶೇ. 25ರಷ್ಟು ಕಡಿಮೆಗೊಳಿಸಿದ ಹಾಗೂ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಗೊಳಿಸಿದ ಶ್ರೇಯಸ್ಸು ಕೈಲಾಶ್ ರಿಗೆ ಸಲ್ಲುತ್ತದೆ. 

ಕೇಜ್ರಿವಾಲ್‌ ಖಾತೆ ರಹಿತ ಮುಖ್ಯಮಂತ್ರಿ!