Breaking: ಅರವಿಂದ್ ಕೇಜ್ರಿವಾಲ್‌ಗೆ ನೀಡಿದ ಜಾಮೀನು ರದ್ದು ಮಾಡಿದ ಹೈಕೋರ್ಟ್!
ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ರೋಸ್ ಅವೆನ್ಯೂ ಕೋರ್ಟ್ ನೀಡಿದ್ದ ಜಾಮೀನನ್ನು ದೆಹಲಿ ಹೈಕೋರ್ಟ್ ಮಂಗಳವಾರ ರದ್ದು ಮಾಡಿ ಅದೇಶ ಹೊರಡಿಸಿದೆ/
ನವದೆಹಲಿ (ಜೂ.25): ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ನಿರಾಸೆಯಾಗಿದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಮಂಗಳವಾರ ದೆಹಲಿ ಹೈಕೋರ್ಟ್ ರದ್ದು ಮಾಡಿದೆ. ಇದರಿಂದಾಗಿ, ಅರವಿಂದ್ ಕೇಜ್ರಿವಾಲ್ ಇನ್ನೂ ಕೆಲ ದಿನಗಳ ಕಾಲ ತಿಹಾರ್ ಜೈಲಿನಲ್ಲಿಯೇ ಉಳಿಯಬೇಕಾಗಿದೆ.ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ನೀಡಬಾರದು ಎನ್ನುವ ಉದ್ದೇಶದಲ್ಲಿ ಇಡಿ ಸಲ್ಲಿಕೆ ಮಾಡಿರುವ ವಿವರವಾದ ದಾಖಲಾತಿಯನ್ನು ವಿಚಾರಣಾ ಕೋರ್ಟ್ ಪರಿಗಣನೆಗೆ ಮಾಡಿಕೊಳ್ಳಬೇಕಿತ್ತು. ಅದನ್ನು ಪರಿಗಣನೆ ಮಾಡದೇ ಜಾಮೀನು ನೀಡಿರುವುದು ತಪ್ಪು ಎಂದು ಕೋರ್ಟ್ ಹೇಳಿದೆ. ಈಗ ರದ್ದುಗೊಂಡಿರುವ ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನನ್ನು ದೆಹಲಿ ಹೈಕೋರ್ಟ್ ಮಂಗಳವಾರ ಮತ್ತೆ ತಡೆಹಿಡಿದಿದೆ, ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಿದ ವಿಚಾರಗಳನ್ನು ಪರಿಗಣಿಸಲಾಗಿಲ್ಲ ಮತ್ತು ತಪ್ಪಾಗಿದೆ ಎಂದು ಹೇಳಿದೆ. ಆದೇಶವನ್ನು ಪ್ರಕಟಿಸಿದ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್, ಕೇಜ್ರಿವಾಲ್ ಅವರ ಮೇಲಿನ ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶವನ್ನು ಪ್ರಶ್ನಿಸುವ ಬಗ್ಗೆ ಇಡಿ ವಾದಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸರಿಯಾದ ಪರಿಗಣನೆಯ ಅಗತ್ಯವಿದೆ ಎಂದು ಹೇಳಿದರು.
ಅರವಿಂದ್ ಕೇಜ್ರಿವಾಲ್‌ಗೆ ಜಾಮೀನಿಗೆ ತಡೆ ನೀಡಿದ ದೆಹಲಿ ಹೈಕೋರ್ಟ್!
"ಟ್ರಯಲ್ ಕೋರ್ಟ್ ಯಾವುದೇ ತೀರ್ಮಾನವನ್ನು ನೀಡಬಾರದು, ಇದು ಹೈಕೋರ್ಟ್ ತೀರ್ಮಾನಕ್ಕೆ ವಿರುದ್ಧವಾಗಿದೆ. ದಾಖಲೆಗಳು ಮತ್ತು ವಾದಗಳನ್ನು ಸರಿಯಾಗಿ ಪರಿಶೀಲನೆ ಮಾಡಲಾಗಿಲ್ಲ," ಎಂದು ಪೀಠ ಹೇಳಿದೆ. "ಒಮ್ಮೆ ಅವರ ಬಂಧನವನ್ನು ಪ್ರಶ್ನಿಸುವ ಅವರ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದರೆ, ಕಾನೂನು ಉಲ್ಲಂಘಿಸಿ ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದೆ ಎಂದು ಹೇಳಲಾಗುವುದಿಲ್ಲ" ಎಂದು ಅದು ಹೇಳಿದೆ, ನ್ಯಾಯಾಲಯವು ಕೇಜ್ರಿವಾಲ್ ಮತ್ತು ಇಡಿ ಪರ ವಕೀಲರ ವಾದಗಳನ್ನು ಪರಿಗಣಿಸಿದೆ.
ಅಬಕಾರಿ ಕಾಯ್ದೆ ಹಗರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು: ನಾಳೆ ಜೈಲಿನಿಂದ ಬಿಡುಗಡೆ